ಸೆ.22: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

15.03: ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಕ್ವಾಶ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರು ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ. ಸೋಮವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಸ್ಕ್ವಾಶ್ ಪಟು ಮಲೇಷಿಯಾದ ನಿಕೋಲ್ ಡೇವಿಡ್ ವಿರುದ್ಧ ದೀಪಿಕಾ ಸೋಲೊಪ್ಪಿಕೊಂಡಿದ್ದಾರೆ.

12.25: ಬಾಲಿವುಡ್ ನಟ ಶಶಿ ಕಪೂರ್(76) ಅವರು ಎದೆನೋವಿನಿಂದ ಬಳಲುತ್ತಿದ್ದು, ಮುಂಬೈನ ಕೋಕಿಲಾಬೇನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ.
12.00: ಏಷ್ಯನ್ ಗೇಮ್ಸ್ 2014: ಭಾರತೀಯ ಮಹಿಳಾ ಶೂಟರ್ಸ್ 25 ಮೀ. ಪಿಸ್ತೂಲ್ ಟೀಂ ಇವೆಂಟ್ ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
11.50: ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಸೋಮವಾರ ಭೇಟಿ ನೀಡಿ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಲಿದ್ದಾರೆ.
11.40: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ಸಿನ ಕೇಂದ್ರ ಚುನಾವಣಾ ಸಮಿತಿ ಸಭೆ ದೆಹಲಿಯ 10 ಜನಪಥ್ ನಲ್ಲಿ ಜಾರಿಯಲ್ಲಿದೆ. ಎನ್ ಸಿಪಿ ಜೊತೆ ಸಖ್ಯ ಬೇಕೇ? ಬೇಡವೇ? ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
11.20: ಪ್ರವಾಹ ಪೀಡಿತ ಕಾಶ್ಮೀರದ ಮೇಲೆ ಸಂಭಾವ್ಯ ಉಗ್ರರ ದಾಳಿ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ನಾಗರಿಕರು ಹಾಗೂ ರಾಜಕಾರಣಿಗಳ ಮೇಲೆ ದಾಳಿ ನಡೆಯುವ ಸಾಧ್ಯತೆಯಿದೆ.
10.50 : ಬಿಜೆಪಿ ನಾಯಕ ಓಂ ಮಾಥೂರ್ ಅವರು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಜೊತೆ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ.
10.40: ಸಿಎಲ್ಟಿ20: ಗೌತಮ್ ಗಂಭೀರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸತತ 11ನೇ ಗೆಲುವು ದಾಖಲಿಸಿದೆ. ಕಳೆದ ರಾತ್ರಿ ಲಾಹೋರ್ ಲಯನ್ಸ್ ತಂಡವನ್ನು ಸೋಲಿಸಿದೆ.
10.30: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆ.23 ರಿಂದ ಸಿಎಲ್ಟಿ20 ಪಂದ್ಯಗಳು ನಡೆಯಲಿದೆ[ ವಾಹನ ನಿಲುಗಡೆ ವಿವರ ಇಲ್ಲಿದೆ]












Click it and Unblock the Notifications