ಉ.ಪ್ರ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಓರ್ವ ಆರೋಪಿ ಬಂಧನ
ಮುಜಾಫರ್ ನಗರ, ಜನವರಿ 10: ಉತ್ತರ ಪ್ರದೇಶದ ಮುಜಾಫರ್ ನಗರದ ಬುಧಾನಾ ಎಂಬಲ್ಲಿ 15 ಅಪ್ರಾಪ್ತೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜ.5 ರಂದು ಸಹೋದರನೊಡನೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಅಪ್ರಾಪ್ತೆಯನ್ನು ಇಬ್ಬರು ಕಿಡಿಗೇಡಿಗಳು ಅಪಹರಿಸಿದ್ದಲ್ಲದೆ, ಸಹೋದರನನ್ನು ಚೆನ್ನಾಗಿ ಥಳಿಸಿ, ಗನ್ ತೋರಿಸಿ ಸಾಯಿಸುವುದಾಗಿ ಹೆದರಿಸಿ ಅಪ್ರಾಪ್ತೆಯ ಮೇಲೆ ಸಾಮುಹಿಕ ಅತ್ಯಾಚಾರ ಎಸಗಿದ್ದರು.
ನಂತರ ಈ ವಿಷಯವನ್ನು ಯಾರಿಗಾದರೂ ಹೇಳಿದಲ್ಲಿ ಸಾಯಿಸುವುದಾಗಿ ಬೆದರಿಸಿದ್ದರು. ಘಟನೆಯ ನಂತರ ಮನೆಗೆ ಬಂದ ಬಾಲಕಿ ಮತ್ತು ಆಕೆಯ ಸಹೋದರ, ಈ ವಿಷಯವನ್ನು ಮನೆಯಲ್ಲಿ ತಿಳಿಸಿದ್ದಾರೆ. ಪಾಲಕರು ತಕ್ಷಣವೇ ಬಾಲಕಿಯೊಂದಿಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕಿಯ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಿರುವ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅತ್ಯಾಚಾರಿಗಳು ಅದೇ ಊರಿನ ಬಬ್ಲಿ ಮತ್ತು ಆಶಿಶ್ ಎಂದು ಗುರುತಿಸಲಾಗಿದೆ. ಈ ಇಬ್ಬರಲ್ಲಿ ಒಬ್ಬ ಆರೋಪಿ ಸದ್ಯಕ್ಕೆ ಪೊಲೀಸ್ ವಶದಲ್ಲಿದ್ದು, ಇನ್ನೊಬ್ಬನ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.












Click it and Unblock the Notifications