ಯುಪಿಎಸ್ಸಿ ಫಲಿತಾಂಶ : ಕರ್ನಾಟಕದ ಗೌಡಗೆ 105ನೇ ಸ್ಥಾನ

Posted By:
Subscribe to Oneindia Kannada

ನವದೆಹಲಿ, ಮೇ 10:ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ) ಪರೀಕ್ಷೆ 2015ಯ ಅಂತಿಮ ಫಲಿತಾಂಶ ಮಂಗಳವಾರ (ಮೇ 10) ರಂದು ಸಂಜೆ ಪ್ರಕಟವಾಗಿದೆ. ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಾಗಲು ಬಯಸಿರುವ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಿದೆ. ಟೀನಾ ಡಬಿ(0256747) ಪ್ರಥಮ ಶ್ರೇಯಾಂಕ ಪಡೆದುಕೊಂಡಿದ್ದಾರೆ.

ಅತಾರ್ ಉಲ್ ಶಫಿ ಖಾನ್(ರೋಲ್ ನಂಬರ್ 0058239), ಜಸ್ಮೀರ್ ಸಿಂಗ್ ಸಂಧು (0010512), ಆರ್ತಿಕಾ ಶುಕ್ಲಾ(0000123), ಶಶಾಂಕ್ ತ್ರಿಪಾಠಿ(0015876) ಮೊದಲ 5 ಸ್ಥಾನ ಗಳಿಸಿದ್ದಾರೆ. ಕರ್ನಾಟಕದ ಶ್ರೀನಿವಾಸ್ ಗೌಡ ಎ. ಆರ್ (0535527) ಅವರು 105ನೇ ಸ್ಥಾನ ಗಳಿಸಿದ್ದಾರೆ.[ಯುಪಿಎಸ್ಸಿ ಅರ್ಹತಾ ಪರೀಕ್ಷಾ ಫಲಿತಾಂಶ ಪ್ರಕಟ]

upsc Civil Services exam 2015 final results out, Tina Dabi grabs first rank...

ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಗಾಗಿ ನಡೆಯುವ ಈ ಪರೀಕ್ಷೆಗಳು ಪ್ರಿಮಿಲಿನರಿ, ಅಂತಿಮ ಹಾಗೂ ಸಂದರ್ಶನ ಮೂರು ಹಂತಗಳಲ್ಲಿ ನಡೆಯಲಿದೆ. [ಯುಪಿಎಸ್ಸಿ 2014: ರಾಜ್ಯಕ್ಕೆ ಹೆಮ್ಮೆ ತಂದ ಅಭ್ಯರ್ಥಿಗಳು]

ಮೊದಲ ಹಂತದಲ್ಲಿ ಸುಮಾರು 15.008 ಅಭ್ಯರ್ಥಿಗಳು ಅಂತಿಮ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದರು. ಅಂತಿಮ ಪರೀಕ್ಷಾ ಫಲಿತಾಂಶ www.upsc.gov.in ನಲ್ಲಿ ಪಡೆದುಕೊಳ್ಳಬಹುದು. [ಯುಪಿಎಸ್ ಸಿ : ನಾಲ್ಕೂವರೆ ಅಡಿಯ ಇರಾಳ ಎತ್ತರದ ಸಾಧನೆ]

upsc Civil Services exam 2015 final results out, Tina Dabi grabs first rank...


ಕರ್ನಾಟಕದ ಅಭ್ಯರ್ಥಿಗಳ ಫಲಿತಾಂಶ

* ಶ್ರೀನಿವಾಸಗೌಡ 105
* ನಿವ್ಯಾ ಶೆಟ್ಟಿ 274
* ಪವನ್ ಕುಮಾರ್ ಗಿರಿಯಪ್ಪ 420
* ಪ್ರಮೋದ್ ನಾಯಕ್ 779
* ಡಿಎಲ್ ನಾಗೇಶ್ 782
* ಆಕಾಶ್ ಎಸ್ 959
* ಭೈರಪ್ಪ 1035

ಪೂರ್ಣ ಪಟ್ಟಿ ನೋಡಿ, ಡೌನ್ಲೋಡ್ ಮಾಡಿಕೊಳ್ಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The results of the prestigious civil services examination, to select IAS and IPS officers. A total of 15,008 candidates had qualified in the preliminary examination. The final result has been put up on the Commission's website—www.upsc.gov.in.
Please Wait while comments are loading...