ಸೈನ್ಯದ ಸಾಹಸ: ನಿಯಂತ್ರಣಕ್ಕೆ ಬಂದ ಉತ್ತರಾಖಂಡ ಕಾಡ್ಗಿಚ್ಚು

Written By:
Subscribe to Oneindia Kannada

ನವದೆಹಲಿ, ಮೇ. 02: ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿದ್ದ ಉತ್ತರಾಖಂಡಕ್ಕೆ ಇದೀಗ ಕಾಡ್ಗಿಚ್ಚಿನ ಕಾಟ. ಕಳೆದ ಒಂದು ವಾರದಿಂದ ಕಾಡನ್ನು ಬೆಂಕಿ ಆಹುತಿ ಪಡೆಯುತ್ತಲೇ ಇದೆ. ಇಸ್ರೋದ ಸಹಕಾರದಲ್ಲಿ ಭಾರತೀಯ ಸೈನ್ಯ ಕಾಡ್ಗಿಚ್ಚು ಆರಿಸುವ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದೆ.

ಇನ್ನೊಂದೆಡೆ ಕಾಡ್ಗಿಚ್ಚು ಶೇಕಡ 70ರಷ್ಟು ನಿಯಂತ್ರಣಕ್ಕೆ ಬಂದಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ತಿಳಿಸಿದೆ. ಬೆಂಕಿ ನಿಯಂತ್ರಣಕ್ಕೆ ಕಾರ್ಯಾಚರಣೆ ನಡೆಯುತ್ತಿದ್ದು ಹೆಲಿಕ್ಯಾಪ್ಟರ್ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಎನ್‌ಡಿಆರ್‌ಎಫ್‌ ಮಹಾ ನಿರ್ದೇಶಕ ಒ.ಪಿ.ಸಿಂಗ್‌ ತಿಳಿಸಿದ್ದಾರೆ.['ಸುಡುತ್ತಿರುವ ಪಶ್ಚಿಮ ಘಟ್ಟ ಮೊದಲು ಉಳಿಸಿಕೊಳ್ಳಿ']

ಕಾಡ್ಗಿಚ್ಚಿನ ಆರ್ಭಟಕ್ಕೆ ಸಿಲುಕಿ ಉತ್ತರಾಖಂಡದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಇಬ್ಬರು ಮಕ್ಕಳು ಮತ್ತು ಓರ್ವ ಮಹಿಳೆ ಸೇರಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಇಸ್ರೋ ಸಹ ಕಾಡ್ಗಿಚ್ಚಿನ ಚಿತ್ರಗಳನ್ನು ಬಿಡುಗಡೆ ಮಾಡಿದೆ.[ಉತ್ತರಾಖಂಡ ಪ್ರವಾಹದ ಚಿತ್ರಗಳು]

ಜಮ್ಮು ಕಾಶ್ಮೀರ ಅರಣ್ಯದಲ್ಲೂ ಬೆಂಕಿ: ಸೋಮವಾರ ಜಮ್ಮು ಮತ್ತು ಕಾಶ್ಮೀರದ ಅರಣ್ಯ ಪ್ರದೇಶದಲ್ಲೂ ಬೆಂಕಿ ಕಾಣಿಸಿಕೊಂಡಿದ್ದು ಅಪಾಯದ ಮುನ್ಸೂಚನೆಯನ್ನು ನೀಡಿದೆ. ಸ್ಯಾಟಲೈಟ್ ಚಿತ್ರಗಳನ್ನು ಬಿಡುಗಡೆ ಮಾಡಿರುವ ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರ, ಉತ್ತರ ಭಾರತದಾದ್ಯಂತ ಸುಮಾರು 1, 300 ಸಕ್ರಿಯ ಕಾಡ್ಗಿಚ್ಚು ಪ್ರಕರಣಗಳು ಕಂಡುಬಂದಿದೆ ಎಂದು ಹೇಳಿದೆ.

-
-
-
-
-
-
-
-
-
-

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Latest satellite imageries of Uttarakhand have reported that the forest fire has gone out in over 70 per cent of the affected areas, even as the NDRF has deployed over 130 personnel to tackle the massive blaze. "We have been informed that fresh images from satellite has shown that the effective area under fire in Uttarakhand has come down to 110-115 locations from the earlier about 427.
Please Wait while comments are loading...