ಉಗ್ರರ ದಾಳಿಯಲ್ಲಿ ಹುತಾತ್ಮರಾದವರು ಗಡಿ ಕಾದು ಬಂದಿದ್ದರು

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 19 : ಜಮ್ಮು ಕಾಶ್ಮೀರದ ಉರಿ ಸೆಕ್ಟರ್‌ನ ಸೇನಾ ನೆಲೆ ಮೇಲೆ ಭಾನುವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 17 ಯೋಧರು ಹುತಾತ್ಮರಾಗಿದ್ದಾರೆ. ಈ ಎಲ್ಲಾ ಯೋಧರು ಗಡಿಭಾಗದಲ್ಲಿ ಎರಡೂವರೆ ವರ್ಷಗಳ ಸೇವೆ ಮುಗಿಸಿ ವಾಪಸ್ ಆದವರು.

ಸೇನಾ ನೆಲೆ ಮೇಲೆ ದಾಳಿ ಮಾಡಿದ ನಾಲ್ವರು ಉಗ್ರರನ್ನು ಯೋಧರು ಹತ್ಯೆ ಮಾಡಿದ್ದಾರೆ. ಆದರೆ, ಈ ದಾಳಿಯಲ್ಲಿ 17 ಯೋಧರು ಹುತಾತ್ಮರಾಗಿದ್ದು, ಭಾರತೀಯ ಸೇನೆಗೆ ಅಪಾರವಾದ ನಷ್ಟ ಉಂಟಾಗಿದೆ. ಸೇವೆ ಮುಗಿಸಿ ತಾತ್ಕಾಲಿಕ ಟೆಂಟ್‌ಗಳಲ್ಲಿ ಆಶ್ರಯ ಪಡೆದಿದ್ದ ಯೋಧರು ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.

Uri attack : Most soldiers were preparing for posting at peaceful areas

ಗಡಿ ನಿಯಂತ್ರಣ ರೇಖೆಯಲ್ಲಿ ಕಾರ್ಯನಿರ್ವಹಿಸುವುದು ಅಪಾಯದ ಕೆಲಸ. ಭಾನುವಾರ ನಡೆದ ದಾಳಿಯಲ್ಲಿ ಮೃತಪಟ್ಟ ಉಗ್ರರೆಲ್ಲ ಎರಡೂವರೆ ವರ್ಷಗಳಿಂದ ಗಡಿ ನಿಯಂತ್ರಣ ರೇಖೆಯಲ್ಲಿದ್ದರು. ಅಲ್ಲಿನ ಪಹರೆ ಬದಲಾವಣೆ ಮಾಡುವ ಸಮಯವನ್ನು ಅರಿತ ಉಗ್ರರು ಈ ದುಷ್ಕೃತ್ಯ ನಡೆಸಿದ್ದಾರೆ.[ಜಮ್ಮು: 17 ಯೋಧರು ಹುತಾತ್ಮ, 4 ಉಗ್ರರು ಹತ್ಯೆ]

ಈ ದಾಳಿಯಲ್ಲಿ ಮೃತಪಟ್ಟ ಹಲವು ಯೋಧರು ಶಾಂತಿಯುತ ಪ್ರದೇಶದ ಕಾವಲಿಗೆ ತೆರಳುವವರಾಗಿದ್ದರು. ಇನ್ನೂ ಕೆಲವರು ರಜೆ ಮೇಲೆ ತವರಿಗೆ ತೆರಳಬೇಕಾಗಿತ್ತು. ಸೇನಾ ನೆಲೆ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಯಲಿದೆ.

ಬೆಟಾಲಿಯನ್ ಬದಲಾವಣೆಯಾಗುವ ಕುರಿತ ಮಾಹಿತಿ ಸೋರಿಕೆಯಾಗಿತ್ತೇ? ಎಂಬ ಬಗ್ಗೆಯೂ ತನಿಖೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಸೇನಾ ನೆಲೆ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
It was a sad day for the armed forces and the entire nation yesterday. Had the attack not taken place, most of the soldiers would have returned to peaceful areas after completing a gruelling two and half years of duty along the Line of Control.
Please Wait while comments are loading...