'ಪದ್ಮಾವತಿ' ರಂಗೋಲಿ ನಾಶ, ಐವರ ಬಂಧನ
ಸೂರತ್, ಅಕ್ಟೋಬರ್ 19 : ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹಿಂದಿ ಚಿತ್ರ 'ಪದ್ಮಾವತಿ'ಯನ್ನು ಬಿಂಬಿಸುವ ರಂಗೋಲಿಯನ್ನು ನಾಶ ಪಡಿಸಲಾಗಿತ್ತು. ರಂಗೋಲಿ ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ.
ರಂಗೋಲಿಯನ್ನು ನಾಶ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ಣಿ ಸೇನಾದ ನಾಲ್ವರು ಹಾಗೂ ವಿಶ್ವಹಿಂದೂ ಪರಿಷತ್ತಿನ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 16ರಂದು ಎಫ್‌ಐಆರ್ ದಾಖಲಾಗಿತ್ತು.
ವಿಡಿಯೋ: ದೃಶ್ಯ ವೈಭವ ಸೃಷ್ಟಿಸಿದ 'ಪದ್ಮಾವತಿ' ಟ್ರೇಲರ್ ಮಿಸ್ ಮಾಡದೇ ನೋಡಿ

ಸೂರತ್‌ನ ರಾಹುಲ್ ರಾಜ್ ಮಾಲ್‌ನಲ್ಲಿ ಕಲಾವಿದರು ಬಿಡಿಸಿದ್ದ ರಂಗೋಲಿಯನ್ನು ಜೈ ಶ್ರೀರಾಮ್ ಎಂಬ ಘೋಷಣೆ ಕೂಗುತ್ತಾ ಬಂದ ಐವರು ನಾಶಪಡಿಸಿದ್ದರು. ಈ ಕುರಿತು ಪ್ರಕರಣ ದಾಖಲಾಗಿತ್ತು, ಗುರುವಾರ ಐವರನ್ನು ಬಂಧಿಸಲಾಗಿದೆ.
'ವಾಕ್ ಸ್ವಾತಂತ್ರ್ಯ ಪ್ರತಿ ಭಾರತೀಯನ ಹಕ್ಕು. ಆದರೆ ಅದರ ಹೆಸರಲ್ಲಿ ದಾಳಿ ನಡೆಸಲು ಅವಕಾಶವಿಲ್ಲ' ಎಂದು ನಗರ ಪೊಲೀಸ್ ಆಯುಕ್ತ ಸತೀಶ್ ಶರ್ಮಾ ಎಚ್ಚರಿಕೆ ನೀಡಿದ್ದಾರೆ.
ದೀಪಿಕಾ ಪಡುಕೊಣೆ ಅಭಿನಯದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಸಿನಿಮಾ ವಿವಾದಕ್ಕೆ ಕಾರಣವಾಗಿದೆ. ಸಿನಿಮಾದ ಮೂರು ಫಸ್ಟ್ ಲುಕ್ ಮತ್ತು ಟ್ರೇಲರ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.












Click it and Unblock the Notifications