ಆಮ್ ಆದ್ಮಿ ಅರವಿಂದ ಕೇಜ್ರಿವಾಲ್ ದಂಪತಿ ಆಸ್ತಿ ಪ್ರಕಟ

Posted By:
Subscribe to Oneindia Kannada

ವಾರಣಾಸಿ, ಏ.24: ಹಾಲಿ ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ಇಂದು ಶುರುವಾಗಿದೆ. ಈ ಮಧ್ಯೆ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಸೋಲಿಸಬೇಕೆಂದು ಪಣತೊಟ್ಟು ಉತ್ತರ ಪ್ರದೇಶದ ವಾರಣಾಸಿಯಿಂದ ಕಣಕ್ಕಿಳಿದಿರುವ ಆಮ್ ಆದ್ಮಿ ಪಕ್ಷದ ನಾಯಕ, ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನಿನ್ನೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

ಆದರೆ ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಕೇವಲ 500 ರೂಪಾಯಿ ಇದೆ. ನಾನೊಬ್ಬ ಫಕೀರ. ಚುನಾವಣೆಯಲ್ಲಿ ಸ್ಪರ್ಧಿಸಲು ನನ್ನಲ್ಲಿ ಹಣವಿಲ್ಲ ಅಂತೇನೋ ಹೇಳಿದ್ದ ಅರವಿಂದ ಕೇಜ್ರಿವಾಲ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಮ್ಮ ಬಳಿ 2.14 ಕೋಟಿ ರೂ ಆಸ್ತಿ ಪಾಸ್ತಿ ಇದೆಯೆಂದು ಘೋಷಿಸಿದ್ದಾರೆ. ತಮ್ಮ ಹಾಗೂ ತಮ್ಮ ಪತ್ನಿಯ ಹೆಸರಿನಲ್ಲಿ ಒಟ್ಟು 2.14 ಕೋಟಿ ರೂ ಆಸ್ತಿಯಿದೆ ಎಂದು ಅವರು ದಾಖಲಿಸಿದ್ದಾರೆ.(ಮೋದಿ ಚರಾಸ್ತಿ ಸ್ಥಿರಾಸ್ತಿ ವಿವರವೂ ಲಭ್ಯವಾಗಿದೆ)

varanasi-arvind-kejriwal-couple-declare-assets-worth-rs-2-point-14-cr

ಅಂದರೆ 'ಆಮ್ ಆದ್ಮಿ' ಅರವಿಂದ ಕೇಜ್ರಿವಾಲ್ ಆಸ್ತಿ ನರೇಂದ್ರ ಮೋದಿಗಿಂತಲೂ ಹೆಚ್ಚಿದೆ. ಇತ್ತೀಚೆಗೆ ವಡೋದರಾ ಕ್ಷೇತ್ರದಿಂದ ಸ್ಪರ್ಧಿಸಬಯಸಿ ಮೋದಿ ನಾಮಪತ್ರ ಸಲ್ಲಿಸುವಾಗ ತಮ್ಮ ಬಳಿ 1.50 ಕೋಟಿ ರೂ ಆಸ್ತಿ ಪಾಸ್ತಿ ಇದೆಯೆಂದು ಘೋಷಿಸಿದ್ದರು. ಅಂದಹಾಗೆ ಮೋದಿ ವಾರಣಾಸಿ ಚುನಾವಣೆಗೆ ಇನ್ನಷ್ಟೇ ನಾಮಪತ್ರ ಸಲ್ಲಿಸಬೇಕಿದೆ. ಜತೆಗೆ, ತಮ್ಮ ವಿರುದ್ಧ ದೇಶದ ವಿವಿಧ ಕೋರ್ಟುಗಳಲ್ಲಿ 6 ಪ್ರಕರಣಗಳಿವೆ ಎಂದೂ ಅವರು ಅಫಿಡವಿಟ್ ನಲ್ಲಿ ನಮೂದಿಸಿದ್ದಾರೆ.

ಕೇಜ್ರಿವಾಲ್ ದಂಪತಿಯ ಆಸ್ತಿ ವಿವರ ಹೀಗಿದೆ:
ಅರವಿಂದ ಕೇಜ್ರಿವಾಲ್ ಅವರು ಹರ್ಯಾಣ ಮತ್ತು ಗಾಜಿಯಾಬಾದ್‌ ನಲ್ಲಿ ಎರಡು ಫ್ಲ್ಯಾಟ್‌ ಗಳನ್ನು ಹೊಂದಿದ್ದಾರೆ. ಅವರ ಹೆಸರಿನಲ್ಲಿ 4.25 ಲಕ್ಷ ಮೌಲ್ಯದ ಚರ ಆಸ್ತಿಯಿದ್ದರೆ, ಪತ್ನಿ ಸುನೀತಾರ ಹೆಸರಿನಲ್ಲಿ 17.41 ಲಕ್ಷ ಮೌಲ್ಯದ ಚರಾಸ್ತಿಯಿದೆ. ತಮ್ಮ ಕೈಯಲ್ಲಿ 15 ಸಾವಿರ ನಗದು ಇದ್ದು, ಪತ್ನಿಯ ಬಳಿ 10 ಸಾವಿರ ನಗದು ಇರುವುದಾಗಿಯೂ ಅವರು ಅಫಿಡವಿಟ್‌ ನಲ್ಲಿ ತಿಳಿಸಿದ್ದಾರೆ.

ಗಮನಾರ್ಹವೆಂದರೆ ದಿಲ್ಲಿ ಅಸೆಂಬ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ 23,550 ರೂ. ವಿದ್ಯುತ್ ಬಿಲ್ ಬಾಕಿಯಿರುವುದಾಗಿ ಹೇಳಿದ್ದ ಅರವಿಂದ ಕೇಜ್ರಿವಾಲ್ ಆ ಬಿಲ್ ಚುಕ್ತಾ ಮಾಡಿರುವುದಾಗಿ ತಿಳಿಸಿದ್ದಾರೆ. ಇನ್ನು ಪತ್ನಿ ಸುನೀತಾ ಅವರು 41 ಲಕ್ಷ ರೂ ಬ್ಯಾಂಕ್ ಸಾಲ ತೀರಿಸಬೇಕಿದೆ. 2012-13ನೇ ಸಾಲಿನಲ್ಲಿ ಅರವಿಂದ ಕೇಜ್ರಿವಾಲ್ ಆದಾಯ 2,05,600 ರೂ. ಮತ್ತು ಪತ್ನಿ ಸುನೀತಾರ ಆದಾಯ 9,84,570 ರೂ. ನಷ್ಟಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Varanasi Arvind Kejriwal couple declare assets worth Rs. 2.14 crore. Aam Aadmi Party leader Arvind Kejriwal today declared movable and immovable assets worth Rs. 2.14 crore belonging to him and his wife. The AAP leader in the affidavit said he has two flats - one at Indirapuram, Ghaziabad and another at Shivani in Haryana. The value of the flat at Indirapuram has been put at Rs. 55 lakh while the flat at Shivani is worth Rs. 37 lakh.
Please Wait while comments are loading...