Vande Bharat Express: ಈ ಮಾರ್ಗದ 05 ರೈಲುಗಳ ವೇಗ 130 ಕಿ.ಮೀಗೆ ಹೆಚ್ಚಳ, ಅಪ್ಡೇಟ್ಸ್
ಬೆಂಗಳೂರು, ಆಗಸ್ಟ್ 27: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಭಾರತೀಯ ರೈಲ್ವೆ ಇಲಾಖೆಯ ಜಾಲಕ್ಕೆ ಬಲ ತುಂಬಿದೆ. ಪ್ರಯಾಣಿಕರಿಗೆ ಆರಾಮದಾಯಕ ಸೇವೆ ನೀಡುತ್ತಿದೆ. ರೈಲು ಸಾರಿಗೆ ಕ್ರಾಂತಿಯನ್ನುಂಟು ಮಾಡಿದೆ. ದೇಶದಲ್ಲಿ 2019 ರಲ್ಲಿ ಆರಂಭವಾದ ಸೆಮಿ-ಹೈ-ಸ್ಪೀಡ್ ರೈಲುಗಳು ಸೇವೆ ಇದಾಗಿದ್ದು, ಈವರೆಗೆ ದೇಶಾದ್ಯಂತ ಒಟ್ಟು 150 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕಾರ್ಯಾಚರಣೆ ಮಾಡುತ್ತವೆ. ಈ ರೈಲುಗಳಿಗೆ ಮೊದಲು 100 kmh ಮಿತಿ ಇತ್ತು. ಇದೀಗ 130 ಕಿಲೋ ಮೀಟರ್‌ಗೆ ಹೆಚ್ಚಿಸಲಾಗಿದೆ. ಹಾಗಾದ್ರೆ ಯಾವ ಮಾರ್ಗದ ಎಷ್ಟು ರೈಲುಗಳ ವೇಗ ಹೆಚ್ಚಿಸಲಾಗಿದೆ ಎಂಬ ಪೂರ್ಣ ವಿವರ ಇಲ್ಲಿದೆ.
ವಂದೇ ಭಾರತ್ ರೈಲುಗಳನ್ನು ಚೆನ್ನೈ ಮೂಲದ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ಅಭಿವೃದ್ಧಿಪಡಿಸಿದೆ. ಈ ರೈಲುಗಳು ಪ್ರಯಾಣದ ಸಮಯ ಉಳಿತಾಯ ಮಾಡುತ್ತವೆ. ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಐಶಾರಾಮಿ ಅನುಭವ ನೀಡುತ್ತವೆ. ವರ್ಷದಿಂದ ವರ್ಷಕ್ಕೆ ರೈಲುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಸಲಿಗೆ ಈ ರೈಲುಗಳ ವೇಗವು ಗರಿಷ್ಠ 180 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿವೆ. ಆದರೂ ಗಂಟೆಗೆ 100 ಕಿ.ಮೀ. ಆಸುಪಾಸಿನ ವೇಗದಲ್ಲಿ ಚಲಿಸುತ್ತಿದ್ದವು.

ರೈಲು ಹಳಿಗಳು, ಭಾರತದಲ್ಲಿನ ರೈಲ್ವೆ ಮೂಲಸೌಕರ್ಯ ದೃಷ್ಟಿಯಿಂದ ಒಂದೇ ಭಾರತ್ ರೈಲುಗಳ ವೇಗಕ್ಕೆ ಮಿತಿ ಹೇರಲಾಗಿತ್ತು. ಇದೀಗ ದೇಶವ್ಯಾಪಿ ವಿದ್ಯುದೀಕರಣ ಸಹಿತ ಮಾರ್ಗಗಳು ದ್ವಿಪಥಗೊಳಿಸಲಾಗಿದೆ. ಇದರ ಬೆನ್ನಲ್ಲೆ 05 ಮಾರ್ಗಗಳ ರೈಲಿನ ವೇಗವನ್ನು ಪ್ರತಿ ಗಂಟೆಗೆ 130 ಕಿಲೋ ಮೀಟರ್ ವೇಗದಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ.
ದೇಶದ ರೈಲ್ವೆ ಜಾಲದಲ್ಲಿರುವ ಒಟ್ಟು ವಂದೇ ಭಾರತ್ ರೈಲುಗಳ ಪೈಕಿ ಈ ಕೆಳಗಿನ ಐದು ಮಾರ್ಗಗಳಲ್ಲಿ ಐದು ರೈಲುಗಳು ಮಾತ್ರ ಗಂಟೆಗೆ 130 ಕಿ.ಮೀ ವೇಗದಲ್ಲಿ ಚಲಿಸುತ್ತಿವೆ. ಅವುಗಳ ವಿವರ ಹೀಗಿದೆ.
130 ಕಿ.ಮೀ ವೇಗದ ರೈಲುಗಳ ಪಟ್ಟಿ
* ಬಿಲಾಸ್ಪುರ್-ನಾಗ್ಪುರ್-ಬಿಲಾಸ್ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು- ಸಂಖ್ಯೆ 20825/20826
* ಹೌರಾ-ಪಾಟ್ನಾ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು - ಸಂಖ್ಯೆ 22347/22348
* ಅಹಮದಾಬಾದ್-ಮುಂಬೈ ಸೆಂಟ್ರಲ್-ಅಹಮದಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು -ಸಂಖ್ಯೆ 22962/22961
* ಹೌರಾ-ಗಯಾ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು - ಸಂಖ್ಯೆ 22303/22304
* ನಾಗ್ಪುರ-ಸಿಕಂದರಾಬಾದ್-ನಾಗ್ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು - ಸಂಖ್ಯೆ 20101/20102
ವಾರಣಾಸಿ-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹಾಗೂ ನವದೆಹಲಿ- ಪ್ರಯಾಗ್‌ರಾಜ್ ಮಧ್ಯ ಗಂಟೆಗೆ 130 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುತ್ತಿವೆ. ಪ್ರಯಾಗ್‌ರಾಜ್-ವಾರಣಾಸಿ ಮಾರ್ಗದಲ್ಲಿ ಗಂಟೆಗೆ 110 ಕಿ.ಮೀ ವೇಗದಲ್ಲಿ ಚಲಿಸುತ್ತಿವೆ. ನವದೆಹಲಿ-ಕತ್ರಾ ಸೇವೆಯು ನವದೆಹಲಿ ಮತ್ತು ಲುಧಿಯಾನ ನಡುವೆ ಗಂಟೆಗೆ 130 ಕಿ.ಮೀ ವೇಗದಲ್ಲಿ ಸೇವೆ ನೀಡುತ್ತಿದೆ.












Click it and Unblock the Notifications