ಜು.25 : ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

ಬೆಂಗಳೂರು, ಜು.25: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

15.45: ಗುದ್ದೋಡು ಪ್ರಕರಣ: ನಟ ಸಲ್ಮಾನ್ ಖಾನ್ ವಿಚಾರಣೆಯನ್ನು ಮತ್ತೊಮ್ಮೆ ಬಾಂಬೆ ಕೋರ್ಟ್ ಮುಂದೂಡಿದ್ದು, ಆಗಸ್ಟ್ 21 ರಂದು ವಿಚಾರನೆ ನಡೆಯಲಿದೆ.
2.55: ಯುಪಿಎಸ್ ಸಿ ನೇಮಕಾತಿ ವಿವಾದ ಮತ್ತೆ ಮುಂದುವರೆದಿದ್ದು, ದೆಹಲಿಯಲ್ಲಿ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಅಭ್ಯರ್ಥಿಗಳನ್ನು ಪೊಲೀಸರು ಪ್ರಯಾಸದಿಂದ ತಡೆಗಟ್ಟಿದ್ದಾರೆ.

Updates India, International News in Brief July 25,

2.45: 26/11 ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಉಪ ರಾಯಭಾರಿಗೆ ಭಾರತದಿಂದ ಸಮನ್ಸ್ ಜಾರಿ ಮಾಡಲಾಗಿದೆ.
2.30: ಸಾಧ್ವಿ ಪ್ರಾಚಿ ಅವರನ್ನು ಉತ್ತರಪ್ರದೇಶದ ಬಿಜ್ನೋರ್ ನಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

1.30: ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.9 ಪ್ರಮಾಣ ತೋರಿಸಿದೆ.

10.50 : ಶಾರದಾ ಚಿಟ್ ಫಂಡ್ ಹಗರಣ: ಜಾರಿ ನಿರ್ದೇಶನಾಲಯದಿಂದ ತೃಣಮೂಲ ಕಾಂಗ್ರೆಸ್ ಸಂಸದ ಮಿಥುನ್ ಚಕ್ರವರ್ತಿ ಅವರ ವಿಚಾರಣೆ.
10.45 : ಕಾರ್ಗಿಲ್ ಯುದ್ಧವಾದ 15 ವರ್ಷಗಳ ನಂತರ ವಿಜಯ್ ದಿವಸ್ ಆಚರಣೆ. ಭಾರತದ ಹೆಮ್ಮೆಯ ವೀರಯೋಧರಿಗೆ ದೇಶ ನಮಿಸುತ್ತದೆ ಎಂದು ಭೂಸೇನಾ ಮುಖ್ಯಸ್ಥ ವಿಕ್ರಮ್ ಸಿಂಗ್ ಹೇಳಿಕೆ.
10.15 : ಎಂಎಚ್ 17 ವಿಮಾನ ದುರಂತದ ಹಿನ್ನೆಲೆಯಲ್ಲಿ ಉಕ್ರೇನ್ ಪ್ರಧಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Updates India, International News in Brief July 25

10.00: ಅಲ್ಜೀರಿಯಾದಲ್ಲಿ ಗುರುವಾರ ಎಎಚ್ 5017 ವಿಮಾನ ಮಾಲಿ ಬಳಿ ಪತನಗೊಂಡಿದ್ದು, 116 ಜನ ಮೃತಪಟ್ಟಿದ್ದಾರೆ ಎಂದು ಅಲ್ಜೀರಿಯಾ ಸರ್ಕಾರ ದೃಢಪಡಿಸಿದೆ.
9.30: ಮುಂಬೈನ ಹಿರಿಯ ಐಪಿಎಸ್ ಅಧಿಕಾರಿ ಸುನಿಲ್ ಪರಾಸ್ಕಾರ್ ಮೇಲೆ ರೂಪದರ್ಶಿಯೊಬ್ಬರು ಮಾನಭಂಗ ಆರೋಪ ಹೊರೆಸಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+