• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆ.27 ಹಾಗೂ ಸೆ.3ರಂದು ಯು.ಎಸ್. ಯೂನಿವರ್ಸಿಟಿ ವರ್ಚ್ಯುವಲ್ ಫೇರ್ಸ್

|
Google Oneindia Kannada News

ಚೆನ್ನೈ, ಆಗಸ್ಟ್ 25: ಭಾರತದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ 100ಕ್ಕೂ ಹೆಚ್ಚು ಯು.ಎಸ್. ವಿಶ್ವವಿದ್ಯಾಲಯಗಳು ಮತ್ತು ಕಾಲೇಜು ಪ್ರತಿನಿಧಿಗಳೊಂದಿಗೆ ವಿಶ್ವವಿದ್ಯಾಲಯದ ಕಾರ್ಯಕ್ರಮಗಳು ಮತ್ತು ಪ್ರವೇಶ ಮಾನದಂಡ ಕುರಿತು ಮುಂದೆ ಬರುವ ಎಜುಕೇಷನ್ ಯು.ಎಸ್.ಎ ಯು.ಎಸ್. ಯೂನಿವರ್ಸಿಟಿ ವರ್ಚುಯಲ್ ಫೇರ್ಸ್ 2021ರಲ್ಲಿ ಸಂವಹನ ನಡೆಸಲು ಅವಕಾಶ ಕಲ್ಪಿಸಿದೆ.

ಅವರ ಮನೆಗಳ ಅನುಕೂಲದಿಂದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಯು.ಎಸ್. ವಿಶ್ವವಿದ್ಯಾಲಯಗಳಲ್ಲಿ ಕ್ಯಾಂಪಸ್ ಲೈಫ್, ಹಣಕಾಸು ನೆರವಿನ ಆಯ್ಕೆಗಳು, ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳು ಮತ್ತು ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸುರಕ್ಷತೆಯ ಮುನ್ನೆಚ್ಚರಿಕೆಗಳ ಕುರಿತು ಮೌಲಿಕ ಮಾಹಿತಿ ಪಡೆಯುತ್ತಾರೆ.

ಅಮೆರಿಕಾದ ಮೂಲೆ ಮೂಲೆಗಳಿಂದ ಬಂದಿರುವ ಉನ್ನತ ಶಿಕ್ಷಣ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಸ್ನಾತಕ, ಸ್ನಾತಕೋತ್ತರ ಮತ್ತು ಡಾಕ್ಟೊರಲ್ ಮಟ್ಟಗಳ ವಿಸ್ತಾರ ಶ್ರೇಣಿಯ ಶೈಕ್ಷಣಿಕ ಕಾರ್ಯಕ್ರಮಗಳ ವಿವರಗಳನ್ನು ನೀಡುತ್ತವೆ. ಭಾಗವಹಿಸಲು ಯಾವುದೇ ಯಾವುದೇ ನೋಂದಣಿ ಶುಲ್ಕವಿಲ್ಲ.

ಯುನೈಟೆಡ್ ‍ಸ್ಟೇಟ್ಸ್ ನಲ್ಲಿ ಮಾಸ್ಟರ್ಸ್ ಅಥವಾ ಪಿಎಚ್.ಡಿ. ಕಾರ್ಯಕ್ರಮಗಳಿಗೆ ಸೇರಲು ಬಯಸುವವರಿಗೆ ಎಜುಕೇಷನ್ ಯು.ಎಸ್.ಎ. ಯು.ಎಸ್. ಯೂನಿವರ್ಸಿಟಿ ಗ್ರಾಜುಯೇಟ್ ವರ್ಚುಯಲ್ ಫೇರ್ ಆಗಸ್ಟ್ 27ರಂದು ಶುಕ್ರವಾರ ಸಂಜೆ ಭಾರತೀಯ ಕಾಲಮಾನ 5.30ರಿಂದ ರಾತ್ರಿ 10.30ರವರೆಗೆ ನಡೆಯಲಿದೆ. ದಯವಿಟ್ಟು ನೋಂದಾಯಿಸಿ: https://bit.ly/EdUSAFair21EmbWeb

ಅಮೆರಿಕಾದಲ್ಲಿ ಅಸೋಸಿಯೇಟ್ ಅಥವಾ ಬ್ಯಾಚುಲರ್ ಪದವಿ ಕಾರ್ಯಕ್ರಮಗಳನ್ನು ಬಯಸುವ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಎಜುಕೇಷನ್ ಯು.ಎಸ್.ಎ., ಯು.ಎಸ್. ಯೂನಿವರ್ಸಿಟಿ ಅಂಡರ್ ಗ್ರಾಜುಯೇಟ್ ವರ್ಚುಯಲ್ ಫೇರ್ ಅನ್ನು ಸೆಪ್ಟೆಂಬರ್ 3ರಂದು ಶುಕ್ರವಾರ ಭಾರತೀಯ ಕಾಲಮಾನ ಸಂಜೆ 5.30ರಿಂದ ರಾತ್ರಿ 10.30ರವರೆಗೆ ಆಯೋಜಿಸಿದೆ. ದಯವಿಟ್ಟು ನೋಂದಾಯಿಸಿ: https://bit.ly/UGEdUSAFair21EmbWeb

ಚೆನ್ನೈನ ಯು.ಎಸ್. ಕಾನ್ಸುಲ್ ಜನರಲ್ ಜ್ಯುಡಿತ್ ರೇವಿನ್: "ಯು.ಎಸ್. ವಿಶ್ವವಿದ್ಯಾಲಯಗಳು ಭಾರತದ ವಿದ್ಯಾರ್ಥಿಗಳನ್ನು ಅವರ ಕಠಿಣ ಪರಿಶ್ರಮ, ಪ್ರತಿಭೆ ಮತ್ತು ಯು.ಎಸ್. ತರಗತಿಗೆ ಅವರ ಸಾಂಸ್ಕೃತಿಕ ಮತ್ತು ಬೌದ್ಧಿಕ ಕೊಡುಗೆಗಾಗಿ ನಿಜಕ್ಕೂ ಗೌರವಿಸುತ್ತವೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ 4,500ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಕಲ್ಪಿಸಿಕೊಳ್ಳಬಲ್ಲ ಅಧ್ಯಯನ ಕ್ಷೇತ್ರದಲ್ಲೂ ಕಾರ್ಯಕ್ರಮಗಳನ್ನು ನೀಡುತ್ತಿವೆ. ನಾವು ಭಾರತೀಯ ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನು ನಮ್ಮ ಮುಂಬರುವ ಉಚಿತ ಎಜುಕೇಷನ್ ಯು.ಎಸ್.ಎ. ಫೇರ್ಸ್ ನಲ್ಲಿ ಭಾಗವಹಿಸಲು ಆಹ್ವಾನಿಸುತ್ತೇವೆ.

ನೀವು ನೇರವಾಗಿ 100 ಯು.ಎಸ್.ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಸಂವಹನ ನಡೆಸಬಹುದು ಮತ್ತು ಭಾರತೀಯ ವಿದ್ಯಾರ್ಥಿಗಳಿಗೆ ಏಕೆ ಯುನೈಟೆಡ್ ಸ್ಟೇಟ್ಸ್ ಆದ್ಯತೆಯ ಆಯ್ಕೆಯಾಗಿ ಉಳಿದಿದೆ ಎಂದು ಅರಿಯಬಹುದು" ಎಂದರು.

ಯುನೈಟೆಡ್ ಸ್ಟೇಟ್ಸ್-ಇಂಡಿಯಾ ಎಜುಕೇಷನಲ್ ಫೌಂಡೇಷನ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಡಂ ಗ್ರೊಸ್ಕಿ, "ವಿಶ್ವದಾದ್ಯಂತ ಈ ಅಸಾಧಾರಣ ಸಮಯದಲ್ಲಿ ಎಜುಕೇಷನ್ ಯು.ಎಸ್.ಎ. ಇಂಡಿಯಾ ವಿದ್ಯಾರ್ಥಿಗಳಿಗೆ ಯು.ಎಸ್.ನ ಉನ್ನತ ಶಿಕ್ಷಣದ ಕುರಿತಾದ ಮಾಹಿತಿಯನ್ನು ನಮ್ಮ ಹಲವು ಆನ್ಲೈನ್ ಸಂಪನ್ಮೂಲಗಳಾದ ಮುಂದಿನ ವರ್ಚುಯಲ್ ಮೇಳಗಳ ಮೂಲಕ ದೊರೆಯುವಂತೆ ಮಾಡುತ್ತಿದೆ.

ನಾವು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಯುನೈಟೆಡ್ ಸ್ಟೇಟ್ಸ್ ನಲ್ಲಿ ಅಧ್ಯಯನ ನಡೆಸುವ ಅವರ ಕನಸುಗಳಿಗೆ ಹತ್ತಿರವಾಗಬೇಕೆಂದು ಆಹ್ವಾನಿಸುತ್ತೇವೆ" ಎಂದರು.

ಎಜುಕೇಷನ್ ಯು.ಎಸ್.ಎ ಕುರಿತು: ಎಜುಕೇಷನ್ ಯು.ಎಸ್.ಎ, ಯು.ಎಸ್. ಉನ್ನತ ಶಿಕ್ಷಣದ ಅಧಿಕೃತ ಮೂಲವಾಗಿದೆ ಮತ್ತು ಯು.ಎಸ್. ಡಿಪಾರ್ಟ್ ಮೆಂಟ್ ಆಫ್ ಸ್ಟೇಟ್ ನ ಜಾಲದ ಸದಸ್ಯನಾಗಿದ್ದು ವಿಶ್ವದಾದ್ಯಂತ 425 ಅಂತಾರಾಷ್ಟ್ರೀಯ ವಿದ್ಯಾರ್ಥಿ ಸಲಹಾ ಕೇಂದ್ರಗಳನ್ನು ಹೊಂದಿದೆ. ಎಜುಕೇಷನ್ ಯು.ಎಸ್.ಎ. ಕೇಂದ್ರಗಳು ಶಿಕ್ಷಣ ಮೇಳಗಳು ಮತ್ತು ಶಾಲೆಗಳು, ಯೂನಿವರ್ಸಿಟಿಗಳು ಮತ್ತಿತರೆ ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಆನ್ಲೈನ್ ಕಾರ್ಯಕ್ರಮ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಭವನೀಯ ವಿದ್ಯಾರ್ಥಿಗಳನ್ನು ತಲುಪುವ ಮೂಲಕ ಯುನೈಟೆಡ್ ಸ್ಟೇಟ್ಸ್ ನಲ್ಲಿ ಕಲಿಯುವ ಕುರಿತು ನಿಖರ, ಸಮಗ್ರ ಮತ್ತು ಪ್ರಸ್ತುತ ಮಾಹಿತಿ ನೀಡುತ್ತದೆ.

ಎಂಟು ಎಜುಕೇಷನ್ ಯು.ಎಸ್.ಎ ಕೇಂದ್ರಗಳು ಅಹಮದಾಬಾದ್, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಲ್ಕತಾ, ಮುಂಬೈ ಮತ್ತು ನವ ದೆಹಲಿಗಳಲ್ಲಿದ್ದು ಭಾರತದ ವಿವಿಧ ಸಂಸ್ಥೆಗಳಾದ ಯುನೈಟೆಡ್ ಸ್ಟೇಟ್ಸ್-ಇಂಡಿಯಾ ಎಜುಕೇಷನಲ್ ಫೌಂಡೇಷನ್(ಯು.ಎಸ್.ಐ.ಇ.ಎಫ್); ಇಂಡೊ ಅಮೆರಿಕನ್ ಎಜುಕೇಷನ್ ಸೊಸೈಟಿ, ಅಹಮದಾಬಾದ್; ಯಷ್ನ ಟ್ರಸ್ಟ್, ಬೆಂಗಳೂರು; ಮತ್ತು ವೈ-ಆಕ್ಸಿಸ್ ಫೌಂಡೇಷನ್(ವೈಎಎಫ್), ಹೈದರಾಬಾದ್ ಆಯೋಜಿಸುತ್ತವೆ.

English summary
Education USA is set to organise US University virtual fairs on August 27, for prospective graduate students and on september 03, for prospective undergraduate students, the US Embassy in India said in a statement on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X