Vande Bharat Express Train: ಕಲ್ಲು ತೂರಾಟದ ಹಿಂದೆ ದ್ವೇಷ ರಾಜಕೀಯದ ವಾಸನೆ- ಮೋದಿ ವಿರೋಧಿಗಳ ಪಿತೂರಿ?
ಬೆಂಗಳೂರು, ಜನವರಿ 13: ವಂದೇ ಭಾರತ್ ರೈಲಿನ ಮೇಲೆ ದೇಶದ ಎರಡು ರಾಜ್ಯಗಳಲ್ಲಿ ಕಲ್ಲು ತೂರಾಟವಾಗಿದೆ. ಮೊದಲು ಪಶ್ಚಿಮ ಬಂಗಾಳದಲ್ಲಿ, ನಂತರ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಈ ಘಟನೆಗಳು ಸಂಭವಿಸಿವೆ.
ಪಶ್ಚಿಮ ಬಂಗಾಳದಲ್ಲಿ ಎರಡು ಬಾರಿ ದಾಳಿ ನಡೆದಿದೆ. ಇನ್ನು ಆಂಧ್ರಪ್ರದೇಶದಲ್ಲಿ ರೈಲಿಗೆ ಚಾಲನೆ ನೀಡುವ ಮುನ್ನವೇ ಕಲ್ಲು ತೂರಾಟ ನಡೆದಿದೆ. ಈ ಘಟನೆ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ವಂದೇ ಭಾರತ್ ರೈಲಿನ ಮೇಲೆಯೇ ಏಕೆ ಕಲ್ಲು ತೂರಾಟ ನಡೆಯುತ್ತಿದೆ ಎಂಬುದರ ಬಗ್ಗೆ ಹಲವು ಚರ್ಚೆಗಳು ಹುಟ್ಟಿಕೊಂಡಿವೆ.
ಬಂಗಾಳ ಹಾಗೂ ಆಂಧ್ರದಲ್ಲಿ ನಡೆದಿರುವ ಕಲ್ಲು ತೂರಾಟಕ್ಕೆ ರಾಜಕೀಯ ದ್ವೇಷವೇ ಕಾರಣ ಎಂದು ಹೇಳಲಾಗುತ್ತಿದೆ. ವಂದೇ ಭಾರತ್ ರೈಲು ಯೋಜನೆ ಜನಪ್ರಿಯವಾಗಿದೆ. ಇದರ ಶ್ರೇಯವೆಲ್ಲಾ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ ಎಂಬ ಕಾರಣಕ್ಕೆ ಮೋದಿ ವಿರೋಧಿಗಳು ಹೀಗೆ ಮಾಡುತ್ತಿದ್ದಾರೆ ಎಂಬ ವಾದಗಳು ಮುನ್ನೆಲೆಗೆ ಬಂದಿವೆ.
ಪಶ್ಚಿಮ ಬಂಗಾಳದಲ್ಲಿ ನಡೆದಿದ್ದ ಕಲ್ಲು ತೂರಾಟದ ಬೆನ್ನಲ್ಲೇ ಬಿಜೆಪಿ ನಾಯಕರು ಮಮತಾ ನೇತೃತ್ವದ ಟಿಎಂಸಿ ವಿರುದ್ಧ ಹರಿಹಾಯ್ದಿದ್ದರು. ಈ ಬಗ್ಗೆ ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ, 'ಇದು ರಾಜಕೀಯ ದ್ವೇಷದ ಫಲಿತಾಂಶ' ಎಂದು ಹೇಳಿದ್ದರು.

'ಜೈ ಶ್ರೀರಾಮ್ ಘೋಷಣೆಗೆ ಪ್ರತಿಕಾರವಾಗಿ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಯಿತೇ? ಈ ಪ್ರಕರಣವನ್ನು ಕೇಂದ್ರದ ತನಿಖಾ ಸಂಸ್ಥೆಗಳಿಗೆ ವರ್ಗಾಯಿಸಬೇಕೆಂದು' ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಮತಾ ಬ್ಯಾನರ್ಜಿ ಇದು ರಾಜಕೀಯ ದ್ವೇಷದಿಂದ ಆಗಿಲ್ಲವೆಂದು ಹೇಳಿದ್ದರು.

ಪಶ್ಚಿಮ ಬಂಗಾಳದ ಹೌರಾದಲ್ಲಿ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಾಗಿತ್ತು. ಪ್ರಧಾನಿ ಮೋದಿ ಅವರು ವರ್ಚುವಲ್ ಅಗಿಯೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹೌರಾ ಕಾರ್ಯಕ್ರಮದಲ್ಲಿ ದೈಹಿಕವಾಗಿ ಭಾಗವಹಿಸಿದ್ದ ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಿ 'ಜೈ ಶ್ರೀರಾಮ್' ಎಂಬ ಘೋಷಣೆಯನ್ನು ಕೂಗಲಾಗಿತ್ತು. ಈ ವೇಳೆ ಮಮತಾ ಬ್ಯಾನರ್ಜಿ ಆಕ್ರೋಶಗೊಂಡರು. ಕಾರ್ಯಕ್ರಮದ ವೇದಿಕೆಯ ಬರಲು ನಿರಾಕರಿಸಿದರು.

ಇದೇ ರೀತಿ ಆಂಧ್ರ ಪ್ರದೇಶದ ವಿಶಾಖಪಟ್ಟನಂನಲ್ಲೂ ನಡೆದಿದೆ. ಇನ್ನೂ ಉದ್ಘಾಟನೆಯಾಗದ ರೈಲಿಗೆ ಕಲ್ಲುನ್ನು ಎಸೆಯಲಾಗಿದೆ. ಇದನ್ನೂ ಮೋದಿ ಅವರು ಜನೆವರಿ 19ರಂದು ಉದ್ಘಾಟಿಸಲಿದ್ದಾರೆ. ತೆಲಂಗಾನದ ಸಿಕಂದರಾಬಾದ್‌ನಿಂದ ಆಂಧ್ರದ ವಿಶಾಖಪಟ್ಟಣದ ವರೆಗೆ ರೈಲು ಸಂಚರಿಸಲಿದೆ.
ವಿಶಾಖಪಟ್ಟನಂಗೆ ಬಂದಿರುವ ಖಾಲಿ ಡಬ್ಬಿಯ ರೈಲಿಗೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಇದಕ್ಕೆ ನಿಖರ ಕಾರಣ ತಿಳಿದುಬಂದಿರದೇ ಇದ್ದರೂ, ಇದನ್ನೂ ಸಹ ರಾಜಕೀಯ ದ್ವೇಷದಿಂದ ಸಂಭವಿಸಿರುವುದು ಎಂದು ಹೇಳಲಾಗುತ್ತಿದೆ.
ಮಮತಾ ಬ್ಯಾನರ್ಜಿಯಂತೆಯೇ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ಮೋದಿ ಅವರ ರಾಜಕೀಯ ಎಂಬುದು ತಿಳಿದೇ ಇದೆ. ಈ ಕಾರಣಕ್ಕಾಗಿ ಮೋದಿ ಅವರ ಮೇಲಿನ ದ್ವೇಷಕ್ಕೆ ಹೀಗೆ ಮಾಡಲಾಗುತ್ತಿದೆಯಾ ಎಂಬ ಮಾತುಗಳೂ ಸಹ ಕೇಳಿಬಂದಿವೆ. ಇದು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications