ನ.30: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ
ಬೆಂಗಳೂರು, ನ.30: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
17.15: ಫುಟ್ಬಾಲ್ ತಾರೆ ಡೇವಿಡ್ ಬೆಕ್ ಹ್ಯಾಮ್ ಗೆ ಅಪಘಾತ, ಹಿರಿಯ ಪುತ್ರ ಬ್ರೂಕ್ಲಿನ್ ಜೊತೆ ಕಾರಿನಲ್ಲಿ ತೆರಳುವಾಗ ಅಪಘಾತದಲ್ಲಿ ಭುಜಕ್ಕೆ ಗಾಯ.
16.40: ರಂಗಕರ್ಮಿ ವೀಣಾಪಾಣಿ ಛಾವ್ಲಾ ಅವರು ಹೃದಯಾಗಾತದಿಂದ ಭಾನುವಾರ ನಿಧನರಾಗಿದ್ದಾರೆ.
15.15: ಮಕಾವೋ ಕಪ್ ಗೆದ್ದ ಭಾರತದ ಬಾಡ್ಮಿಂಟನ್ ತಾರೆ ಪಿವಿ ಸಿಂಧು.
13.15: ಬೆಂಗಳೂರಿಗೆ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಆಗಮಿಸಿದ್ದಾರೆ. ನಗರದ ಹೊರವಲಯದಲ್ಲಿರುವ ಕಿರ್ಲೋಸ್ಕರ್ ಹೌಸ್ ನಲ್ಲಿ ನಡೆದಿರುವ ದಿವಂಗತ ಮೊರಾರ್ಜಿ ದೇಸಾಯಿ ಅವರ ಮೊಮ್ಮಗನ ಮದುವೆ ಸಮಾರಂಭದಲ್ಲಿ ಅಡ್ವಾಣಿ ಅವರು ಪಾಲ್ಗೊಂಡಿದ್ದಾರೆ.
12.30: ಚುನಾವಣೆ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್, ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷಗಳು ಸೇರಿ 20 ಪಕ್ಷಗಳಿಗೆ ನೋಟಿಸ್ ಜಾರಿ ಮಾಡಿದೆ. ಲೋಕಸಭೆ ಚುನಾವಣೆ ವೇಳೆ ಖರ್ಚು ವೆಚ್ಚದ ಲೆಕ್ಕಾಚಾರ ನೀಡ ಕಾರಣ ನೋಟಿಸ್ ಜಾರಿಯಾಗಿದೆ. ಅದರೆ, ನೋಟಿಸ್ ಜಾರಿಯಾಗಿ ಎರಡು ದಿನ ಕಳೆದರೂ ಪಕ್ಷಗಳು ಇನ್ನೂ ಉತ್ತರಿಸಿಲ್ಲ.

10.30: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕೋಲ್ಕತ್ತಾಗೆ ಆಗಮಿಸಿದ್ದು, ಅವರ ಭಾಷಣಕ್ಕೆ ನಗರಪಾಲಿಕೆ ಗ್ರೀನ್ ಸಿಗ್ನಲ್ ನೀಡಿದೆ.
10.20: ಮೋದಿ ಅವರ ಪ್ರಕಾರ SMART ಎಂದರೆ S-Sensitive & Strict, M-Modern & Mobile, A-Alert & Accountable, R-Responsive & Reliable, T-Technphile & Trained.

10.10: ಗುವಾಹಟಿಯಲ್ಲಿ ಡಿಜಿಪಿ, ಐಜಿಪಿಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪೊಲೀಸರಿಗೆ ಇನ್ನಷ್ಟು ಸೌಲಭ್ಯಗಳು ಸಿಗಬೇಕಿದೆ, ಪೊಲೀಸರು SMART ಆಗಬೇಕಿದೆ ಎಂದಿದ್ದಾರೆ.
10.00: ಪ್ರಧಾನಿ ನರೇಂದ್ರ ಮೋದಿ ಅವರ ಅಸ್ಸಾಂ ಪ್ರವಾಸ ಆರಂಭಗೊಂಡಿದೆ. ಪ್ರವಾಸದ ವೇಳೆ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಲಿದ್ದಾರೆ.
Police welfare is another issue. An officer may be very good but it's important that his/her family is well: PM pic.twitter.com/jVN36hkNOY
— ANI (@ANI_news) November 30, 2014 9.55: ಸ್ಪೇನಿನ ಫುಟ್ಬಾಲ್ ಕ್ಲಬ್ ರಿಯಲ್ ಮ್ಯಾಡ್ರಿಡ್ ತಂಡ ಸತತ 16ನೇ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ರಚಿಸಿದೆ. ಮಲಗಾ ನಗರದ ಲಾ ರೊಸಾಲೆಡಾ ಸ್ಟೇಡಿಯಂನಲ್ಲಿ ಮ್ಯಾಡ್ರಿಡ್ ತಂಡ ಇನ್ನೂ ಸೋಲು ಕಂಡಿಲ್ಲ.
9.45: ಇಂದು(ನ.30) ಅಕಾಲಿಕ ಮರಣಕ್ಕೀಡಾದ ಆಸ್ಟ್ರೇಲಿಯಾದ ಕ್ರಿಕೆಟರ್ ಫಿಲಿಫ್ ಹ್ಯೂಸ್ ಅವರ 26ನೇ ಹುಟ್ಟುಹಬ್ಬ.












Click it and Unblock the Notifications