Get Updates
Get notified of breaking news, exclusive insights, and must-see stories!

Vande Bharat Express: ವಂದೇ ಭಾರತ್‌ನಲ್ಲಿ ಕೊಡ್ತಿರೋ ಊಟ ಸರಿಯಿಲ್ಲ: ಪ್ರಯಾಣಿಕರ ಆಕ್ರೋಶಕ್ಕೆ ಮಣಿದ ರೈಲ್ವೆ ಇಲಾಖೆ

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ಇದೀಗ ತಾನು ನೀಡುವ ಆಹಾರದಿಂದ ಸುದ್ದಿಯಾಗಿದೆ. ವಂದೇ ಭಾರತ್ ರೈಲಿನಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಎಕ್ಸ್‌ನಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಐಆರ್‌ಸಿಟಿ, ರೈಲ್ವೆ ಇಲಾಖೆಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ಇದಕ್ಕೆ ರೈಲ್ವೆ ಇಲಾಖೆ ಮಣಿದಿದೆ.

ಭಾರತಾದ್ಯಂತ ಸುಮಾರು 150ಕ್ಕೂ ಅಧಿಕ ವಂದೇ ಭಾರತ್ ರೈಲುಗಳು ನಿತ್ಯ ನೂರಾರು ಮಾರ್ಗಗಳಲ್ಲಿ ಸೇವೆ ನೀಡುತ್ತಿವೆ. ಇದರಲ್ಲಿ ಸಸ್ಯಹಾರ ಊಟ ನೀಡಲಾಗುತ್ತಿದೆ. ಅದು ಕಳಪೆ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ಮಧ್ಯೆ ಶೀಘ್ರವೇ ಮೊದಲ ಸ್ಲೀಪರ್ ವಂದೇ ಭಾರತ್ ರೈಲಿನಲ್ಲಿ (Vande Bharat Express Sleeper) ಮಾಂಸಾಹಾರ ನೀಡಲು (Non Veg Meal) ಇಲಾಖೆ ಸಿದ್ಧತೆ ನಡೆಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Vande Bharat Food Row IRCTC to Revise Menu After Received Many Complaints and Passenger Backlash

ಹಾಲಿ ವಂದೇ ಭಾರತ್ ರೈಲುಗಳಲ್ಲಿ ನೀಡಲಾಗುತ್ತಿರುವ ಸಸ್ಯಾಹಾರ ಊಟ/ಆಹಾರವು ಕಳಪೆ ಆಗಿದೆ ಎಂದು ಪ್ರಯಾಣಿಕರು ಬೇಸರ ಹೊರ ಹಾಕಿದ್ದಾರೆ. ಪ್ರಯಾಣಿಕರ ಆಕ್ರೋಶಕ್ಕೆ ಮಣಿದಿರುವ ರೈಲ್ವೆ ಇಲಾಖೆಯು, ಆಹಾರ ಮೆನು ಪರಿಷ್ಕರಣೆ ಮಾಡಲಾಗಿದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

IRCTC ಗುತ್ತಿಗೆದಾರರ ಭ್ರಷ್ಟರು, ಕ್ರಮ ಕೈಗೊಳ್ಳಿ

ಐಆರ್‌ಸಿಟಿಸಿ ಯಲ್ಲಿ ಬಹುತೇಕ ಅಧಿಕಾರಿಗಳು ಭ್ರಷ್ಟರಾಗಿದ್ದಾರೆ. ಅದಕ್ಕಾಗಿಯೇ ಇಂತಹ ಗುಣಮಟ್ಟ ಅಲ್ಲದ ಆಹಾರವನ್ನು ಪ್ರಯಾಣಿಕರಿಗೆ ನೀಡಲಾಗುತ್ತಿದೆ. ರೈಲ್ವೆ ಸಚಿವರು ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ವಂದೇ ಭಾರತ್ ರೈಲಿನಲ್ಲಿ ನೀಡುವ ಆಹಾರದ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಪ್ರಯಾಣಿಕರಾದ ಸಿ.ನರೇಂದ್ರ ಕುಮಾರ್ ಎಂಬುವವರು ದೂರಿದ್ದಾರೆ. ಜೊತೆಗೆ ಕಳಪೆ ಗುಣಮಟ್ಟದ ಆಹಾರ ನೀಡಿದ ಗುತ್ತಿಗೆದಾರರನ್ನು ತೆಗೆದು ಹಾಕಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ರೈಲಲ್ಲಿ ಸ್ಥಳೀಯ ಪಾಕಪದ್ಧತಿಗೆ ಆದ್ಯತೆ

ಇದಕ್ಕೆ ಪ್ರತಿಕ್ರಿಯಿಸಿರುವ ರೈಲ್ವೆ ಇಲಾಖೆಯು/ಐಆರ್‌ಸಿಟಿಸಿಯು ವಂದೇ ಭಾರತ್ ರೈಲಿನಲ್ಲಿ ನೀಡಲಾಗುತ್ತಿರುವ ಆಹಾರದ ಮೆನುವಿನಲ್ಲಿ ಸ್ಥಳೀಯ ಪಾಕಪದ್ಧತಿ ಸೇರ್ಪಡೆ ಮಾಡುತ್ತಿದ್ದೇವೆ. ಜನವರಿ 22 ರಂದು ಆಹಾರ ಬಗ್ಗೆ ಒಂದಷ್ಟು ದೂರುಗಳನ್ನು ಸ್ವೀಕರಿಸಿದ ನಂತರ, ಅಸ್ಸಾಮಿ ಶೈಲಿಯ ದಾಲ್ ಆಹಾರವು ಕಟು ರುಚಿ ಹೊಂದಿದ್ದರಿಂದ ಅದನ್ನು ಮೆನುವಿನಿಂದ ಕೈ ಬಿಡಲಾಗಿದೆ. ಅದನ್ನು ಪ್ರಯಾಣಿಕರಿಗೆ ನೀಡುತ್ತಿಲ್ಲ. ಅದರ ಬದಲಾಗಿ ಪರ್ಯಾಯ ಊಟ ಒದಗಿಸುತ್ತಿದ್ದೇವೆ. ಜೊತೆಗೆ ಆಹಾರದ ಮೆನು ಪರಿಷ್ಕರಣೆ ಮಾಡಿದ್ದು, ಪ್ರಯಾಣಿಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಯಾಣಿಕರಿಗೆ ಅತ್ಯುತ್ತಮ ಆಹಾರ ನೀಡಲು ನಾವು ಸದಾ ಬದ್ಧವಾಗಿದ್ದೇವೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಮೊದಲು ಚಹಾ ಬದಲಾಯಿಸಿ!

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿರುವ ಪ್ರಯಾಣಿಕರು, 'ನೀವು ವಂದೇ ಭಾರತ್‌ನಲ್ಲಿ ಏನನ್ನಾದರು ಸರಿಪಡಿಸಲು ಬಯಸಿದರೆ ಮೊದಲು ನೀಡುವ ಆಹಾರ ಸರಿಪಡಿಸಿ. ಇಲ್ಲದಿದ್ದರೆ ಇಂತಹ ಆಹಾರ ಪದಾರ್ಥವನ್ನು ಪ್ರಯಾಣಿಕರಿಗೆ ನೀಡಬೇಡಿ. ಇವು ಭಯಾನಕ ಉಪಹಾರಗಳು ಎಂದು ಹೇಳಿರುವ ಪ್ರಯಾಣಿಕರು, ಹಾಲಿನ ಪುಡಿ ಬೆರೆಸಿ ಚಹಾ ಜೊತೆಗೆ ಯಂತ್ರದಿಂದ ತಯಾರಿಸಿದ ಚಹಾವನ್ನು ದಯವಿಟ್ಟು ಬದಲಾಯಿಸಿ ಎಂದು ಕೋರಿದ್ದಾರೆ.

ತೀವ್ರ ಬೇಸರ ವ್ಯಕ್ತಪಡಿಸಿರುವ ಮತ್ತೊಬ್ಬ ಪ್ರಯಾಣಿಕರಾದ ಸಂಜಯ್ ತಿವಾರಿ ಎಂಬುವವರು, ವಂದೇ ಭಾರತ್ ರೈಲಿನ ಆಹಾರದ ಗುಣಮಟ್ಟ ತುಂಬಾ ಕಳಪೆಯಾಗಿದೆ ಎಂದು ಅವರು ಪ್ರಯಾಣಿಸಿದ ದಿನಾಂಕ (23/01/2026) ಹಾಗೂ ಪಿಎನ್‌ಆರ್ ಸಂಖ್ಯೆ (PNR:- 6163331779) ನಮೂದಿಸಿ ಸಾಕ್ಷಿ ಸಮೇತ ದೂರು ನೀಡಿದ್ದಾರೆ. ಸಸ್ಯಾಹಾರಿ ಊಟ ನೀಡಲಾಗಿತ್ತು. ಅದರಲ್ಲಿ ಪನೀರ್ ಕರುಣಾಜನಕವಾಗಿತ್ತು ಎಂದಿದ್ದಾರೆ.

ಇವರ ಈ ದೂರಿಗೂ ಪ್ರತಿಕ್ರಿಯಿಸಿರುವ ಐಆರ್‌ಸಿಟಿಸಿ ಅಧಿಕಾರಿಗಳು ಅಗತ್ಯ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗೆ ತಿಳಿಸಲಾಗಿದೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ಡಿಎಂ ಮಾಡಿ ಮಾಹಿತಿ ಹಂಚಿಕೊಳ್ಳುವಂತೆ ತಿಳಿಸಿದ್ದಾರೆ. ಪ್ರಯಾಣಿಕರು ಅಧಿಕಾರಿಗಳು ಕೋರಿದಂತೆ ಎಲ್ಲ ಮಾಹಿತಿ ಡಿಎಂ ಮಾಡಿರುವುದಾಗಿ ಪ್ರತ್ಯುತ್ತರ ನೀಡಿದ್ದಾರೆ.

ಸ್ಲೀಪರ್ ವಿಬಿ ರೈಲಿನಲ್ಲಿ ಶೀಘ್ರವೇ ಮಾಂಸಹಾರ ವಿತರಣೆ

ಈ ಹಿಂದೆ ವಂದೇ ಭಾರತ್ ರೈಲಿನ ಆಹಾರದಲ್ಲಿ ಜಿರಳೆ ಪತ್ತೆ, ಹಲ್ಲಿ ಪತ್ತೆ ವಿಚಾರಗಳು ಹೆಚ್ಚಾಗಿದ್ದವು. ಇದೀಗ ಆಹಾರವೇ ಕಳಪೆ ಆಗಿದೆ. ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ಇದರ ನಡುವೆ ರೈಲ್ವೆ ಇಲಾಖೆಯು ಹೌರಾ ಮತ್ತು ಕಾಮಾಕ್ಯ ನಡುವೆ ಸಂಚರಿಸುವ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಸಸ್ಯಾಹಾರ ಜೊತೆಗೆ ಬಾರಿಗೆ ಮಾಂಸಾಹಾರ ನೀಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಶೀಘ್ರವೇ ನಾನ್ ವೆಜ್ ವಿತರಣೆ ಜಾರಿಗೆ ಬರಲಿದೆ ಎಂದು ಪೂರ್ವ ರೈಲ್ವೆ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ. ವೆಜ್‌ ವಿತರಣೆಯಲ್ಲಿ ಲೋಪದೋಷವಾಗಿದೆ. ಇನ್ನೂ ಮಾಂಸಾಹಾರ ವಿತರಣೆ ಆರಂಭವಾದರೆ ಹೇಗೋ? ಎಂಬ ಚಿಂತೆಯೂ ಪ್ರಯಾಣಿಕರಲ್ಲಿದೆ. ಅದರಲ್ಲಿಯೂ ಗುಣಮಟ್ಟ ಕಾಯ್ದುಕೊಳ್ಳವುಂತೆ ಆಗ್ರಹಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+