Vande Bharat: ಟಿಕೆಟ್ ಇಲ್ಲದೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣ, ಸಿಕ್ಕಿಬಿದ್ದ ವ್ಯಕ್ತಿ: ನೀವು ಹೀಗೆ ಮಾಡ್ಬಿಟ್ಟೀರಾ ಜೋಕೆ..!
ಹೈದರಾಬಾದ್ ಆಗಸ್ಟ್ 10: ಟಿಕೆಟ್ ಇಲ್ಲದೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಧೂಮಪಾನ ಮಾಡಿ ಸಿಕ್ಕಿ ಬಿದ್ದ ಘಟನೆ ನಡೆದಿದೆ. ಆಂಧ್ರಪ್ರದೇಶದ ತಿರುಪತಿಯಿಂದ ಸಿಕಂದರಾಬಾದ್‌ಗೆ ಹೊರಟಿದ್ದ ರೈಲಿನಲ್ಲಿ ಈ ಘಟನೆ ನಡೆದಿದೆ. ಆದರೆ ಪ್ರಯಾಣಿಕ ಸಿಕ್ಕಿಬಿದ್ದಿದ್ದು ಮಾತ್ರ ಘನಘೋರ ಘಟನೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ ಪ್ರಯಾಣದ ವೇಗ, ಕಲ್ಲು ದಾಳಿ ಅಥವಾ ದನಗಳಿಗೆ ಡಿಕ್ಕಿ ಹೊಡೆದ ಘಟನೆಗಳಿಂದ ವಂದೇ ಭಾರತ್ ರೈಲು ಸುದ್ದಿಯಲಿಲ್ಲ. ಬದಲಿಗೆ ಪ್ರಯಾಣದ ಸಮಯದಲ್ಲಿ ಸಿಗರೇಟಿನ ಹಂಬಲವನ್ನು ತಡೆಯಲಾಗದ ಟಿಕೆಟ್ ರಹಿತ ಪ್ರಯಾಣಿಕ ಸಿಕ್ಕಿಬಿದ್ದ ಘಟನೆಯಿಂದ ಶರವೇಗದ ರೈಲು ಸುದ್ದಿಯಾಗಿದೆ.

ಆಂಧ್ರಪ್ರದೇಶದ ತಿರುಪತಿಯಿಂದ ಸಿಕಂದರಾಬಾದ್‌ಗೆ ಹೊರಟಿದ್ದ ರೈಲು ಆಗಷ್ಟೇ ಗುಡೂರು ದಾಟಿತ್ತು ಮತ್ತು ಗಮ್ಯಸ್ಥಾನವನ್ನು ತಲುಪಲು ಇನ್ನೂ ಎಂಟು ಗಂಟೆಗಳಿಗಿಂತ ಹೆಚ್ಚು ಪ್ರಯಾಣಿಸಬೇಕಿತ್ತು.
ಈ ವೇಳೆ ಪ್ರಯಾಣಿಕನೊಬ್ಬ ಟಿಕೆಟ್ ಇಲ್ಲದೆ ರೈಲಿಗೆ ಹತ್ತಿದ್ದಾನೆ. ಬಳಿಕ ಶೌಚಾಲಯದೊಳಗೆ ಹೋಗಿ ಬೀಗ ಹಾಕಿಕೊಂಡಿದ್ದಾನೆ. ಶೌಚಾಲಯಲ್ಲಿ ಹೋಗದೇ ಇದ್ದಿದ್ದರೆ ಆತ ಪ್ರಯಾಣವನ್ನು ಉಚಿತವಾಗಿ ಮಾಡಬಹುದಿತ್ತೆನೋ, ಆದರೆ ಅವನು ಹಚ್ಚಿ ಸಿಗರೇಟ್ ಆತನನ್ನು ಪೇಚೆಗೆ ಸಿಲುಕಿಸಿದೆ. ಮಾತ್ರವಲ್ಲದೆ ಪ್ರಾಣಕ್ಕೆ ಕುತ್ತು ಕೂಡ ಉಂಟು ಮಾಡಿದೆ.
ಫ್ಲ್ಯಾಗ್‌ಶಿಪ್ ರೈಲಿನಲ್ಲಿ ಅಳವಡಿಸಲಾದ ಫೈರ್ ಅಲಾರಂಗಳ ಬಗ್ಗೆ ತಿಳಿಯದೆ, ಅವನು ಶೌಚಾಲಯಕ್ಕೆ ಹೋಗಿ ಸಿಗರೇಟನ್ನು ಹೊತ್ತಿಸಿದ್ದಾನೆ. ತಕ್ಷಣವೇ ಅಲಾರಮ್‌ಗಳು ರಿಂಗ್ ಆಗಲು ಪ್ರಾರಂಭಿಸಿವೆ. ಸ್ವಯಂಚಾಲಿತ ಅಗ್ನಿಶಾಮಕವು ಕೆಲಸ ಮಾಡಲು ಶುರುವಾಗಿದೆ. ವಿಭಾಗದ ಮೂಲಕ ಏರೋಸಾಲ್ ಅನ್ನು ಸಿಂಪಡಿಸಿದೆ.

ಇದು ಪ್ರಯಾಣಿಕನಿಗೆ ಗಾಬರಿಯನ್ನು ಹುಟ್ಟುಹಾಕಿದೆ. ಬಾಗಿಲು ತನ್ನಿಂದ ತಾನೇ ಲಾಕ್ ಆಗಿದೆ. ಈ ವೇಳೆ ಗಾಬರಿಗೊಂಡ ಪ್ರಯಾಣಿಕ ರೈಲು ಸಿಬ್ಬಂದಿಯನ್ನು ಎಚ್ಚರಿಸಲು ಕಂಪಾರ್ಟ್‌ಮೆಂಟ್‌ನಲ್ಲಿ ತುರ್ತು ಫೋನ್ ಬಳಸಿದ್ದಾನೆ. ಇದರಿಂದ ಮನುಬುಲು ನಿಲ್ದಾಣದ ಬಳಿ ರೈಲು ನಿಂತಿದೆ.
ಬಳಿಕ ರೈಲ್ವೇ ಪೊಲೀಸ್ ಸಿಬ್ಬಂದಿ ಅಗ್ನಿಶಾಮಕ ಯಂತ್ರದೊಂದಿಗೆ ಕಾರ್ಯಾಚರಣೆ ನಡೆಸಿ ಶೌಚಾಲಯದ ಕಿಟಕಿ ಗಾಜು ಒಡೆದಿದ್ದಾರೆ. ಒಳಗೆ ಅವರು ಪ್ರಯಾಣಿಕನನ್ನು ಕಂಡು ಆತನ ರಕ್ಷಣೆ ಮಾಡಿದ್ದಾರೆ. ಪೂರ್ಣ ಪ್ರಮಾಣದ ರಕ್ಷಣಾ ಕಾರ್ಯಾಚರಣೆಯನ್ನು ಮಾಡಿವೆ. ರೈಲಿನಲ್ಲಿ ಧೂಮಪಾನ ಮಾಡಿದ ಪ್ರಯಾಣಿಕನನ್ನು ನೆಲ್ಲೂರಿನಲ್ಲಿ ಬಂಧಿಸಲಾಯಿತು ಮತ್ತು ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸಿತು.
ಘಟನೆಯ ವಿಡಿಯೋ ವೈರಲ್ ಆಗಿದೆ. ವಿಡಿಯೊಗಳು ಕೋಚ್‌ನ ಒಳಗಿನ ರಿಂಗ್ ಬಡಿದುಕೊಳ್ಳುತ್ತಿರುವುದು ಮತ್ತು ಚೂರುಚೂರಾದ ಕಿಟಕಿಯನ್ನು ತೋರಿಸಿದೆ. ಇದು ಪ್ರಯಾಣಿಕರಲ್ಲಿ ಭೀತಿಯನ್ನು ಹುಟ್ಟಿಸಿದೆ.
"ಪ್ರಯಾಣಿಕರೊಬ್ಬರು ತಿರುಪತಿಯಿಂದ ರೈಲು ಹತ್ತಿದರು ಮತ್ತು C-13 ಕೋಚ್‌ನ ಟಾಯ್ಲೆಟ್‌ಗೆ ಹೋಗಿ ಬೀಗ ಹಾಕಿಕೊಂಡರು. ಅವರು ಶೌಚಾಲಯದೊಳಗೆ ಧೂಮಪಾನ ಮಾಡಿದರು, ಇದರ ಪರಿಣಾಮವಾಗಿ ಶೌಚಾಲಯದೊಳಗೆ ಏರೋಸಾಲ್ ಅಗ್ನಿಶಾಮಕವನ್ನು ಸ್ವಯಂಚಾಲಿತವಾಗಿ ಸಕ್ರಿಯಗೊಂಡಿದೆ" ಎಂದು ದಕ್ಷಿಣ ಮಧ್ಯ ರೈಲ್ವೆಯ ಅಧಿಕಾರಿ ( SCR) ವಲಯದ ವಿಜಯವಾಡ ವಿಭಾಗವು ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications