ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019ನೇ ಸಾಲಿನ ಯುಪಿಎಸ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ

|
Google Oneindia Kannada News

ನವದೆಹಲಿ, ಆಗಸ್ಟ್.04: ಕೇಂದ್ರ ನಾಗರಿಕ ಸೇವಾ ಆಯೋಗವು 2019ನೇ ಸಾಲಿನಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದೆ. ತಾತ್ಕಾಲಿಕ ನೇಮಕಾತಿ ಪಟ್ಟಿಯನ್ನು ಯುಪಿಎಸ್ ಸಿಯ ಅಧಿಕೃತ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡುವುದಾಗಿ ಆಯೋಗವು ತಿಳಿಸಿದೆ.

ಕೇಂದ್ರ ನಾಗರಿಕ ಸೇವಾ ಆಯೋಗದ ಪರೀಕ್ಷೆಗಳನ್ನು ಬರೆದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಪಟ್ಟಿ ಮಾಡಲಾಗಿದೆ. ಈ ಪಟ್ಟಿಯನ್ನು ಆಧರಿಸಿ ಮುಂದಿನ ಉದ್ಯೋಗ ನೇಮಕಾತಿ ಪ್ರಕ್ರಿಯೆಗೆ ಶಿಫಾರಸ್ಸು ಕಳುಹಿಸಲಾಗುತ್ತದೆ.

ಕೆಪಿಎಸ್‌ಸಿ ನೇಮಕಾತಿ; 990 ಹುದ್ದೆಗಳಿಗೆ ಅರ್ಜಿ ಹಾಕಿಕೆಪಿಎಸ್‌ಸಿ ನೇಮಕಾತಿ; 990 ಹುದ್ದೆಗಳಿಗೆ ಅರ್ಜಿ ಹಾಕಿ

2019ನೇ ಸಾಲಿನಲ್ಲಿ ಕೇಂದ್ರ ನಾಗರಿಕ ಸೇವಾ ಆಯೋಗವು ನಾಲ್ಕು ಹಂತಗಳಲ್ಲಿ ಉದ್ಯೋಗ ನೇಮಕಾತಿಗೆ ಶಿಫಾರಸ್ಸುಗಳನ್ನು ಕಳುಹಿಸಲಾಗುತ್ತಿದೆ. ಈ ನಾಲ್ಕು ಹಂತಗಳು ಯಾವವು ಎನ್ನುವುದರ ಪಟ್ಟಿ ಇಲ್ಲಿದೆ ನೋಡಿ.

UPSC Civil Services Exam 2019 Result Announced: Check Toppers List

1. ಭಾರತೀಯ ಆಡಳಿತ ಸೇವೆ

2. ಭಾರತೀಯ ವಿದೇಶಾಂಗ ಸೇವೆ

3. ಭಾರತೀಯ ಆರಕ್ಷಕ ಸೇವೆ ಮತ್ತು

4. ಕೇಂದ್ರ ಸೇವೆ- ಗ್ರೂಪ್ 'ಎ', ಗ್ರೂಪ್ 'ಬಿ'

ಯುಪಿಎಸ್ ಸಿ ನಾಗರಿಕ ಸೇವಾ ಪರೀಕ್ಷೆ-2019ರ ಫಲಿತಾಂಶವನ್ನು ವೀಕ್ಷಣೆಗೆ ಈ ನಿಯಮಗಳನ್ನು ಅನುಸರಿಸಿ:

1. ಯುಪಿಎಸ್ ಸಿಯ ಅಧಿಕೃತ ವೆಬ್ ಸೈಟ್ upsc.gov.in ತೆರೆಯಿರಿ

2. 2019 ರ ಫಲಿತಾಂಶಗಳನ್ನು ಘೋಷಿಸಿರುವ ಇತ್ತೀಚಿನ ವಿಭಾಗಕ್ಕೆ ಹೋಗಿ

3. ನಿಮ್ಮ ರೋಲ್ ಸಂಖ್ಯೆಯನ್ನು ನಮೂದಿಸಿ

4. ನಿಮ್ಮ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆ 2019 ಫಲಿತಾಂಶವನ್ನು ಪರದೆಯ ಮೇಲೆ ತೋರಿಸಲಾಗುತ್ತದೆ

5. ಭವಿಷ್ಯದ ಉಲ್ಲೇಖಕ್ಕಾಗಿ ಯುಪಿಎಸ್ಸಿ ಫಲಿತಾಂಶದ ಮುದ್ರಣವನ್ನು ಡೌನ್‌ಲೋಡ್ ಮಾಡಿ ಮತ್ತು ತೆಗೆದುಕೊಳ್ಳಿ

ಪ್ರದೀಪ್ ಸಿಂಗ್ ಯುಪಿಎಸ್ ಸಿ ನಾಗರಿಕ ಸೇವಾ ಪರೀಕ್ಷೆ-2019ರಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಜತಿನ್ ಕಿಶೋರ್ ಮತ್ತು ಪ್ರತಿಭಾ ವರ್ಮಾ ಕ್ರಮವಾಗಿ 2 ಮತ್ತು 3 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಬಾರಿ ನೇಮಕಾತಿಗಾಗಿ ಒಟ್ಟು 829 ಅಭ್ಯರ್ಥಿಗಳನ್ನು ಶಿಫಾರಸು ಮಾಡಲಾಗಿದೆ. ಅದರ ವಿಘಟನೆಯನ್ನು ವರ್ಗವಾರು ಕೆಳಗೆ ನೀಡಲಾಗಿದೆ:

ಸಾಮಾನ್ಯ - 304

ಇಡಬ್ಲ್ಯೂಎಸ್ - 78

ಓಬಿಸಿ - 251

ಎಸ್ ಸಿ - 129

ಎಸ್ ಟಿ - 67

English summary
UPSC Civil Services Exam 2019 Result Announced: Check Toppers List.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X