ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗಪುರದಿಂದ ಬಿಲಾಸ್‌ಪುರಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್‌

|
Google Oneindia Kannada News

ಮುಂಬೈ, ಡಿಸೆಂಬರ್‌ 4: ಮಹಾರಾಷ್ಟ್ರದ ನಾಗಪುರದಿಂದ ಬಿಲಾಸ್ಪುರಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ ಎಂದು ವರದಿಗಳು ತಿಳಿಸಿವೆ.

ಸೌತ್ ಈಸ್ಟ್ ಸೆಂಟ್ರಲ್ ರೈಲ್ವೇ (ಎಸ್‌ಇಸಿಆರ್‌) ನಾಗಪುರ ನಗರದಿಂದ ಬಿಲಾಸ್‌ಪುರಕ್ಕೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಅನ್ನು ಪ್ರಾರಂಭಿಸಲಿದೆ. ಈ ವಂದೇ ಭಾರತ್ ಎಕ್ಸ್‌ಪ್ರೆಸ್‌ ನಾಗ್ಪುರದಿಂದ ಬಿಲಾಸ್ಪುರಕ್ಕೆ ದೇಶದಲ್ಲಿ ಓಡುವ ಆರನೇ ರೈಲು ಆಗಿರುತ್ತದೆ. ಶನಿವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲೂ ರೈಲು ಸಂಚರಿಸಲಿದೆ.

ಹೊಸ ವರ್ಷದಲ್ಲಿ 75 ವಂದೇ ಭಾರತ್ ರೈಲು ಸಂಚಾರ ಸಾಧ್ಯವೇ?ಹೊಸ ವರ್ಷದಲ್ಲಿ 75 ವಂದೇ ಭಾರತ್ ರೈಲು ಸಂಚಾರ ಸಾಧ್ಯವೇ?

ವಂದೇ ಭಾರತ್ ರೈಲಿಗೆ ರಾಯ್‌ಪುರ, ದುರ್ಗ್ ಮತ್ತು ಗೊಂಡಿಯಾದಲ್ಲಿ ಮಾತ್ರ ನಿಲುಗಡೆ ಇರುತ್ತದೆ. ಇತರ ಐದು ವಂದೇ ಭಾರತ್ ರೈಲುಗಳು ದೆಹಲಿ ವಾರಣಾಸಿ, ದೆಹಲಿ-ಕತ್ರಾ, ಮುಂಬೈ-ಅಹಮದಾಬಾದ್, ದೆಹಲಿ-ಚಂಡೀಗಢ, ಮತ್ತು ಚೆನ್ನೈ-ಮೈಸೂರಿಗೆ ಈಗಾಗಲೇ ಚಾಲನೆಗೊಂಡಿವೆ. ಇದು ಬಿಲಾಸ್‌ಪುರದಿಂದ ಬೆಳಗ್ಗೆ 6:45ಕ್ಕೆ ಆರಂಭಗೊಂಡು ಮಧ್ಯಾಹ್ನ 12:15ಕ್ಕೆ ನಗರವನ್ನು ತಲುಪಲಿದೆ. ನಾಗ್ಪುರದಿಂದ ಮಧ್ಯಾಹ್ನ 2:05ಕ್ಕೆ ಆರಂಭವಾಗಿ ಬಿಲಾಸ್ಪುರಕ್ಕೆ ರಾತ್ರಿ 7:35ಕ್ಕೆ ತಲುಪಲಿದೆ.

412 ಕಿ.ಮೀ ದೂರವನ್ನು ಕೇವಲ ಐದೂವರೆ ಗಂಟೆಗಳಲ್ಲಿ ಈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಕ್ರಮಿಸಲಿದೆ. ಇಲ್ಲಿಯವರೆಗೆ ಎಲ್ಲಾ ಸೂಪರ್‌ಫಾಸ್ಟ್ ರೈಲುಗಳು ಈ ದೂರವನ್ನು 6 ರಿಂದ 7 ಗಂಟೆಗಳಲ್ಲಿ ಕ್ರಮಿಸುತ್ತವೆ. ವಂದೇ ಭಾರತ್ ರೈಲುಗಳು ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುತ್ತವೆ. 412 ಕಿಮೀ ಓಟದ ಪೈಕಿ ಸೌತ್ ಈಸ್ಟ್ ಸೆಂಟ್ರಲ್ ರೈಲ್ವೇ ನಾಗಪುರ ವಿಭಾಗವು ಈಗಾಗಲೇ ನಾಗಪುರ ಮತ್ತು ದುರ್ಗ್ ನಡುವಿನ ಟ್ರ್ಯಾಕ್ ಅನ್ನು ನವೀಕರಿಸಿದೆ.

Vande Bharat Express : ನಾಲ್ಕನೇ ಬಾರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಜಾನುವಾರು ಡಿಕ್ಕಿVande Bharat Express : ನಾಲ್ಕನೇ ಬಾರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಜಾನುವಾರು ಡಿಕ್ಕಿ

ನಾಗಪುರ ನಗರದಲ್ಲಿ ನಾಗ್ಪುರದಿಂದ ಶಿರಡಿ ಮತ್ತು ಮಹಾ-ಮೆಟ್ರೋಸ್ ಎರಡು ವಿಭಾಗಗಳ ನಡುವಿನ ಸಮೃದ್ಧಿ ಮಹಾಮಾರ್ಗ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರಿಂದ ಡಿಸೆಂಬರ್ 11 ರಂದು ರೈಲಿಗೆ ಚಾಲನೆ ನೀಡಲಾಗುವುದು ಎಂದು ರೈಲ್ವೆ ಮೂಲಗಳು ತಿಳಿಸಿವೆ. ಇದಲ್ಲದೆ ದಕ್ಷಿಣ ಭಾರತದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್ ಮೈಸೂರಿಂದ ಚೆನ್ನೈ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ ಬಳಿಕ ಈಗ ಎರಡನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ಸಿಗುವ ಸಾಧ್ಯತೆ ಇದೆ ಎಂದೂ ವರದಿಗಳು ಬಂದಿವೆ.

 6 ಗಂಟೆಗಳ ಕಾಲ ಪ್ರಯಾಣ ಅವಧಿ ಕಡಿತ

6 ಗಂಟೆಗಳ ಕಾಲ ಪ್ರಯಾಣ ಅವಧಿ ಕಡಿತ

ಇದು ಆಂಧ್ರ ಪ್ರದೇಶದ ವಿಶಾಖಪಟ್ಟಣಂನಿಂದ ವಿಜಯವಾಡದ ಮೂಲಕ ಸಿಕಂದರಾಬಾದ್‌ಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಭಾರತದ ಅತಂತ್ಯ ವೇಗದ ರೈಲು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸೇವೆ ಶೀಘ್ರವೇ ಲಭ್ಯವಾಗುವ ಸಾಧ್ಯತೆ ಇದೆ. ಈ ಸೆಮಿ ಹೈಸ್ಪೀಡ್‌ ಎಲೆಕ್ಟ್ರಿಕ್ ರೈಲು ಪ್ರಸ್ತಾವಿತ ಮಾರ್ಗದಲ್ಲಿ ಸುಮಾರು 6 ಗಂಟೆಗಳ ಕಾಲ ಪ್ರಯಾಣದ ಸಮಯವನ್ನು ಕಡಿತ ಮಾಡಲಿದೆ ಎನ್ನಲಾಗಿದೆ.

8 ಗಂಟೆಗಳಲ್ಲಿ ಸಿಕಂದರಾಬಾದ್‌ಗೆ

8 ಗಂಟೆಗಳಲ್ಲಿ ಸಿಕಂದರಾಬಾದ್‌ಗೆ

ವಿಜಯವಾಡದ ಮೂಲಕ ವಿಶಾಖಪಟ್ಟಣಂ ಮಾರ್ಗ ಸಿಕಂದರಾಬಾದ್‌ ಮಾರ್ಗಕ್ಕೆ ನೀಡಲಾಗುತ್ತಿರುವ ನೂತನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಜನ್ಮಭೂಮಿ ಎಕ್ಸ್‌ಪ್ರೆಸ್‌ ಮಾರ್ಗದಲ್ಲಿ ಚಲಿಸುತ್ತದೆ ಎಂದು ಹೇಳಲಾಗಿದೆ. ಹಿಂದಿನ ಹನ್ನೆರಡರಿಂದ 12, 14 ಗಂಟೆಗಳಿಗೆ ಹೋಲಿಸಿದರೆ ಪ್ರಯಾಣಿಕರು ವಿಶಾಖಪಟ್ಟಣಂನಿಂದ ಪ್ರಯಾಣಿಕರು ಈಗ 8 ಗಂಟೆಗಳಲ್ಲಿ ಸಿಕಂದರಾಬಾದ್‌ ತಲುಪಬಹುದಾಗಿದೆ.

ವೈಜಾಗ್‌ ಮತ್ತು ವಿಜಯವಾಡ ನಡುವೆ ಚಲನೆ

ವೈಜಾಗ್‌ ಮತ್ತು ವಿಜಯವಾಡ ನಡುವೆ ಚಲನೆ

ವಿಶಾಖಪಟ್ಟಣಂನಿಂದ ವಿಜಯವಾಡದ ಮೂಲಕ ಸಿಕಂದರಾಬಾದ್‌ಗೆ ರೈಲಿನ ನಿಖರವಾದ ಮಾರ್ಗವನ್ನು ರೈಲ್ವೆ ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ಆದರೆ ಇದು ಆರಂಭದಲ್ಲಿ ವೈಜಾಗ್‌ ಮತ್ತು ವಿಜಯವಾಡ ನಡುವೆ ಚಲಿಸುತ್ತದೆ ಹಾಗೂ ನಂತರ ಸಿಕಂದರಾಬಾದ್‌ಗೆ ಸಂಪರ್ಕಿಸುತ್ತದೆ ಎಂದು ಮೂಲಗಳು ಹೇಳುತ್ತಿವೆ. ಅದ್ಯಾಗೂ ಡಿಸೆಂಬರ್‌ನಲ್ಲಿ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ಪ್ರಯಾಣ ಅವಧಿಯು ತಲಾ 4 ಗಂಟೆ

ಪ್ರಯಾಣ ಅವಧಿಯು ತಲಾ 4 ಗಂಟೆ

ರೈಲ್ವೆ ಅಧಿಕಾರಿಗಳು ಹೇಳುವ ಪ್ರಕಾರ ವರ್ಷಾಂತ್ಯದ ವೇಳೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ವಿಜಯವಾಡದ ಹಳಿಗಳ ಮೇಲೆ ಬರುವ ಸಾಧ್ಯತೆ ಇದೆ. ಈ ಮಾರ್ಗದಲ್ಲಿ ಶೀಘ್ರ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತದೆ. ಪ್ರಾರಂಭದಲ್ಲಿ ಈ ಸೆಮಿ ಹೈ ಸ್ಪೀಡ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಪ್ರಾಯೋಗಿಕ ಓಡಾಟವನ್ನು ವಿಶಾಖಪಟ್ಟಣಂ ಮತ್ತು ವಿಜಯವಾಡ ನಡುವೆ ನಡೆಸಲು ನಿರ್ಧರಿಸಲಾಗಿದೆ. ಇಲ್ಲಿ ಕ್ರಮಿಸುವ ಪ್ರಯಾಣ ಅವಧಿಯು ತಲಾ 4 ಗಂಟೆಗಳಾಗಿತ್ತದೆ ಎಂದು ತಿಳಿಸಿದ್ದಾರೆ.

English summary
Reports say that the Vande Bharat Express train from Nagpur to Bilaspur in Maharashtra will be running soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X