ಜು.2 : ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

ಬೆಂಗಳೂರು, ಜು.2: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
6.45: ಸುನಂದಾ ಪುಷ್ಕರ್ ಸಾವಿಗೆ ಸಂಬಂಧಿಸಿದಂತೆ ಡಾ. ಸುಧೀರ್ ಗುಪ್ತಾ ನೀಡಿರುವ ಹೇಳಿಕೆಯನ್ನು ಏಮ್ಸ್ ನಿರಾಕರಿಸಿದೆ.ವರದಿ ತಿರುಚುವಂತೆ ಯಾರೂ ಒತ್ತಡ ಹೇರಲು ಸಾಧ್ಯವಿಲ್ಲ ಎಂದಿದೆ.
6.30: 'ರೇಪ್ ಮಾಡಿಸ್ಬೇಕಾ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ತೃಣಮೂಲ ಕಾಂಗ್ರೆಸ್ಸಿನ ಸಂಸದ ತಪಸ್ ಪಾಲ್ ಅವರು ಬೇಷರತ್ ಕ್ಷಮೆಯಾಚಿಸಿದ್ದಾರೆ. ಅವರ ವಿರುದ್ಧ ಯಾವುದೇ ಕಠಿಣ ಕ್ರಮ ಜರುಗಿಸುವುದಿಲ್ಲ ಎಂದು ಪಕ್ಷದ ಮುಖಂಡ ಡೆರಿಕ್ ಓ ಬ್ರೇನ್ ಹೇಳಿದ್ದಾರೆ.

Sunanda

6.00: ಟಿಎಂಸಿ ಸಂಸದ ತಪಸ್ ಪಾಲ್ ವಿರುದ್ಧ ಕಲ್ಕತ್ತಾ ಹೈಕೋರ್ಟ್ ನಲ್ಲಿ ಪಿಐಎಲ್ ದಾಖಲಿಸಲಾಗಿದೆ.
5.45: ವಿದೇಶಾಂಗ ಸಚಿವಾಲಯದ ಪ್ರಕಾರ ಇರಾಕಿನಲ್ಲಿರುವ 530 ಭಾರತೀಯರಿಗೆ ಭಾರತಕ್ಕೆ ರಿಟರ್ನ್ ಟಿಕೆಟ್ ನೀಡಲಾಗಿದೆ.
3.00: ಯುಎಸ್ ಸೆನೆಟರ್ ಜಾನ್ ಮೆಕ್ ಕೇನ್ ಅವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರನ್ನು ಭೇಟಿ ಮಾಡಿದ್ದಾರೆ.
1.45: ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ದೆಹಲಿಯಲ್ಲಿ ಇಂದು ಮಳೆಯ ಸಿಂಚನವಾಗಿದೆ.

12.30: ಬಿಜೆಪಿ ಮೇಲೆ ಯುಎಸ್ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಸ್ ರಾಯಭಾರಿಗಳಿಗೆ ಭಾರತ ಸಮನ್ಸ್ ನೀಡಿದೆ.


10.25: ಆನಂದಿಬೇನ್ ಅವರ ನೇತೃತ್ವದ ಗುಜರಾತ್ ಸರ್ಕಾರ ಇದೇ ಮೊದಲ ಬಾರಿಗೆ ಮಹಿಳಾ ಆಧಾರಿತ ಬಜೆಟ್ ಅನ್ನು ಮಂಡಿಸಿದೆ. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ಸುಮಾರು 495 ಯೋಜನೆಗೆ 45,259 ಕೋಟಿ ರು ಹಣ ಮೀಸಲಿರಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವುದ ಬಗ್ಗೆ ಬಜೆಟ್ ನಲ್ಲಿ ತೀರ್ಮಾನಿಸಲಾಗಿದೆ.
10.20: ಫ್ರಾನ್ಸಿನ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರನ್ನು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬಂಧಿಸಲಾಗಿದೆ.

News in brief on July 2

10.15 : ಮೇವು ಹಗರಣ ಪ್ರಕರಣ : ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಹಿನ್ನಡೆಯಾಗಿದೆ. ಹಗರಣಕ್ಕೆ ಸಂಬಂಧಿಸಿದ ಇತರೆ ಕೇಸುಗಳನ್ನು ರದ್ದುಕೋರುವಂತೆ ಸಲ್ಲಿಸಿದ್ದ ಅರ್ಜಿ ಸುಪ್ರೀಂಕೋರ್ಟಿನಲ್ಲಿ ವಜಾಗೊಂಡಿದೆ.
10.00: ಸುನಂದಾ ಪುಷ್ಕರ್ ಸಾವಿನ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಅವರು ಮೊಕದ್ದಮೆ ಹೂಡಲು ಸಿದ್ಧತೆ ನಡೆಸಿದ್ದಾರೆ.
9.45: ರಾಂಚಿಯಿಂದ ಪಾಟ್ನಕ್ಕೆ ತೆರಳುತ್ತಿದ್ದ ಜನಶತಾಬ್ದಿ ಎಕ್ಸ್ ಪ್ರೆಸ್ ನಲ್ಲಿ ಕಳೆದ ರಾತ್ರಿ 300ಕ್ಕೂ ಅಧಿಕ ಜನರನ್ನು ದೋಚಲಾಗಿದೆ.
9.30: ಅಮೆರಿಕದ 236 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಯುಎಸ್ ಜಲಸೇನೆಗೆ ಮಹಿಳೆಯೊಬ್ಬರನ್ನು ಅಡ್ಮಿರಲ್ ಆಗಿ ನೇಮಿಸಲಾಗಿದೆ.
9.15: ಚೆನ್ನೈ ಕಟ್ಟಡ ಕುಸಿತ ದುರಂತದಲ್ಲಿ ಸಾವನ್ನಪ್ಪಿರುವ ಸಂಖ್ಯೆ 41ಕ್ಕೇರಿದೆ. 40ಕ್ಕೂ ಅಧಿಕ ಜನರನ್ನು ಅವಶೇಷಗಳ ಅಡಿಯಿಂದ ರಕ್ಷಿಸಲಾಗಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+