Gautam Adani: ಗೌತಮ್ ಅದಾನಿ ವಿರುದ್ಧದ ಕ್ರಿಮಿನಲ್ ಪ್ರಕರಣ ವಜಾಗೊಳಿಸಲು ಮನವಿ

Adani: ಅಮೆರಿಕದ ನ್ಯಾಯಾಂಗ ಇಲಾಖೆಯು ಗೌತಮ್ ಅದಾನಿ ವಿರುದ್ಧದ ಎಲ್ಲಾ ಕ್ರಿಮಿನಲ್ ಆರೋಪಗಳನ್ನು ವಜಾಗೊಳಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಈ ಪ್ರಕರಣವನ್ನು ಕೈಬಿಡಲು 'ಹೂಡಿಕೆದಾರರಿಗೆ ಯಾವುದೇ ರೀತಿಯ ಹಣಕಾಸಿನ ನಷ್ಟ ಉಂಟಾಗದಿರುವುದೇ,' ಪ್ರಮುಖ ಕಾರಣ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಪ್ರಾಸಿಕ್ಯೂಷನ್ ತನಿಖೆಗೆ ಒಳಪಟ್ಟಿದ್ದ ಷೇರು ಪತ್ರಗಳನ್ನು ಖರೀದಿಸಿದ ಜಾಗತಿಕ ಹೂಡಿಕೆದಾರರಲ್ಲಿ ಯಾರಿಗೂ ಸಹ ಆರ್ಥಿಕ ಹಾನಿಯಾಗಿಲ್ಲ ಎಂದು ಯುಎಸ್ ನ್ಯಾಯಾಂಗ ಇಲಾಖೆ ವಾದಿಸಿದೆ.

ನ್ಯಾಯಾಂಗ ಇಲಾಖೆಯ ಹಿರಿಯ ಅಧಿಕಾರಿ ಆರ್.ಟ್ರೆಂಟ್ ಮೆಕ್‌ಕಾಟರ್ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, 'ವಿವಾದಕ್ಕೆ ಒಳಗಾಗಿದ್ದ ಷೇರು ಪತ್ರಗಳಿಂದ ಇದುವರೆಗೆ ಒಂದೇ ಒಂದು ಪೈಸೆಯೂ ಯಾರಿಗೂ ನಷ್ಟವಾಗಿಲ್ಲ,' ಎಂದು ಸ್ಪಷ್ಟಪಡಿಸಿದ್ದಾರೆ. ಇಲಾಖೆಯ ವರದಿಯ ಪ್ರಕಾರ, ಎರಡು ಸಾಲಪತ್ರಗಳ ವಿತರಣೆಯ ಹಣವನ್ನು ಈಗಾಗಲೇ ಸಂಪೂರ್ಣವಾಗಿ ಮರುಪಾವತಿಸಲಾಗಿದ್ದು, ಉಳಿದ ಸಾಲಪತ್ರಗಳ ಮರುಪಾವತಿ ಪ್ರಕ್ರಿಯೆಯೂ ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ಸಾಗುತ್ತಿದೆ. ಮರುಪಾವತಿ ಯಾವುದೇ ಅಪಾಯದಲ್ಲಿರುವ ಸೂಚನೆಗಳೂ ಇಲ್ಲ ಎಂದು ಹೇಳಲಾಗಿದೆ.

US DoJ Seeks Dismissal of Gautam Adani Criminal Case Says Investors Suffered No Financial Loss

ಈ ಪತ್ರಗಳನ್ನು ಆರಂಭದಲ್ಲಿ ಜಾಗತಿಕ ಮಟ್ಟದ ಅತ್ಯಂತ ಪ್ರಭಾವಶಾಲಿ ಮತ್ತು ಅನುಭವಿ ಸಾಂಸ್ಥಿಕ ಹೂಡಿಕೆದಾರರು ಖರೀದಿಸಿದ್ದರು. ಇವರೆಲ್ಲರೂ ವ್ಯಾಪಕವಾದ ವಿಶ್ಲೇಷಣಾತ್ಮಕ ಸಾಮರ್ಥ್ಯ ಹೊಂದಿರುವ ವಿದೇಶಿ ಒಡೆತನದ ಹೂಡಿಕೆದಾರರಾಗಿದ್ದಾರೆ. ಇಂತಹ ಪ್ರಮುಖ ಹೂಡಿಕೆದಾರರು ಕಾರ್ಪೊರೇಟ್ ನಿಯಮಗಳ ಪಾಲನೆ ಮತ್ತು ಆಡಳಿತಕ್ಕೆ ಸಂಬಂಧಿಸಿದ ಸಾಮಾನ್ಯ ಸಾಂಸ್ಥಿಕ ಹೇಳಿಕೆಗಳನ್ನು ನಂಬಿ ದಾರಿ ತಪ್ಪಿದ್ದಾರೆ ಎಂದು ನ್ಯಾಯಾಲಯದ ನ್ಯಾಯಾಧೀಶರ ಮಂಡಳಿ ಮುಂದೆ ಸಾಬೀತುಪಡಿಸುವುದು ಅತ್ಯಂತ ಕಷ್ಟಕರವಾದ ಸವಾಲಾಗಿತ್ತು ಎಂದು ಇಲಾಖೆ ಒಪ್ಪಿಕೊಂಡಿದೆ.

ಒಂದು ವೇಳೆ ಹೂಡಿಕೆದಾರರು ಆ ಸಾಂಸ್ಥಿಕ ಹೇಳಿಕೆಗಳನ್ನು ನಂಬಿದ್ದರೂ ಸಹ, ಅಂತಿಮವಾಗಿ ಅವರಿಗೆ ಯಾವುದೇ ಹಣಕಾಸಿನ ನಷ್ಟ ಸಂಭವಿಸಿಲ್ಲ. ನಷ್ಟವೇ ಆಗದ ಕಾರಣ ಯಾವುದೇ ಹೂಡಿಕೆದಾರರು ಕಾನೂನಿನ ಅಡಿಯಲ್ಲಿ ನಷ್ಟ ಪರಿಹಾರಕ್ಕೆ ಅರ್ಹರಾಗುವುದಿಲ್ಲ. ಇದು ಅದಾನಿ ವಿರುದ್ಧ ಕ್ರಿಮಿನಲ್ ಕಾನೂನು ಪ್ರಕ್ರಿಯೆಗಳನ್ನು ಮುಂದುವರಿಸುವ ಸರ್ಕಾರದ ಸಮರ್ಥನೆಯನ್ನು ದುರ್ಬಲಗೊಳಿಸಿತು ಅಧಿಕಾರಿ ಮೆಕ್‌ಕಾಟರ್ ಸ್ಪಷ್ಟಪಡಿಸಿದ್ದಾರೆ.

ಇದೇ ಸತ್ಯಾಂಶಗಳ ಆಧಾರದ ಮೇಲೆ ದಾಖಲಾಗಿದ್ದ ಸಂಬಂಧಿತ ಸಿವಿಲ್ ಮೊಕದ್ದಮೆಯು ಈಗಾಗಲೇ ಇತ್ಯರ್ಥಗೊಂಡಿರುವುದರಿಂದ, ಮತ್ತೊಮ್ಮೆ ಕ್ರಿಮಿನಲ್ ವಿಚಾರಣೆಯನ್ನು ಮುಂದುವರಿಸುವುದು ಅನಗತ್ಯ ಎಂದು ಇಲಾಖೆ ತೀರ್ಮಾನಿಸಿದೆ. ಒಟ್ಟಾರೆಯಾಗಿ ಹೇಳುವುದಾದರೆ ಹೂಡಿಕೆದಾರರಿಗೆ ಉಂಟಾಗದ ನಷ್ಟ, ಇಲಾಖೆಯ ಮರುಪರಿಶೀಲನೆಯ ಸಂದರ್ಭದಲ್ಲಿ ಎದುರಾದ ಕಾನೂನು ಹಾಗೂ ನ್ಯಾಯವ್ಯಾಪ್ತಿಯ ತಾಂತ್ರಿಕ ಸವಾಲುಗಳನ್ನು ಪರಿಗಣಿಸಿ ಗೌತಮ್ ಅದಾನಿ ವಿರುದ್ಧದ ಸಾಲಪತ್ರಗಳ ವಂಚನೆ ಪ್ರಕರಣದ ಕ್ರಿಮಿನಲ್ ವಿಚಾರಣೆಯನ್ನು ಮುಂದುವರಿಸುವುದು ಸಮರ್ಥನೀಯವಲ್ಲ ಎಂದು ಯುಎಸ್ ನ್ಯಾಯಾಂಗ ಇಲಾಖೆ ಈ ಪ್ರಕರಣಕ್ಕೆ ನಾಂದಿ ಹಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+