ಜು.1 :ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್
ಬೆಂಗಳೂರು, ಜು.1: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
11.30: ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಆಧಾರ್) ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ ಅವರು ತಾವು ವಾಸವಿದ್ದ ಸರ್ಕಾರಿ ನಿವಾಸವನ್ನು ತೆರವುಗೊಳಿಸಿದ್ದಾರೆ. ನಿಲೇಕಣಿ ಅವರಿಗೆ ಯುಪಿಎ ಅಧಿಕಾರ ಅವಧಿಯಲ್ಲಿ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿತ್ತು.
11.25: ನೈಜೀರಿಯದ ಈಶಾನ್ಯ ಭಾಗದಲ್ಲಿನ ಚರ್ಚ್‌ಗಳ ಮೇಲೆ ಬೊಕೊ ಹರಾಮ್ ಉಗ್ರರು ದಾಳಿ ನಡೆಸಿ 50ಕ್ಕೂ ಹೆಚ್ಚು ಮಂದಿ ಹತ್ಯೆಗೀಡಾಗಿದ್ದಾರೆ.

11.15: ನೈಜೀರಿಯಾದ ಚಿಬೊಕ್ ಪಟ್ಟಣದ ಹೊರವಲಯದ ನಾಲ್ಕು ಹಳ್ಳಿಗಳ ಮೇಲೆ ಉಗ್ರರು ಕಳೆದ ರಾತ್ರಿ ದಾಳಿ ನಡೆಸಿದ್ದಾರೆ. ಚಿಬೊಕ್ ಪಟ್ಟಣದಿಂದ ಬೊಕೊ ಹರಾಮ್ ಉಗ್ರರು ಏಪ್ರಿಲ್‌ನಲ್ಲಿ 276ಕ್ಕೂ ಅಧಿಕ ಶಾಲಾ ಬಾಲಕಿಯರನ್ನು ಅಪಹರಿಸಿರುವುದನ್ನು ಸ್ಮರಿಸಬಹುದಾಗಿದೆ.[ಉಗ್ರರ ಮುಂದೆ ಶೀಲ ಒತ್ತೆಯಿಟ್ಟ ಗಾಯಕಿ]
11.00: ಒರಿಸ್ಸಾದ ಗಂಜಾಂ ಜಿಲ್ಲೆಯ ಗ್ರಾಮವೊಂದರಲ್ಲಿ ರುಕುನಿ ಸಾಹು ಎಂಬ ವೃದ್ಧ ಮಹಿಳೆ ಹಾಗೂ ಆಕೆಯ ಐದರ ಹರೆಯದ ಮೊಮ್ಮಗಳು ಲಕ್ಷ್ಮಿ ಶ್ರೀಜಗನ್ನಾಥನ ರಥದಡಿ ಬಿದ್ದು ಮೃತರಾದ ದಾರುಣ ಘಟನೆ ವಾರ್ಷಿಕ ರಥೋತ್ಸವದ ವೇಳೆ ನಡೆದಿದೆ.
10.45: ಸರೋದ್ ವಾದಕ ಉಸ್ತಾದ್ ಅಮ್ಜದ್ ಅಲಿ ಖಾನ್ ಅವರು 45 ವರ್ಷಗಳಿಂದ ನುಡಿಸುತ್ತಿದ್ದ ಸರೋದ್ ಕಾಣೆಯಾಗಿದೆ.
10.15: ಒಂದು ವಾರಗಳ ಕಾಲದ ಗೊಂದಲ, ಪ್ರತಿಭಟನೆ ನಂತರ ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪ್ರಕ್ರಿಯೆ ಮಂಗಳವಾರದಿಂದ ಆರಂಭಗೊಂಡಿದೆ.
10.10: ಸಾಮಾಜಿಕ ಜಾಲ ತಾಣ ಆರ್ಕುಟ್ ಶೀಘ್ರವೇ ಬಂದ್ ಆಗಲಿದೆ. ಯೂಟ್ಯೂಬ್, ಬ್ಲಾಗರ್ ಹಾಗೂ ಗೂಗಲ್ ಪ್ಲಸ್ ನತ್ತ ಗೂಗಲ್ ಗಮನ ಹರಿಸಲಿದ್ದು, ಸೆಪ್ಟೆಂಬರ್ ವೇಳೆಗೆ ಬಂದ್ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

10.00: 26/11ರ ಮುಂಬೈ ದಾಳಿಯಲ್ಲಿ ನನ್ನ ಪಾತ್ರವಿಲ್ಲ ಎಂದು ಭಯೋತ್ಪಾದನಾ ಸಂಘಟನೆ ಜಮಾತ್ ಉದ್ ದಾವಾ ಮುಖಂಡ ಹಫೀಜ್ ಸಯೀದ್ ಹೇಳಿದ್ದಾರೆ.
9.45: 'ಸಿಪಿಎಂ ನಮ್ಮ ಕಾರ್ಯಕರ್ತರಿಗೆ ಬೆದರಿಕೆ ಒಡ್ಡಿದರೆ ನಮ್ಮ ಹುಡುಗರನ್ನು ಬಿಟ್ಟು ಆ ಪಕ್ಷದ ಮಹಿಳಾ ಸದಸ್ಯರನ್ನು ರೇಪ್ ಮಾಡಿಸುತ್ತೇನೆ' ಎಂದು ತೃಣಮೂಲ ಕಾಂಗ್ರೆಸ್ ಸಂಸದ ತಪಸ್ ಪಾಲ್ ಹೇಳಿಕೆ ನೀಡಿದ್ದಾರೆ.[ಈ ಸಂಸದನ ಮಾತನ್ನು ಕೇಳಿದ್ರಾ? ನಾಚಿಕೆಯಾಗ್ಬೇಕು ]
9.30: ಚೆನ್ನೈ ಕಟ್ಟಡ ಕುಸಿತ ದುರಂತದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 20ಕ್ಕೇರಿದೆ.
9.15: ಈ ಬಾರಿ ಮುಂಗಾರು ದುರ್ಬಲಗೊಂಡಿರುವುದರಿಂದ ಈರುಳ್ಳಿ ಬೆಲೆ ದೇಶದೆಲ್ಲೆಡೆ ಏರಿಕೆ ಕಂಡು ಬಂದಿದೆ.












Click it and Unblock the Notifications