ನ.17: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ
ಬೆಂಗಳೂರು, ನ.17: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
15.15: ಪಂಡಿತ್ ನೆಹರೂ ಅವರ ಖಾಸಗಿ ಪತ್ರಗಳನ್ನು ಬಹಿರಂಗಗೊಳಿಸಲು ನಿರಾಕರಿಸಿದ ಸೋನಿಯಾ ಗಾಂಧಿ ಅವರು ಪತ್ರಗಳನ್ನು ನೆಹರೂ ಸ್ಮಾರಕ ಸಂಗ್ರಹಾಲಯಕ್ಕೆ ನೀಡುವುದಿಲ್ಲ ಎಂದಿದ್ದಾರೆ. ಇವು ನೆಹರೂ ಅವರು ಪುತ್ರಿ ಇಂದಿರಾಗಾಂಧಿ ಸೇರಿದಂತೆ ಕುಟುಂಬ ವರ್ಗಕ್ಕೆ ಬರೆದ ಪತ್ರಗಳಿವೆ.
14.30: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಕುರಿತಂತೆ ನ್ಯಾ. ಮುದ್ಗಲ್ ಅವರು ನೀಡಿರುವ ವರದಿಯಲ್ಲಿ ಐಸಿಸಿ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ. [ವಿವರ ಇಲ್ಲಿ ಓದಿ]
1.30: ಯುಎಸ್ ಸರ್ಕಾರಿ ಕಚೇರಿಯ ಅವರ್ಗೀಕೃತ ಕಂಪ್ಯೂಟರ್ ಜಾಲ ಹ್ಯಾಕ್ ಆಗಿದೆ.
12.30: ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ನಿವಾಸದ ಬಳಿ ಗಡಿ ಭದ್ರತಾ ಪಡೆ (ಬಿಎಸ್‍ಎಫ್)ಯ ಯೋಧನೊಬ್ಬ ಗುಂಡು ಹಾರಿಸಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಈ ಘಟನೆಯಿಂದಾಗಿ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಯೋಧನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

Pandit Nehru put the country on the path of modernization,industrialization and social reform-Sonia Gandhi
— ANI (@ANI_news) November 17, 2014 11.30: ಕೊಲೆ ಆರೋಪ ಹೊತ್ತಿರುವ ಸ್ವಯಂಘೋಷಿತ ದೇವಮಾನವ ರಾಮ್ ಪಾಲ್ ಗೆ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಗಳು ಛೀಮಾರಿ ಹಾಕಿವೆ.
10.55: ನೆಹರೂ ಸಮಾರಂಭಕ್ಕೆ ಪ್ರಧಾನಿ ಮೋದಿ ಅವರಿಗೆ ಏಕೆ ಆಹ್ವಾನ ಸಿಕ್ಕಿಲ್ಲವೋ ಕಾಣೆ? ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ನೆಹರೂ ಅವರು ಒಂದು ಕುಟುಂಬದ ಸ್ವತ್ತಲ್ಲ, ಇಡೀ ದೇಶದ ಸ್ವತ್ತು ಎಂದಿದ್ದಾರೆ.

10.40: ಎಐಸಿಸಿ ಸಮ್ಮೇಳನದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ನೆಹರೂ ಅವರನ್ನು ಆಧುನಿಕ ಭಾರತದ ಜನಕ ಎಂದು ಹಾಡಿ ಹೊಗಳಿದ್ದಾರೆ.
10.30: ಪಂಡಿತ್ ಜವಾಹರ್ ಲಾಲ್ ನೆಹರೂ ಅವರ 125ನೇ ಜನ್ಮದಿನೋತ್ಸವದ ಅಂಗವಾಗಿ ಎಐಸಿಸಿಯಿಂದ ಎರಡು ದಿನಗಳ ಕಾಲ ಅಂತಾರಾಷ್ಟ್ರಿಯ ಸಮ್ಮೇಳನ ಆಯೋಜಿಸಲಾಗಿದೆ.
10.20: ಸಿಡ್ನಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ಸಿಕ್ಕಿದೆ.[ಸಿಡ್ನಿಯಲ್ಲಿ ಮೋದಿ ಅಪ್ದೇಟ್ಸ್]
10.00: ನ್ಯೂಜಿಲೆಂಡ್ ನ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.7 ಪ್ರಮಾಣದಷ್ಟಿತ್ತು.












Click it and Unblock the Notifications