TTD: ತಿರುಮಲ ಶ್ರೀವಾರಿ ವೈಕುಂಠ ದರ್ಶನ ಆರಂಭ.. ತಿಮ್ಮಪ್ಪನ ದರ್ಶನವಾಗದೆ ಭಕ್ತರಿಂದ ಪ್ರತಿಭಟನೆ!
ವೈಕುಂಠ ಏಕಾದಶಿ ದಿನವಾದ ಇಂದು ತಿರುಮಲದಲ್ಲಿ ಶ್ರೀವಾರಿ ವೈಕುಂಠ ದರ್ಶನ ಆರಂಭವಾಗಿದೆ. ವೈಕುಂಠನ ದರ್ಶನ ಪಡೆಯಲು ಭಕ್ತ ಸಾಗರವೇ ತಿರುಪತಿಯಲ್ಲಿ ನೆರೆದಿದೆ. ಆದರೆ ಕೆಲವರಿಗೆ ದೇವರ ದರ್ಶನವಾಗದೆ ಬೇಸರಗೊಂಡು ಟಿಟಿಡಿ ವಿರುದ್ಧ ಪ್ರತಿಭಟನೆಯನ್ನು ಮಾಡಿದರು.
ತಿರುಮಲದಲ್ಲಿ ಶುಕ್ರವಾರ ಮಧ್ಯರಾತ್ರಿ ಶ್ರೀವಾರಿ ವೈಕುಂಠದ ಬಾಗಿಲು ತೆರೆಯಲಾಯಿತು. ಶ್ರೀಗಳಿಗೆ ವಿಶೇಷ ಪೂಜೆ ಬಳಿಕ ಮೊದಲು ಸೆಲೆಬ್ರಿಟಿಗಳಿಗೆ ದರ್ಶನ ಭಾಗ್ಯ ನೀಡಿ ನಂತರ ಸಾಮಾನ್ಯರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು. ಇದರಿಂದಾಗಿ ತಿರುಮಲಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಕಣ್ಣು ಹಾಯಿಸಿದಲೆಲ್ಲಾ ಜನ ಜಮಾಯಿಸಿದ್ದಾರೆ. ಜನವರಿ 1ರ ಮಧ್ಯರಾತ್ರಿ 12 ಗಂಟೆಯವರೆಗೆ ವೈಕುಂಠದ ಬಾಗಿಲು ತೆರೆದಿರುತ್ತದೆ. ಟೋಕನ್ ಹೊಂದಿರುವ ಭಕ್ತರಿಗೆ ಮಾತ್ರ ವೈಕುಂಠನ ದರ್ಶನ ನೀಡಲಾಗುತ್ತಿದೆ.

ಇದಕ್ಕಾಗಿ ಈಗಾಗಲೇ ತಿರುಪತಿಯ ಕೌಂಟರ್‌ಗಳಲ್ಲಿ ದರ್ಶನದ ಟೋಕನ್ ನೀಡಲಾಗಿದೆ. ಡಿಸೆಂಬರ್ 23 ರಂದು ವೈಕುಂಠ ಏಕಾದಶಿಯನ್ನು ಆಚರಿಸಲು ಈಗಾಗಲೇ ನೀಡಲಾಗುತ್ತಿದ್ದ ಟೋಕನ್ ವಿತರಣೆಯನ್ನು ಡಿಸೆಂಬರ್ 22 ರಂದು ನಿಲ್ಲಿಸಲಾಗಿದೆ. ಆದರೆ ಭಕ್ತರು ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಮೂಲಕ ಸರ್ವದರ್ಶನಂ ಮಾರ್ಗದ ಮೂಲಕ ದೇವರ ದರ್ಶನ ಮಾಡಬಹುದು ಎಂದು ಅಧಿಕಾರಿಗಳು ಈ ಹಿಂದೆಯೇ ತಿಳಿಸಿದ್ದರು.
ಇದರಿಂದ ಶುಕ್ರವಾರ ಕೆಲ ಭಕ್ತರು ನೇರವಾಗಿ ವೈಕುಂಟಂ ಕ್ಯೂ ಕಾಂಪ್ಲೆಕ್ಸ್ ತಲುಪಿದರೂ ದರ್ಶನಕ್ಕೆ ಸಿಬ್ಬಂದಿ ಅವಕಾಶ ನೀಡಲಿಲ್ಲ. ವೈಕುಂಠಂ ಸರದಿ ಸಂಕೀರ್ಣ ಮತ್ತು ನಾರಾಯಣಗಿರಿ ಶೆಡ್‌ಗಳು ಈಗಾಗಲೇ ಭರ್ತಿಯಾಗಿದ್ದು, ಸರತಿ ಸಾಲುಗಳು ನಾರಾಯಣಗಿರಿ ತಲುಪಿವೆ. ಭಕ್ತರ ಸಂಖ್ಯೆ ಹೆಚ್ಚಿರುವುದರಿಂದ ದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಿಟಿಡಿ ಅಧಿಕಾರಿಗಳ ಈ ನಿರ್ಧಾರಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ನಾರಾಯಣಗಿರಿಯಿಂದ ಜೆಇಒ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ಎಚ್ಚೆತ್ತ ಅಧಿಕಾರಿಗಳು 23ನೇ ತಾರೀಖಿನ ಟೋಕನ್ ಹೊಂದಿರುವ ಭಕ್ತರಿಗೆ ಮಾತ್ರ ಅಲಿಪಿರಿ ಬಳಿ ದರ್ಶನಕ್ಕೆ ಅವಕಾಶ ಕಲ್ಪಿಸಿದರು.

ಮತ್ತೊಂದೆಡೆ, ವೈಕುಂಠ ದ್ವಾರಕ್ಕೆ ಭೇಟಿ ನೀಡಲು ವಿಐಪಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಿರುಮಲ ತಲುಪುತ್ತಿದ್ದಾರೆ. ಕೆಲ ಭಕ್ತರು ವಸತಿಗಾಗಿ ಪರದಾಡುತ್ತಿದ್ದಾರೆ. ಈ ಹಿಂದೆ ಭಕ್ತರಿಗೆ ಟಿಟಿಡಿ ಮಹತ್ವದ ಸಲಹೆಯೊಂದನ್ನು ನೀಡಿತ್ತು. ಟಿಕೆಟ್ ಇಲ್ಲದವರೂ ಬರಬಹುದು ಆದರೆ ಅವರಿಗೆ ದರ್ಶನ ಇರುವುದಿಲ್ಲ ಎಂಬ ಹೇಳಿಕೆ ನೀಡಿತ್ತು. ಅಲಿಪಿರಿ ಟೋಲ್‌ಗೇಟ್ ಬಳಿ ವಿಜಿಲೆನ್ಸ್ ಸಿಬ್ಬಂದಿ ಭಕ್ತರ ದರ್ಶನ ಟಿಕೆಟ್ ಪರಿಶೀಲಿಸಿದ್ದು, ಟಿಕೆಟ್ ಪಡೆದವರನ್ನು ಬೆಟ್ಟಕ್ಕೆ ಕಳುಹಿಸುತ್ತಿದ್ದಾರೆ. ಅಲಿಪಿರಿ ತಪಾಸಣಾ ಕೇಂದ್ರ, ಅಲಿಪಿರಿ ಮತ್ತು ಶ್ರೀವಾರಿಮೆಟ್ಟು ಪಾದಚಾರಿ ಮಾರ್ಗಗಳಲ್ಲಿ ವೈಕುಂಠದ್ವಾರ ದರ್ಶನ ಟಿಕೆಟ್ ಮತ್ತು ಟೋಕನ್‌ಗಳನ್ನು ಹೊಂದಿರುವ ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತಿದೆ.
ಟೋಕನ್ ಇಲ್ಲದ ಭಕ್ತರನ್ನು ವಾಪಸ್ ಕಳುಹಿಸಲಾಗುತ್ತಿದೆ. ಅಲ್ಲದೆ ದರ್ಶನ ಸಮಯಕ್ಕಿಂತ 24 ಗಂಟೆ ಮೊದಲು ಮಾತ್ರ ಅಲಿಪಿರಿ ಪ್ರವೇಶ ಎಂದು ಹೇಳಿದ್ದರಿಂದ ಅನೇಕರು ಅಲಿಪಿರಿಯಿಂದ ವೈಕುಂಠನ ದರ್ಶನವಿಲ್ಲದೆ ವಾಪಾಸ್ಸಾಗಿದ್ದಾರೆ. ತಿರುಮಲದ ಸ್ಥಳೀಯರಿಗೆ ಮಾತ್ರ ಅವರ ಆಧಾರ್ ಕಾರ್ಡ್ ನೋಡಿ ತಿರುಮಲಕ್ಕೆ ಕಳುಹಿಸಲಾಗುತ್ತಿದೆ. ಸಾಮಾನ್ಯ ಭಕ್ತರಿಗೆ ಆದ್ಯತೆ ನೀಡಲು ಟಿಟಿಡಿ ಈ ನಿರ್ಧಾರ ಕೈಗೊಂಡಿದೆ. ಜತೆಗೆ ಭಕ್ತರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಆದರೂ ಕೆಲವರಿಗೆ ವೈಕುಂಠನ ದರ್ಶನವಾಗದೇ ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications