ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಸ್ ವಿರುದ್ಧ ಲಸಿಕೆಗಳು 100% ರಕ್ಷಣೆ ಕೊಡುವುದಿಲ್ಲ; ತಜ್ಞರ ಎಚ್ಚರಿಕೆ

|
Google Oneindia Kannada News

ನವದೆಹಲಿ, ಜನವರಿ 07: ಭಾರತದಲ್ಲಿ ಎರಡು ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಾಮೂಹಿಕ ಲಸಿಕೆ ಕಾರ್ಯಕ್ರಮವೂ ಆರಂಭವಾಗಲಿದ್ದು, ಜನವರಿ 8ರಂದು ಎರಡನೇ ಬಾರಿ ಲಸಿಕೆಯ ಡ್ರೈ ರನ್ ಕಾರ್ಯಕ್ರಮ ನಡೆಯಲಿದೆ.

ಆದರೆ ಈ ಸೋಂಕಿನ ವಿರುದ್ಧ ಲಸಿಕೆಯೊಂದೇ ಶೇ 100ರಷ್ಟು ರಕ್ಷಣೆಯ ಖಾತರಿ ನೀಡುವುದಿಲ್ಲ ಎಂದು ತಜ್ಞರು ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಲಸಿಕೆ ಬಂತೆಂದು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಬೇಡಿ ಎಂದು ಮನವಿ ಮಾಡಿದ್ದಾರೆ. ಮುಂದೆ ಓದಿ...

"ಲಸಿಕೆ ಬಂದಾಕ್ಷಣ ಎಲ್ಲವೂ ಮುಗಿಯುವುದಿಲ್ಲ"

ಲಸಿಕೆ ಬಂತು ಎಂದು ಜನರು ನಿಟ್ಟುಸಿರುಬಿಡುವಂತಿಲ್ಲ. ಲಸಿಕೆ ಬಂದ ಮಾತ್ರಕ್ಕೆ ಮಾಸ್ಕ್ ಧರಿಸದೇ ಓಡಾಡುವ ಧೈರ್ಯವನ್ನೂ ತೆಗೆದುಕೊಳ್ಳುವಂತಿಲ್ಲ. ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಲೇಬೇಕು. ಸದ್ಯಕ್ಕೆ ಲಸಿಕೆಯೊಂದೇ ಪರಿಹಾರವೆಂದು ಪರಿಗಣಿಸುವಂತಿಲ್ಲ" ಎಂದು ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.

ಜನವರಿ 8ಕ್ಕೆ ಕೊರೊನಾ ಲಸಿಕೆಯ ಎರಡನೇ ಡ್ರೈ ರನ್ಜನವರಿ 8ಕ್ಕೆ ಕೊರೊನಾ ಲಸಿಕೆಯ ಎರಡನೇ ಡ್ರೈ ರನ್

"2022ರವರೆಗೂ ಎಚ್ಚರಿಕೆಯಿಂದಿರಬೇಕು"

ಕೇಂದ್ರ ಸರ್ಕಾರ ಕೊರೊನಾ ಲಸಿಕೆಗಳನ್ನು ಇನ್ನು ಕೆಲವೇ ದಿನಗಳಲ್ಲಿ ನೀಡುವುದು ಹೌದಾದರೂ, ಇನ್ನೂ 6ರಿಂದ 12 ತಿಂಗಳು ಎಚ್ಚರಿಕೆ ತಪ್ಪುವಂತಿಲ್ಲ. ಲಸಿಕೆಗಳು ಸಂಪೂರ್ಣ ಮಟ್ಟದಲ್ಲಿ ತಲುಪಲು 2022 ಆಗುತ್ತದೆ. ಅಲ್ಲಿಯವರೆಗೂ ನಮ್ಮ ಎಚ್ಚರಿಕೆಯಲ್ಲಿ ನಾವಿರಲೇಬೇಕಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದಕೊಳ್ಳುವುದು ಕಡ್ಡಾಯವಾಗಿದೆ ಎಂದು ಮುಂಬೈ ಹಿಂದುಜಾ ಆಸ್ಪತ್ರೆಯ ತುರ್ತು ನಿಗಾ ಮುಖ್ಯಸ್ಥ ಡಾ. ಭಾರೇಶ್ ದೆದಿಯಾ ತಿಳಿಸಿದ್ದಾರೆ.

 ರೂಪಾಂತರಗಳು ಕಾಣಿಸಿಕೊಳ್ಳುತ್ತಿರುವ ಈ ಸಂದರ್ಭ ಎಚ್ಚರಿಕೆ ಅಗತ್ಯ

ರೂಪಾಂತರಗಳು ಕಾಣಿಸಿಕೊಳ್ಳುತ್ತಿರುವ ಈ ಸಂದರ್ಭ ಎಚ್ಚರಿಕೆ ಅಗತ್ಯ

ಲಸಿಕೆ ಪಡೆದುಕೊಂಡ ನಂತರವೂ ಜಾಗರೂಕರಾಗದೇ ಇದ್ದರೆ ಮತ್ತೆ ಸೋಂಕು ಕಾಣಿಸಿಕೊಳ್ಳಬಹುದು. ಲಸಿಕೆಯೊಂದೇ ನಮ್ಮಗೆ ಶೇ 100ರಷ್ಟು ರಕ್ಷಣೆ ನೀಡಲು ಸಾಧ್ಯವಿಲ್ಲ. ಅದೂ ಕೊರೊನಾ ರೂಪಾಂತರಗಳು ಕಾಣಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಎಚ್ಚರಿಕೆ ವಹಿಸುವ ಅವಶ್ಯಕತೆ ಇದೆ ಎಂದಿದ್ದಾರೆ ಜಸ್ಲೋಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡಾ. ಮಾಲಾ ವಿ ಕನೇರಿಯಾ. ಲಸಿಕೆ ಪೆಡದುಕೊಂಡ ನಂತರವೂ ವ್ಯಕ್ತಿಗೆ ಸೋಂಕು ತಗುಲಬಹುದು. ಲಸಿಕೆಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಆದರೆ ಲಸಿಕೆ ಪಡೆದುಕೊಂಡಿದ್ದ ವ್ಯಕ್ತಿಯಲ್ಲಿ ಪೂರ್ಣಪ್ರಮಾಣದಲ್ಲಿ ಲಸಿಕೆ ಕಾರ್ಯನಿರ್ವಹಿಸುವ ಮೊದಲು ಮತ್ತೆ ವೈರಸ್ ಗೆ ತೆರೆದುಕೊಂಡರೆ, ಸೋಂಕು ಮತ್ತೆ ತಗುಲಬಹುದು ಎಂದಿದ್ದಾರೆ.

ಸೈಕಲ್‌ನಲ್ಲಿ ಬಂತು ಕೊರೊನಾ ಲಸಿಕೆ; ಪೂರ್ವಸಿದ್ಧತೆ ಬಗ್ಗೆಯೇ ಅನುಮಾನಸೈಕಲ್‌ನಲ್ಲಿ ಬಂತು ಕೊರೊನಾ ಲಸಿಕೆ; ಪೂರ್ವಸಿದ್ಧತೆ ಬಗ್ಗೆಯೇ ಅನುಮಾನ

 ಮಾಸ್ಕ್ ಧರಿಸಲೇಬೇಕು

ಮಾಸ್ಕ್ ಧರಿಸಲೇಬೇಕು

ಮೊದಲನೆಯದಾಗಿ ಲಸಿಕೆಗಳು ಶೇ 100ರಷ್ಟು ಪರಿಣಾಮಕಾರಿಯಲ್ಲ. ಕೋವಿಶೀಲ್ಡ್ ಲಸಿಕೆ ಶೇ. 70ರಷ್ಟು ಪರಿಣಾಮಕಾರಿ ಎನ್ನಲಾಗಿದ್ದು, ಕೊವ್ಯಾಕ್ಸಿನ್ ಪರಿಣಾಮಗಳ ಕುರಿತು ಅಧ್ಯಯನ ಇನ್ನೂ ಮುಂದುವರೆದಿದೆ. ಎಲ್ಲರಿಗೂ ಲಸಿಕೆ ದೊರೆಯುವಷ್ಟರಲ್ಲಿ ಮತ್ತೊಂದು ಕಡೆಯಿಂದ ವೈರಸ್ ಹರಡುತ್ತಲೇ ಇರಬಹುದು. ಹೀಗಾಗಿ ಸಂಪೂರ್ಣ ಲಸಿಕೆ ದೊರೆಯುವವರೆಗೂ ಮಾಸ್ಕ್‌ ಧರಿಸುವುದು ಕಡ್ಡಾಯ ಎಂದು ಎಚ್ಚರಿಕೆ ನೀಡಿದ್ದಾರೆ.

English summary
Vaccination doesn't guarantee 100% protection, wearing mask is must said experts
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X