ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಚ್ಚಾ ಸಾಮಗ್ರಿ ಮೇಲೆ ಅಮೆರಿಕ, ಯುರೋಪ್ ನಿಷೇಧ: ಭಾರತದಲ್ಲಿ ಲಸಿಕೆ ಉತ್ಪಾದನೆಗೆ ತೊಂದರೆ

|
Google Oneindia Kannada News

ನವದೆಹಲಿ, ಏಪ್ರಿಲ್ 8: ಕೋವಿಡ್ ಲಸಿಕೆಗೆ ಅತ್ಯಂತ ಮಹತ್ವವಾದ ಕಚ್ಚಾ ಸಾಮಗ್ರಿಗಳ ಪೂರೈಕೆಯನ್ನು ನಿಷೇಧಿಸಿರುವುದರಿಂದ ದೇಶದಲ್ಲಿನ ಲಸಿಕೆ ಉತ್ಪಾದನೆಗೆ ತೊಂದರೆ ಉಂಟಾಗಿದೆ ಎಂದು ಪುಣೆ ಮೂಲದ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದಾರ್ ಪೂನಾವಲ್ಲಾ ತಿಳಿಸಿದ್ದಾರೆ.

ಕೋವಿಡ್-19 ಲಸಿಕೆಗಳ ಉತ್ಪಾದನೆಯಲ್ಲಿ ಎಸ್‌ಐಐ ಎದುರಿಸುತ್ತಿರುವ ತೊಡಕುಗಳ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆದಾರ್, 'ಕೋವಿಶೀಲ್ಡ್ ಹಾಗೂ ಭಾರತ ಮತ್ತು ಜಗತ್ತಿನ ಇತರೆ ಭಾಗಗಳಲ್ಲಿನ ಅನೇಕ ಲಸಿಕೆಗಳ ಉತ್ಪಾದನೆಗೆ ಅತ್ಯಗತ್ಯವಾಗಿರುವ ಮಹತ್ವದ ಕಚ್ಚಾ ಸಾಮಗ್ರಿಗಳನ್ನು ತಡೆ ಹಿಡಿದಿರುವುದಕ್ಕೆ ನಾನು ಸ್ವತಃ ಅಮೆರಿಕಕ್ಕೆ ತೆರಳಿ ಪ್ರತಿಭಟನೆ ಮಾಡಬೇಕು ಎನಿಸುತ್ತಿದೆ' ಎಂದಿದ್ದಾರೆ.

ಪ್ರಧಾನಿ ಮೋದಿ ಪಡೆದ ಕೊರೊನಾ ಲಸಿಕೆಗೆ ಕರ್ನಾಟಕದಲ್ಲಿ ಭಾರಿ ಬೇಡಿಕೆಪ್ರಧಾನಿ ಮೋದಿ ಪಡೆದ ಕೊರೊನಾ ಲಸಿಕೆಗೆ ಕರ್ನಾಟಕದಲ್ಲಿ ಭಾರಿ ಬೇಡಿಕೆ

'ನಮಗೆ ಈ ಸಾಮಗ್ರಿಗಳು ಈಗಲೇ ಬೇಕಿವೆ. ಆರು ತಿಂಗಳು ಅಥವಾ ಒಂದು ವರ್ಷದ ಬಳಿಕ ನಮಗೆ ಬೇಕಾಗುವುದಿಲ್ಲ. ಏಕೆಂದರೆ ಆ ಸಮಯಕ್ಕೆ ನಾವು ಇತರೆ ಲಸಿಕೆಗಳನ್ನು ಅಭಿವೃದ್ಧಿಪಡಿಸಬಹುದು. ಈಗ ನಾವು ತುಂಬಾ ಸಂಕಷ್ಟ ಎದುರಿಸುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

US, Europe Banned Critical Raw Material Needed For Covid Vaccine Production: Adar Poonawalla

ಚೀನಾದ ಕಚ್ಚಾ ಸಾಮಗ್ರಿಗಳ ಗುಣಮಟ್ಟದ ಸಮಸ್ಯೆ ಕಾರಣ ಅಲ್ಲಿಂದ ಆಮದು ಮಾಡಿಸಿಕೊಳ್ಳಲು ಮುಂದಾಗುತ್ತಿಲ್ಲ ಎಂದ ಹೇಳಿದ್ದಾರೆ.

ಮಾಹಿತಿ: ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ಪ್ರಗತಿ ಹೇಗಿದೆ?ಮಾಹಿತಿ: ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ಪ್ರಗತಿ ಹೇಗಿದೆ?

ಸೆರಮ್ ಸಂಸ್ಥೆಯು ಪ್ರತಿ ತಿಂಗಳೂ 6-6.5 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಉತ್ಪಾದನೆ ಮಾಡುತ್ತಿದೆ. ಈ ತಿಂಗಳ ಜೂನ್ ವೇಳೆಗೆ ಮಾಸಿಕ 10-11 ಕೋಟಿ ಡೋಸ್ ಲಸಿಕೆ ಉತ್ಪಾದನೆ ಮಾಡುವ ಸಾಮರ್ಥ್ಯದ ಗುರಿ ಹೊಂದಿದೆ. ಭಾರತೀಯರಿಗೆ ಮೊದಲು ಲಸಿಕೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಜತೆ ಕೆಲಸ ಮಾಡುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

English summary
US, Europe have banned critical raw material needed for Covishield Covid vaccine production says SII CEO Adar Poonawalla.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X