ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.24: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ

By Mahesh
|
Google Oneindia Kannada News

ಬೆಂಗಳೂರು, ನ.24: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

17.50: ನಿಮಗೆ ತಾಕತ್ತಿದ್ರೆ ನನ್ನನ್ನು ಬಂಧಿಸಿ ನಾನು ಇಲ್ಲೇ ಇರುತ್ತೇನೆ ನಿಮ್ಮ ಜೈಲುಗಳು ಹೇಗಿವೆ ನೋಡೋಣ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಶಾರದಾ ಚಿಟ್ ಫಂಡ್ ಹಗರಣದಲ್ಲಿ ಮಮತಾ ಅವರ ಆಪ್ತರ ಹೆಸರುಗಳು ಕೇಳಿ ಬಂದಿರುವುದನ್ನು ಇಲ್ಲಿ ಸ್ಮರಿಸಬಹುದು.

16.40: ಹಿಟ್ ಅಂಡ್ ರನ್ ಕೇಸಿನ ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡುವಂತೆ ಆರೋಪಿತ ಬಾಲಿವುಡ್ ನಟ ಸಲ್ಮಾನ್ ಖಾನ್ ಕೋರ್ಟಿಗೆ ಮನವಿ ಸಲ್ಲಿಸಿದ್ದಾರೆ.

Mamata Bannerjee

11.15: ಪಶ್ಚಿಮ ಬಂಗಾಳದ ಬುರ್ದ್ವಾನ್ ಸ್ಫೋಟದ ಪ್ರಮುಖ ರುವಾರಿಯ ಪತ್ನಿ ಹಾಗೂ ಮೂವರು ಇತರೆ ಆರೋಪಿಗಳನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ. ಬಂಗಾಳದ ಪೊಲೀಸರು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮಾತೆ ಉಲ್ ಮುಜಾಹಿದ್ದೀನ್ ಸಂಘಟನೆಯ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Updates India, International News in Brief Nov 24

11.00: ಕೇಂದ್ರ ಮಾಜಿ ಸಚಿವ ಮುರಳಿ ದಿಯೋರಾ ಅವರ ನಿಧನಕ್ಕೆ ಪ್ರಧಾನಿ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಸಂಸತ್ತಿನ ಉಭಯ ಸದನಗಳು ನಾಳೆಗೆ ಮುಂದೂಡುವ ಸಾಧ್ಯತೆಗಳಿವೆ.

10.00: ಲೋಕಸಭೆ ಚಳಿಗಾಲದ ಅಧಿವೇಶನ ನಾಳೆಯಿಂದ ಆರಂಭವಾಗಿದೆ. ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರದ ಆರು ತಿಂಗಳ ಅವಧಿಯಲ್ಲಿ ಇದು ಎರಡನೇ ಮಹತ್ವದ ಅಧಿವೇಶನವಾಗಿದೆ.

English summary
Top News of the today : Mamata Banerjee dares Centre to arrest her, says "I am here, come and arrest me; let me see how many jails you have" and many more news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X