ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ಪಕ್ಷಗಳ ಸ್ಥಿರಾಸ್ತಿ ವೆಬ್ ಸೈಟ್ ನಲ್ಲಿ ಬಹಿರಂಗಪಡಿಸಿ

By Mahesh
|
Google Oneindia Kannada News

ನವದೆಹಲಿ, ಜ.4: ವಿವಿಧ ರಾಜಕೀಯ ಪಕ್ಷಗಳಿಗೆ ನೀಡಿರುವ ಜಮೀನು, ಬಂಗಲೆ ಮುಂತಾದ ಸ್ಥಿರಾಸ್ತಿ ವಿವರಗಳನ್ನು ವೆಬ್ ಸೈಟ್ ನಲ್ಲಿ ಸಾರ್ವಜನಿಕರಿಗೆ ತಿಳಿಯುವಂತೆ ಬಹಿರಂಗಪಡಿಸುವ ಸಾಧ್ಯತೆಯಿದೆ. ಈ ಕುರಿತಂತೆ ನಗರಾಭಿವೃದ್ಧಿ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ನಿರ್ದೇಶನ ನೀಡಿದೆ.

ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳದ ಕೇಂದ್ರ ಕಚೇರಿ 'ರಾಬ್ರಿ ಭವನ್' ಎಂದು ಹೆಸರಿಸಿರುವ ಬಗ್ಗೆ ಪ್ರಶ್ನೆಗಳು ಎದ್ದಿರುವುದರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಇದಗಿಸುವಂತೆ ಸಚಿವಾಲಯಕ್ಕೆ ಆಯೋಗ ಸೂಚಿಸಿದೆ.

Upload assets of political parties on website: CIC to MoUD

ಇದರ ಪರಿಣಾಮ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಎಲ್ಲಾ ನೋಂದಾಯಿತ ರಾಜಕೀಯ ಪಕ್ಷಗಳ ಅಧಿಕೃತ ಕಚೇರಿ, ಬಂಗಲೆ, ಅತಿಥಿ ಗೃಹ, ಕಡತಗಳು, ಸುತ್ತೋಲೆಗಳ ವಿವರಗಳನ್ನು ಕಲೆಹಾಕಿ ನಗರಾಭಿವೃದ್ಧಿ ಸಚಿವಾಲಯ(MoUD)ದ ವೆಬ್ ಸೈಟ್ ನಲ್ಲಿ ಪ್ರಕಟಿಸಲಿದ್ದಾರೆ. ಈ ಕಾರ್ಯ ಪೂರ್ತಿಗೊಳಿಸಲು ನಾಲ್ಕು ವಾರಗಳ ಕಾಲಾವಕಾಶವನ್ನು ಮಾಹಿತಿ ಆಯೋಗ ನೀಡಿದೆ ಎಂದು ಮಾಹಿತಿ ಆಯುಕ್ತ ಯಶೋವರ್ಧನ್ ಆಜಾದ್ ಹೇಳಿದ್ದಾರೆ.

ಏನಿದರ ಪ್ರಯೋಜನ: ಇದರಿಂದಾಗಿ ಕುಟುಂಬ ರಾಜಕೀಯ ಮಾಡುತ್ತಾ ಪಕ್ಷದ ಕಚೇರಿ, ಬಂಗಲೆಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ರಾಜಕೀಯ ಮುಖಂಡರಿಗೆ ಕಡಿವಾಣ ಹಾಕಿದ್ದಂತಾಗುತ್ತದೆ. ಅನಧಿಕೃತ ಕಟ್ಟಡಗಳನ್ನು ಹೊಂದಿರುವ ಪಕ್ಷಗಳ ಬಗ್ಗೆ ಸಾರ್ವಜನಿಕರಿಗೆ ತಕ್ಷಣವೇ ತಿಳಿಯುತ್ತದೆ. (ಪಿಟಿಐ)

English summary
The Central Information Commission has directed the Urban Development Ministry to make public all records related to allotment of land and bungalows to political parties and upload these details on its website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X