ಉತ್ತರಾಖಂಡ್: ಸಚಿವ ಹರಕ್ ಸಿಂಗ್ ಹಾಗೂ ಶಾಸಕರೊಬ್ಬರ ದಿಢೀರ್ ರಾಜೀನಾಮೆ

ಡೆಹ್ರಾಡೂನ್, ಡಿಸೆಂಬರ್ 25: ಚುನಾವಣೆ ಹೊಸ್ತಿಲಿನಲ್ಲಿ ರಾಜೀನಾಮೆ ಪರ್ವ ಮುಂದುವರೆದಿದೆ. ಉತ್ತರಾಖಂಡದಲ್ಲಿ ಉತ್ತರಾಖಂಡ್ ನಲ್ಲಿ ಕ್ಯಾಬಿನೆಟ್ ಸಚಿವ ಹರಕ್ ಸಿಂಗ್ ರಾವತ್ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಶಾಸಕರೊಬ್ಬರು ರಾಜೀನಾಮೆ ನೀಡಿದ್ದಾರೆ.

"ನನ್ನ ಕ್ಷೇತ್ರದ ಜನತೆಯ ಸೇವೆಗೆ ಹೋಲಿಸಿದರೆ ನನಗೆ ಕ್ಯಾಬಿನೆಟ್ ಸಚಿವ ಸ್ಥಾನ ಏನು ದೊಡ್ಡದಲ್ಲ, ಕೋಟ್ದ್ವಾರ್ ನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ನನ್ನ ಬಹುದಿನಗಳ ಬೇಡಿಕೆಯಾಗಿದ್ದು, ಅದನ್ನು ನಿರ್ಲಕ್ಷ್ಯಿಸಲಾಗಿದೆ" ಎಂದು ತಮ್ಮ ರಾಜೀನಾಮೆಗೆ ಕಾರಣವಾಗಿರುವ ಅಸಮಾಧಾನವನ್ನು ಹರಕ್ ಸಿಂಗ್ ರಾವತ್ ಬಹಿರಂಗಪಡಿಸಿದ್ದಾರೆ.

Harak Singh Rawat

ಹರಕ್ ಸಿಂಗ್ ರಾವತ್ ಡಿ.23 ರಂದು ದೆಹಲಿಯಲ್ಲಿದ್ದರು ಅವರು ಹರಿದ್ವಾರದಲ್ಲಿ ಮಾಜಿ ಸಿಎಂ ಹರೀಶ್ ರಾವತ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಕೆಲವು ಮೂಲಗಳು ಹೇಳಿದರೆ, ಬಿಜೆಪಿ ಮಾತ್ರ ಇದು ಕೇವಲ ವದಂತಿಯಷ್ಟೇ ಎಂದು ಸುದ್ದಿಯನ್ನು ಅಲ್ಲಗಳೆದಿದೆ. ಅಷ್ಟೇ ಅಲ್ಲದೇ ಯಾವುದೇ ವಿಷಯವಿರಲಿ ಅದನ್ನು ಶೀಘ್ರವೇ ಬಗೆಹರಿಸುವುದಾಗಿ ತಿಳಿಸಿದೆ.

ಹರಕ್ ಸಿಂಗ್ ರಾವತ್ ತುಂಬಾ ಸಮಯದಿಂದ ಮೆಡಿಕಲ್ ಕಾಲೇಜು ಮಂಜೂರಾತಿಗಾಗಿ ಮನವಿ ಮಾಡುತ್ತಿದ್ದರು. ಹಲವು ಬಾರಿ ಸರ್ಕಾರದ ಮುಂದೆ ಈ ವಿಚಾರ ಎತ್ತಿದ್ದರು. ಆದರೆ ಅವರ ಬೇಡಿಕೆಯನ್ನು ಈಡೇರಿಸಲಾಗಿಲ್ಲ. ಹೀಗಾಗಿ ಅವರು ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದಾರೆ.

ಸಚಿವ ಸ್ಥಾನದಿಂದಾಗಲೀ, ಪಕ್ಷದಿಂದಾಗಲೀ ಯಾರೂ ರಾಜೀನಾಮೆ ನೀಡುತ್ತಿಲ್ಲ" ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಮದನ್ ಕೌಶಿಕ್ ಸ್ಪಷ್ಟನೆ ನೀಡಿದ್ದಾರೆ. ಸಚಿವ ಸಂಪುಟ ಸಭೆ ನಡೆಯುತ್ತಿದ್ದಾಗಲೇ ಅರ್ಧದಲ್ಲಿ ಆಕ್ರೋಶಗೊಂಡ ಹರಕ್ ಸಿಂಗ್ ರಾವತ್ ತಮ್ಮ ರಾಜೀನಾಮೆಯನ್ನು ಘೋಷಿಸಿದ್ದರು. ಬಿಜೆಪಿಯ ಮತ್ತೋರ್ವ ಶಾಸಕ ಉಮೇಶ್ ಶರ್ಮ ಸಹ ರಾಜೀನಾಮೆ ನೀಡಾಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಬಿಜೆಪಿ ಮಾತ್ರ ಅಸಮಾಧಾನವನ್ನು ಶೀಘ್ರವೇ ಪರಿಹರಿಸುವುದಾಗಿ ಹೇಳಿದೆ. ಈ ವರದಿ ಪ್ರಕಟವಾಗುವವರೆಗೂ ಉತ್ತರಾಖಂಡ್ ನ ರಾಜ್ಯಪಾಲರು ಯಾವುದೇ ರಾಜೀನಾಮೆಯನ್ನೂ ಅಂಗೀಕರಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+