ಬಿಸಿಲಿನ ಶಾಖಕ್ಕೆ ಬೇಸತ್ತು ಎಸಿ ಹೆಲ್ಮೆಟ್‌ ಮೊರೆಹೋದ ಟ್ರಾಫಿಕ್‌ ಪೊಲೀಸರು-ಎಲ್ಲಿ?

ದೇಶದ ಕೆಲವೆಡೆ ಮಾತ್ರ ಮಳೆರಾಯ ತಂಪೆರೆಯುತ್ತಿದ್ದು, ಬಹುತೇಕ ಭಾಗಗಳಲ್ಲಿ ತಾಪಮಾನದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಇನ್ನು ಸೂರ್ಯನ ಶಾಖದ ಹೊಡೆತಕ್ಕೆ ಜನರು ಬೆಂಡಾಗಿದ್ದಾರೆ. ಅಲ್ಲದ ಮನೆಯಿಂದ ಹೊರಗಡೆ ಬರಲು ಭಯ ಪಡುತ್ತಿದ್ದಾರೆ. ಮತ್ತೊಂದೆಡೆ ಟ್ರಾಫಿಕ್‌ ಪೊಲೀಸರಂತೂ ಯಾವಾಗಲೂ ಬಿಸಿಲಿನಲ್ಲೇ ಇರಬೇಕಾಗುತ್ತದೆ. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ದೇಶದ ಈ ಭಾಗದಲ್ಲಿ ಪೊಲೀಸರು ಹೊಸ ಮಾರ್ಗವನ್ನು ಅನುಸರಿಸಿದ್ದಾರೆ. ಹಾಗಾದರೆ ಆ ಮಾರ್ಗ ಯಾವುದು ಎಂದು ಇಲ್ಲಿ ತಿಳಿಯಿರಿ.

ಎಸಿ ಹೆಲ್ಮೆಟ್‌ ವಿಶೇಷತೆ: ಬೇಸಿಗೆಯ ತಾಪದಿಂದ ತಪ್ಪಿಸಿಕೊಳ್ಳಲು ವಡೋದರಾ ಸಂಚಾರ ಪೊಲೀಸರು ಸೂಕ್ತ ಪರಿಹಾರವನ್ನು ಕಂಡುಕೊಂಡಿದ್ದಾರೆ. ಇಲ್ಲಿ ಪೊಲೀಸ್‌ ಇಲಾಖೆಯಿಂದ ಇದೀಗ ತನ್ನ ಸಿಬ್ಬಂದಿಗೆ ಎಸಿಯುಳ್ಳ ವಿಶೇಷ ಹೆಲ್ಮೆಟ್‌ಗಳನ್ನು ಕೊಡಲಾಗುತ್ತಿದೆ. ಈ ಹೊಸ AC ಹೆಲ್ಮೆಟ್‌ಗಳನ್ನು 40-42 ಡಿಗ್ರಿ ಸೆಲ್ಸಿಯಸ್‌ನ ಗರಿಷ್ಠ ತಾಪಮಾನದ ಸಮಯದಲ್ಲೂ ತಮ್ಮನ್ನು ತಂಪಾಗಿಸುವಂತೆ ವಿನ್ಯಾಸಗೊಳಿಸಲಾಗಿದೆ.

Vadodara Traffic police depends on AC helmets amid summer hit know more

ಹೇಗೆಲ್ಲ ಪ್ರಯೋಜನಾ ಆಗಲಿದೆ?: ಈ ಹೆಲ್ಮೆಟ್‌ಗಳನ್ನು ವಿವಿಧ ವಿಶೇಷ ವೈಶಿಷ್ಟ್ಯಗಳೊಂದಿಗೆ ತಯಾರು ಮಾಡಲಾಗುದೆ. ಪೊಲೀಸರು ಸೂರ್ಯನ ಶಾಖದಿಂದ ತಮ್ಮ ಕಣ್ಣು, ತಲೆಯನ್ನು ರಕ್ಷಿಸಿಕೊಳ್ಳಲಿ ಇದು ಸಹಕಾರಿಯಾಗಲಿದೆ. ಇನ್ನು ಇದು ಚಾರ್ಜಿಂಗ್ ಪಾಯಿಂಟ್ ಹೊಂದಿದ್ದು, ಪೂರ್ಣ ಚಾರ್ಜ್‌ ಇದ್ದರೆ, ಈ ಹೆಲ್ಮೆಟ್‌ಗಳು ಎಂಟು ಗಂಟೆಗಳವರೆಗೆ ನಮ್ಮನ್ನು ತಂಪಾಗಿರುವಂತೆ ಮಾಡುತ್ತವೆ.

ಈಗಾಗಲೇ ಹಲವೆಡೆ ಬಿಸಿಲಿನ ಝಳಕ್ಕೆ ಸುಸ್ತಾಗಿ ಪೊಲೀಸ್‌ ಅಧಿಕಾರಿಗಳು ರಸ್ತೆಯಲ್ಲೇ ಮೂರ್ಛೆ ಹೋದ ಘಟನೆಗಳು ನಡೆದಿವೆ. ಆದ್ದರಿಂದ ಸುರಕ್ಷತೆ ದೃಷ್ಟಿಯಿಂದ ಎಸಿ ಹೆಲ್ಮೆಟ್‌ಗಳನ್ನು ತಯಾರು ಮಾಡಿ, ಸಂಚಾರ ಪೊಲೀಸ್ ಸಿಬ್ಬಂದಿಗೆ ನೀಡಲಾಗುತ್ತಿದೆ. ಇನ್ನು ಇದಕ್ಕೆ ಉತ್ತಮ ಪ್ರತಿಕ್ರಿಯೆಗಳು ಕೂಡ ವ್ಯಕ್ತವಾಗಿವೆ.

ಇನ್ನು ಟ್ರಾಫಿಕ್‌ ಪೊಲೀಸರು ಎಸಿ ಹೆಲ್ಮೆಟ್‌ ಹಾಕಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ಹಾಗಾದರೆ ಈ ವಿಡಿಯೋಗೆ ಯಾವ ರೀತಿ ಪ್ರತಿಕ್ರಿಯೆಗಳನ್ನು ಬಂದಿವೆ ಎಂದು ಇಲ್ಲಿ ನೀಡಲಾಗಿದೆ ಗಮನಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+