ಅ.23: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್
ಬೆಂಗಳೂರು, ಅ.23: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
15.20: ಕರ್ನಾಟಕ ವಿವಿ ನೇಮಕಾತಿ ಅವ್ಯವಹಾರ ವಾಲೀಕರ್ ಜಾಮೀನು ಅರ್ಜಿ ವಜಾಗೊಂಡಿದ್ದು, ಲೋಕಾಯುಕ್ತ ವಿಶೇಷ ಕೋರ್ಟ್ ನಿಂದ ಮೂವರಿಗೆ(ಪೋತೆ, ಬೀಳಗಿ, ರಾಜಶ್ರೀ) ಜಾಮೀನು ಮಂಜೂರು ಮಾಡಿದೆ.
15.05: ಬೆಂಗಳೂರಿನ ಆರ್ಕಿಡ್ಸ್ ಶಾಲಾ ಸಿಬ್ಬಂದಿ ಜೊತೆ ಪೋಷಕರ ಬಹಿರಂಗ ಸಭೆ ಆರಂಭವಾಗಿದೆ. ಪೋಷಕರ ಪ್ರಶ್ನೆಗಳಿಗೆ ಆಡಳಿತ ಮಂಡಳಿ ಸಿಬ್ಬಂದಿ ತಬ್ಬಿಬ್ಬಾಗಿದ್ದಾರೆ. ಬಾಲಕಿ ಮೇಲೆ ದೌರ್ಜನ್ಯ ನಡೆದಿರುವುದು, ಪೊಲೀಸರು ನೀಡಿರುವ ಮಾರ್ಗಸೂಚಿ ಅಳವಡಿಕೆ ಬಗ್ಗೆ ಚರ್ಚೆ ನಡೆದಿದೆ.
14.30: ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಆರ್ಕಿಡ್ಸ್ ಶಾಲೆ ಎದುರು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
13.30: ಆರ್ಕಿಡ್ಸ್ ಶಾಲೆಗೆ ನೀಡಿರುವ ಮಾನ್ಯತೆಯಲ್ಲಿ ಅಕ್ರಮಗಳು ಕಂಡು ಬಂದಿದೆ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಡಿಡಿಪಿಐ ಮೊಹಸೀನ್ ಹೇಳಿದ್ದಾರೆ.
12.30: ನಾನು ಕೇಂದ್ರಸಚಿವನಾಗಿ ಮುಂದುವರೆಯುತ್ತೇನೆ. ಮಹಾರಾಷ್ಟ್ರ ರಾಜ್ಯ ರಾಜಕಾರಣಕ್ಕೆ ಮರಳುವುದಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಪುನರುಚ್ಚರಿಸಿದ್ದಾರೆ. ಗುರುವಾರ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ದೇವೇಂದ್ರ ಫಡ್ನವೀಸ್ ಅವರು ನಿತಿನ್ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದರು.

11.15: ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಪಟಾಕಿ ಅಂಗಡಿಗೆ ಬೆಂಕಿ ಬಿದ್ದ ಪರಿಣಾಮ ಏಳು ಜನರು ಸ್ಥಳದಲ್ಲೇ ಬೆಂಕಿಗೆ ಆಹುತಿಯಾಗಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
Devendra Fadnavis & me are of the same party,I brought him into politics, there is no race : Nitin Gadkari pic.twitter.com/NR7nyaUCDf
— ANI (@ANI_news) October 23, 2014 10.10: ಕೆನಡಾದ ಒಟ್ಟಾವದಲ್ಲಿ ನಡೆದ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

10.00: ಶ್ರೀನಗರಕ್ಕೆ ಪ್ರಧಾನಿ ಭೇಟಿ ರಾಜಕೀಯ ದುರುದ್ದೇಶದಿಂದ ಕೂಡಿದೆ. ಇದರಲ್ಲಿ ಯಾವುದೇ ಸದ್ಭಾವನೆ ಇಲ್ಲ ಎಂದು ಎನ್ ಸಿಪಿ ನಾಯಕ ತಾರೀಖ್ ಅನ್ವರ್ ಹೇಳಿದ್ದಾರೆ.
News of the attack in Ottawa is extremely disturbing. I pray for everyone's safety.
— Narendra Modi (@narendramodi) October 22, 2014 9.50: ಅಮೃತಸರದಲ್ಲಿ ಚಿನ್ನದ ದೇಗುಲದಲ್ಲಿ ಸಿಖ್ ಸಮುದಾಯದವರು ದೀಪಾವಳಿ ಅಂಗವಾಗಿ ಪವಿತ್ರ ಸ್ನಾನ ಕೈಗೊಂಡರು.
Golden Temple,Amritsar : Worshipers take holy dip on the occasion of Diwali pic.twitter.com/2twxHc6KXb
— ANI (@ANI_news) October 23, 2014 9.30: ಗೋರಖ್ ಪುರದಲ್ಲಿ ಪಟಾಕಿ ಮಳಿಗೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಯಾವುದೇ ಪ್ರಾಣಹಾನಿಯಾದ ವರದಿ ಬಂದಿಲ್ಲ.












Click it and Unblock the Notifications