ಹಿಮಪ್ರವಾಹಕ್ಕೆ ತಪೋವನ್ ಹೈಡ್ರೋಪವರ್ ಯೋಜನೆ ನಾಶ
ಡೆಹ್ರಾಡೂನ್, ಫೆಬ್ರವರಿ 8: ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯ ಹಿಮಪರ್ವತಗಳಲ್ಲಿ ಭಾನುವಾರ ಉಂಟಾದ ಭಾರಿ ಹಿಮಪಾತ ಹಾಗೂ ನಂತರ ತ್ವರಿತ ಪ್ರವಾಹಕ್ಕೆ ಸಿಲುಕಿ ನಿರ್ಮಾಣ ಹಂತದ ತಪೋವನ್ ಹೈಡ್ರೋಪವರ್ ಯೋಜನೆ ಸಂಪೂರ್ಣ ನಾಶವಾಗಿದೆ ಎಂದು ತಿಳಿದು ಬಂದಿದೆ.
ದೇವ ಭೂಮಿ ಉತ್ತರಾಖಂಡ್ ರಾಜ್ಯದಲ್ಲಿ ಹರಿಯುವ ನದಿಗಳಲ್ಲಿ ನೀರಿನ ಮಟ್ಟ ತ್ವರಿತಗತಿಯಲ್ಲಿ ಏರಿಕೆ ಕಂಡು ಪ್ರವಾಹ ಭೀತಿ ಉಂಟಾಗಿದೆ. ದೌಲಿಗಂಗಾ ನದಿ ನೀರಿನ ಮಟ್ಟದ ಅಪಾಯದ ಮೀರಿ ಹರಿಯುತ್ತಿದ್ದು, ನದಿಪಾತ್ರದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸೇರಿಸಲಾಗಿದೆ.
ಭಾರಿ ಹಿಮಪಾತ, ನದಿಪ್ರವಾಹದಿಂದಈ ನಡುವೆ ಎನ್ ಟಿಪಿಸಿ ನಿರ್ವಹಣೆಯ ನಿರ್ಮಾಣ ಹಂತದಲ್ಲಿದ್ದ ಋಷಿಗಂಗಾ ಹೈಡ್ರೋಪವರ್ ಯೋಜನೆ ಹಾಗೂ ತಪೋವನ್ ಜಲವಿದ್ಯುತ್ ಯೋಜನೆಗಾಗಿ ನಿರ್ಮಿಸಿದ್ದ ಬ್ಯಾರೇಜ್ ಧ್ವಂಸಗೊಂಡಿದೆ. ತಪೋವನ್ ಯೋಜನೆ ಪ್ರದೇಶದ ಸುರಂಗದಲ್ಲಿ ಸಿಲುಕಿದ್ದ 12 ಕಾರ್ಮಿಕರನ್ನು ರಕ್ಷಿಸಲಾಗಿದೆ. ಭಾನುವಾರ 7 ಗಂಟೆ ರಕ್ಷಣಾ ಕಾರ್ಯ ನಡೆಸಲಾಗಿತ್ತು, 14 ಮಂದಿ ಶವ ಪತ್ತೆಯಾಗಿದೆ ಇನ್ನೂ ಅನೇಕ ಮಂದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ ಎಂದು ಐಟಿಬಿಪಿ ಅಧಿಕಾರಿಗಳು ಹೇಳಿದ್ದಾರೆ.

ತಪೋವನ್ ವಿಷ್ಣುಗಡ್ ಪವರ್ ಘಟಕ ಜಲವಿದ್ಯುತ್ ಯೋಜನೆಯಾಗಿದ್ದು, 520ಮೆಗಾವ್ಯಾಟ್ ಉತ್ಪಾದನೆ ಗುರಿ ಹೊಂದಿತ್ತು. ಚಮೋಲಿ ಜಿಲ್ಲೆಯ ಧೌಲಿಗಂಗಾ ನದಿ ನೀರನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆಗೆ ಎನ್ಟಿಪಿಸಿ ಮುಂದಾಗಿತ್ತು.












Click it and Unblock the Notifications