ಅಪನಗದೀಕರಣ, ಜಿಎಸ್ಟಿ ಪರಿಣಾಮ ನಗರದಲ್ಲಿ ಉದ್ಯೋಗವೇ ಇಲ್ಲ

Subscribe to Oneindia Kannada

ಬೆಂಗಳೂರು, ಅಕ್ಟೋಬರ್ 10: ನಗರ ಪ್ರದೇಶಗಳಲ್ಲಿ ನಿರುದ್ಯೋಗ ಸಮಸ್ಯೆ ಮಿತಿ ಮೀರಿದೆ. ಇದೇ ಮೊದಲ ಬಾರಿಗೆ ನಗರಗಳಲ್ಲಿ ನಿರುದ್ಯೋಗ ಪ್ರಮಾಣ ಶೇ. 8.2ಕ್ಕೆ ಏರಿಕೆಯಾಗಿದೆ. ಇದು ಕಳೆದ 11 ತಿಂಗಳಲ್ಲಿ ದಾಖಲಾದ ನಿರೋದ್ಯೋಗದ ಗರಿಷ್ಠ ಮಟ್ಟವಾಗಿದೆ.

ಉದ್ಯೋಗ ಮಾರುಕಟ್ಟೆಗೆ ಹೆಚ್ಚೆಚ್ಚು ಕಾರ್ಮಿಕರು ಬರುತ್ತಿದ್ದಾರೆ. ಆದರೆ ಅವರಿಗೆ ಉದ್ಯೋಗ ಮಾತ್ರ ಸಿಗುತ್ತಿಲ್ಲ ಎಂಬುದು ಸಮೀಕ್ಷೆಯಿಂದ ಬಯಲಾಗಿದೆ.

Urban unemployment hits 11-month high, rises to 8.2%

ದೇಶದಲ್ಲಿ ನೋಟು ನಿಷೇಧದ ನಂತರ ಒಟ್ಟು ಐದು ಹಂತಗಳ ಸಮೀಕ್ಷೆಯನ್ನು 'ಬಿಎಸ್ಇ-ಸಿಎಂಐಇ' ಸಂಸ್ಥೆ ನಡೆಸಿದ್ದು, ಈ ಸಮೀಕ್ಷೆಯ ವರದಿಯಲ್ಲಿ ನಗರ ಪ್ರದೇಶಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವುದು ಬಹಿರಂಗವಾಗಿವೆ.

ಅಪನಗದೀಕರಣ ಮತ್ತು ಜಿಎಸ್ಟಿ ಉದ್ಯೋಗ ಕಡಿತದ ಮೇಲೆ ಮಹತ್ವದ ಪರಿಣಾಮ ಬೀರಿವೆ ಎಂದು ವರದಿ ಧ್ವನಿಸುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In urban India, unemployment was 8.2 per cent. This is the highest unemployment rate in urban India in the past 11 months.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ