Uniform Civil Code: ದೇಶದ ಈ ರಾಜ್ಯದಲ್ಲಿ ಇಂದಿನಿಂದಲೇ ಏಕರೂಪ ನಾಗರಿಕ ಸಂಹಿತೆ ಜಾರಿ
Uniform Civil Code Implementation: ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಪರ-ವಿರೋಧಗಳು ಚರ್ಚೆಗಳು ನಡೆಯುತ್ತಲೇ ಇವೆ. ಈ ನಡುವೆಯೇ ಉತ್ತರಾಖಂಡ್‌ನ ಸಿಎಂ ಪುಷ್ಕರ್ ಸಿಂಗ್ ಧಾಮಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ರಾಜ್ಯದಲ್ಲಿ ಇಂದಿನಿಂದಲೇ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ಮೂಲಕ ಇದನ್ನು ಜಾರಿ ಮಾಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಜನವರಿ 28ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಉತ್ತರಖಂಡ್‌ಗೆ ಭೇಟಿ ನೀಡಲಿದ್ದು, ಇದಕ್ಕೂ ಮುನ್ನವೇ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿ ಮೋದಿಗೆ ಗಿಫ್ಟ್ ಕೊಡಲು ಇಲ್ಲಿನ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಉತ್ತರಾಖಂಡ್ ಗೃಹ ಕಾರ್ಯದರ್ಶಿ ಶೈಲೇಶ್ ಬಾಗೋಲಿ ಘೋಷಣೆ ಮಾಡಿದ್ದಾರೆ. ಯುಸಿಸಿ ಉತ್ತರಾಖಂಡ್‌ನಲ್ಲಿ ಜಾರಿಗೊಳಿಸುತ್ತೇವೆ. ರಾಜ್ಯದ ಹೊರಗೆ ವಾಸಿಸುವ ನಿವಾಸಿಗಳಿಗೂ ಯುಸಿಸಿ ವ್ಯಾಪ್ತಿ ವಿಸ್ತರಣೆ ಮಾಡುವುದಾಗಿಯೂ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಪುಷ್ಕರ್ ಸಿಂಗ್ ಧಾಮಿ ಯುಸಿಸಿ ಪೋರ್ಟಟ್ಗೆ ಚಾಲನೆ ನೀಡಲಿದ್ದಾರೆ. ಇಂದು ಯುಸಿಸಿ ಪೋರ್ಟಲ್ ಅನಾವರಣಗೊಳಿಸುವ ಮೂಲಕ ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಅಧಿಸೂಚನೆ ಹೊರಡಿಸಿದ್ದಾರೆ. ಸಮಾಜದಲ್ಲಿ ಯುಸಿಸಿ ಏಕರೂಪತೆಯನ್ನು ತರಲಿದೆ. ಇದರಿಂದ ಎಲ್ಲಾ ನಾಗರಿಕರಿಗೆ ಸಮಾನ ಹಕ್ಕು ಮತ್ತು ಜವಾಬ್ದಾರಿ ಸಿಕ್ಕಂತಾಗಲಿದೆ ಎಂದು ಹೇಳಿದ್ದಾರೆ.
ಮದುವೆ, ವಿಚ್ಛೇದನ, ಉತ್ತರಾಧಿಕಾರವನನು ನಿಯಂತ್ರಣ ಮಾಡುವ ವೈಯಕ್ತಿಕ ಕಾನೂನುಗಳಲ್ಲಿ ಏಕರೂಪತೆಗೆ ಯುಸಿಸಿ ದಾರಿಯಾಗಲಿದೆ. ಇದರಡಿಯಲ್ಲಿ ವೈವಾಹಿಕ ಪರಿಸ್ಥಿತಿಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗುತ್ತದೆ. ಮುಖ್ಯವಾಗಿ ಇದು ಇಡೀ ರಾಜ್ಯಕ್ಕೆ ಅನ್ವಯಿಸಿದೆ. ಆದರೂ ಪರಿಶಿಷ್ಟ ಪಂಗಡ ಮತ್ತು ಕೆಲವು ಸಂರಕ್ಷಿತ ಸಮುದಾಯಗಳಿಗೆ ವಿನಾಯ್ತು ಇರಲಿದೆ ಎಂದು ತಿಳಿಸಿದ್ದಾರೆ.
ಉತ್ತರಾಖಂಡ್ ಸರ್ಕಾರ 2 ಅಧಿಸೂಚನೆ ಹೊರಡಿಸಲಿದೆ. ಒಂದು ಯುಸಿಸಿ ಅನುಷ್ಠಾನಕ್ಕೆ ಮತ್ತೊಂದು ನಿಯಮ ನಿಬಂಧನೆಗಳಿಗೆ ಎಂದು ಉತ್ತರಾಖಂಡ್ ಗೃಹ ಕಾರ್ಯದರ್ಶಿ ಶೈಲೇಶ್ ಹೇಳಿದ್ದಾರೆ. ಉತ್ತರಾಖಂಡ್ ಈ ಕಾನೂನು ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಆಸ್ತಿ ಹಕ್ಕು ಸೇರಿ ವೈಯಕ್ತಿಕ ವಿಷಯಗಳಿಗೆ ಏಕರೂಪದ ನಿಯಮ ರಚಿಸುವ ಗುರಿಯನ್ನು ಹೊಂದಿದೆ. ಧರ್ಮ, ಲಿಂಗ ಲೆಕ್ಕಿಸದೇ ಎಲ್ಲಾ ನಾಗರಿಕರಿಗೆ ಸಮಾನತೆಯನ್ನು ಖಾತ್ರಿಪಡಿಸಲಿದೆ.
ಉತ್ತರಾಖಂಡ್ ಜಾರಿಗೊಳಿಸಲಿರುವ ಏಕರೂಪ ನಾಗರಿಕ ಸಂಹಿತೆ 4 ಭಾಗಗಳು ಮತ್ತು 7 ಅಧ್ಯಾಯಗಳಲ್ಲಿ 392 ವಿಭಾಗಗಳನ್ನು ಹೊಂದಿದೆ. ಇದು ಮಹಿಳೆಯರಿಗೆ ಮದುವೆ, ವಿಚ್ಛೇದನ, ಜೀವನಾಂಶ ಮತ್ತು ಆಸ್ತಿ ಉತ್ತರಾಧಿಕಾರದಲ್ಲಿ ಸಮಾನ ಹಕ್ಕು ನೀಡಲಿದೆ. ಬಹುಪತ್ನಿತ್ವಕ್ಕೂ ತಡೆ ಬಿದ್ದಂತಾಗಲಿದೆ. ಮದುವೆ ವಯಸ್ಸು ಪುರುಷರಿಗೆ 21 ಮತ್ತು ಮಹಿಳೆಯರಿಗೆ 18 ಎಂದು ನಿಗದಿಪಡಿಸಿದೆ. ಅಲ್ಲದೆ ಮದುವೆ ನೋಂದಣಿ ಕಡ್ಡಾಯ ಆಗಲಿದೆ.
ಹೊಸ ಕಾನೂನಿನ ಪ್ರಕಾರ ಲೀವ್ ಇನ್ ಸಂಬಂಧ, ಲಿವ್ ಇನ್ ಸಂಬಂಧದಲ್ಲಿ ಜನಿಸಿದ್ದ ಮಕ್ಕಳ ನಿಯಮಗಳಲ್ಲಿ ಬದಲಾವಣೆ ಆಗಲಿದೆ. 2010ರ ಮಾರ್ಚ್ 27ರ ಬಳಿಕ ನಡೆದ ವಿವಾಹಗಳ ನೋಂದಣಿ ಈಗಾಗಲೇ ಆಗಿದ್ದರೆ, ಕೇವಲ ಮಾಹಿತಿ ನೀಡಿದರೆ ಸಾಕು. ನೋಂದಣಿ ಆಗದಿದ್ದರೆ 6 ತಿಂಗಳೊಳಗೆ ನೋಂದಾಯಿಸಬೇಕಾಗುತ್ತದೆ.
2010ರ ಮಾರ್ಚ್ 27ರ ಮೊದಲಿನ ವಿವಾಹಗಳನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಅದೇ ರೀತಿಯಲ್ಲಿ ವಿವಾಹ ನೋಂದಣಿಯನ್ನ ಕೂಡ ಅರ್ಜಿ ಸ್ವೀಕರಿಸಿದ 15 ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. 15 ದಿನಗಳೊಳಗೆ ಮದುವೆ ನೋಂದಣಿ ಅರ್ಜಿ ಬಗ್ಗೆ ನಿರ್ಧಾರ ಮಾಡದಿದ್ದರೆ, ಆ ಅರ್ಜಿ ಸ್ವಯಂ ಚಾಲಿತವಾಗಿ ರಿಜಿಸ್ಟ್ರಾರ್ಗೆ ರವಾನಿಸಲಾಗುತ್ತದೆ. ಅಂದರೆ ಸ್ವಯಂಚಾಲಿತವಾಗಿ ಸ್ವೀಕರಿಸಲಾಗಿದೆ ಅಂತ ಪರಿಗಣಿಸಲಾಗುತ್ತದೆ ಎಂದು ತಿಳಿದುಬಂದಿದೆ.












Click it and Unblock the Notifications