• search

7 ಗಂಟೆ : ಬೆಂಗಾಳ 82%, ಕರ್ನಾಟಕ 62%

Posted By:
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಏ.17: ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಕರ್ನಾಟಕ ಸೇರಿದಂತೆ 12 ರಾಜ್ಯಗಳ 121 ಲೋಕಸಭೆ ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯುತ್ತಿದೆ.

  ಒಟ್ಟು 9 ಹಂತಗಳಲ್ಲಿ ಈ ಬಾರಿ ಮತದಾನ ಒಟ್ಟು 16.61 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ 121 ಕ್ಷೇತ್ರಗಳ ಪೈಕಿ 2009ರ ಚುನಾವಣೆಯಲ್ಲಿ ಬಿಜೆಪಿ 44 ಮತ್ತು ಕಾಂಗ್ರೆಸ್ 37 ಸ್ಥಾನಗಳಲ್ಲಿ ಜಯಗಳಿಸಿತ್ತು ಮಿಕ್ಕಿದ್ದು ಇತರೆ ಪಕ್ಷಗಳ ಪಾಲಾಗಿತ್ತು.

  ಕರ್ನಾಟಕದ ಎಲ್ಲ 28, ರಾಜಸ್ಥಾನದ 20, ಮಹಾರಾಷ್ಟ್ರದ 19, ಉತ್ತರಪ್ರದೇಶ ಮತ್ತು ಒಡಿಶಾದ ತಲಾ 11, ಮಧ್ಯಪ್ರದೇಶದ 10, ಬಿಹಾರದ 7, ಜಾರ್ಖಂಡ್ ‌ನ 6, ಪಶ್ಚಿಮ ಬಂಗಾಳದ 4, ಛತ್ತೀಸ್‌ಗಢದ 3, ಜಮ್ಮು ಕಾಶ್ಮೀರ ಮತ್ತು ಮಣಿಪುರದ ತಲಾ 1 ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.

  Karnataka voters

  7.00: ಒಡಿಶಾದಲ್ಲಿ 6 ಗಂಟೆಗೆ ಶೇ 71ರಷ್ಟು ಉಧಮ್ ಪುರ, ಜಮ್ಮುವಿನಲ್ಲಿ ಶೇ 61ರಷ್ಟು, ಮತದಾನ
  6.45:
  ಉತ್ತರಪ್ರದೇಶ 56 %, ಬೆಂಗಾಳ 82%ಗೂ ಅಧಿಕ, ಬಿಹಾರ ಶೇ 55. ಕರ್ನಾಟಕ ಒಟ್ಟಾರೆ 62%,
  5.30:
  ಶೇ 81 ರಷ್ಟು ಮತದಾನ ಕಂಡ ಪಶ್ಚಿಮ ಬಂಗಾಳ, 5 ಕ್ಷೇತ್ರ 47 ಅಭ್ಯರ್ಥಿಗಳ ಹಣೆಬರಹ ನಿರ್ಧಾರ, ಮಧ್ಯಪ್ರದೇಶ ಶೇ 52, ರಾಜಸ್ಥಾನ 53.24,
  5.20 : 5 ಗಂಟೆ ಹೊತ್ತಿಗೆ ಕರ್ನಾಟಕ ಒಟ್ಟಾರೆ 56%
  , ಚಿಕ್ಕೋಡಿ ಶೇ.57,ಬೆಳಗಾವಿ ಶೇ.49,ಬಾಗಲಕೋಟೆ -ಶೇ.47.8,ಬಿಜಾಪುರ-ಶೇ.45,ಗುಲ್ಬರ್ಗಾ-ಶೇ.50,ರಾಯಚೂರು-ಶೇ.44,ಬೀದರ್-ಶೇ.55,ಕೊಪ್ಪಳ-ಶೇ.41,ಬಳ್ಳಾರಿ-ಶೇ.52, ಹಾವೇರಿ-ಶೇ.49,ಧಾರವಾಡ-ಶೇ.52,ಉತ್ತರ ಕನ್ನಡ-ಶೇ.30,ದಾವಣಗೆರೆ -ಶೇ.51,ಶಿವಮೊಗ್ಗ-ಶೇ.57,ಉಡುಪಿ-ಚಿಕ್ಕಮಗಳೂರು-ಶೇ.49, ಹಾಸನ- ಶೇ.52,ದಕ್ಷಿಣ ಕನ್ನಡ -ಶೇ.62, ಚಿತ್ರದುರ್ಗ-ಶೇ.38,,ತುಮಕೂರು-ಶೇ.42,ಮಂಡ್ಯ-ಶೇ.44,ಮೈಸೂರು-ಶೇ.45,ಚಾಮರಾಜನಗರ-ಶೇ.55,ಬೆಂಗಳೂರು ಗ್ರಾಮಾಂತರ-ಶೇ.51,ಬೆಂಗಳೂರು ಉತ್ತರ- ಶೇ.41, ಬೆಂಗಳೂರು ಕೇಂದ್ರ- ಶೇ.38,ಬೆಂಗಳೂರು ದಕ್ಷಿಣ- ಶೇ.40,ಚಿಕ್ಕಬಳ್ಳಾಪುರ-ಶೇ.53,ಕೋಲಾರ-ಶೇ.55

  Misa

  4.00: 3 ಗಂಟೆ ಹೊತ್ತಿಗೆ ಕರ್ನಾಟಕ ಒಟ್ಟಾರೆ ಶೇ 45, ಬೆಂಗಳೂರು ದಕ್ಷಿಣ ಶೇ 40, ಬೆಂ.ಉತ್ತರ ಶೇ 37. ಬೆಂ. ಸೆಂಟ್ರಲ್ ಶೇ 36 @ibnlive
  3.50:
  ಲಾಲೂ ಪ್ರಸಾದ್ ಯಾದವ್ ಪುತ್ರಿ ಆರ್ ಜೆಡಿ ಪಾಟಲೀಪುತ್ರ ಅಭ್ಯರ್ಥಿ ಮೀಸಾ ಭಾರ್ತಿ ಅವರು ಇವಿಎಂ ಒಡೆದು ಹಾಕಿ, ಅಧಿಕಾರಿಯನ್ನು ತಬ್ಬಿದ ಆರೋಪ ಹೊತ್ತಿದ್ದಾನೆ.
  3.45: 3.40ರ ಹೊತ್ತಿಗೆ ರಾಜಸ್ಥಾನ ಶೇ 40.34 %, ಬಿಹಾರ ಶೇ 40.17, ಛತ್ತೀಸ್ ಗಢದಲ್ಲಿ 2 ಗಂಟೆ ಹೊತ್ತಿಗೆ ಶೇ 40 ರಷ್ಟು ಮತದಾನ
  2.40:
  ಮಧ್ಯಾಹ್ನ 2 ಗಂಟೆ ವೇಳೆಗೆ ಪಶ್ಚಿಮ ಬಂಗಾಳದಲ್ಲಿ ಮತದಾನ ಶೇ 65ರಷ್ಟಿದ್ದರೆ, ಕರ್ನಾಟಕದಲ್ಲಿ 2 ಗಂಟೆ ದಾಟಿದರೂ ಶೇ 40 ದಾಟಿಲ್ಲ. ಮಧ್ಯಪ್ರದೇಶ ಶೇ 40, ರಾಜಸ್ಥಾನ ಶೇ 37.46, ಶೇ 44
  Live: 5th phase of Lok Sabha election 2014 on Apr 17

  2.35 : ಮಧ್ಯಾಹ್ನ 1 ಗಂಟೆ ವೇಳೆಗೆ ಮಣಿಪುರ ಶೇ 62ರಷ್ಟಿದೆ. ಬಿಹಾರ ಶೇ 33.41, ಜಾರ್ಖಂಡ್ ಶೇ 41,
  13.15:
  12.30ರ ವೇಳೆಗೆ ಮಹಾರಾಷ್ಟ್ರದಲ್ಲಿ ಶೇ 21 ರಷ್ಟು ಮತದಾನ. ಕರ್ನಾಟಕದಲ್ಲಿ ಶೇ 24ರಷ್ಟು ಮತದಾನ.
  13.00: ಎಎಪಿ ವಿಜಯವಾಡ ನಾಮಾಂಕಿತ ಸದಸ್ಯನಿಗೆ ಚುನಾವಣಾ ಆಯೋಗದಿಂದ ನೋಟಿಸ್
  12.45: ನಟ, ಬಿಜೆಪಿ ಅಭ್ಯರ್ಥಿ ಶತ್ರುಘ್ನ ಸಿನ್ಹಾರಿಂದ ಪಾಟ್ನದಲ್ಲಿ ಮತದಾನ.
  12.35: ಒಡಿಶಾದ ಕೆಂದ್ರಾಪುರದಲ್ಲಿ ಇವಿಎಂ ಹಾಳುಗೆಡವಿದ ಕಾಂಗ್ರೆಸ್ ಏಜೆಂಟ್ ಬಂಧನ. ಕರ್ನಾಟಕದ ಸಕಲೇಶಪುರದಲ್ಲಿ ಇವಿಎಂ ಮೇಲೆ ವಾಂತಿ ಮಾಡಿದ ಮತದಾರ.
  Ananthkumar and family


  12.30:
  ಜಾರ್ಖಂಡ್ ರಾಜ್ಯದ ಬೊಕಾರೊ ಜಿಲ್ಲೆಯಲ್ಲಿ ಮಾವೋವಾದಿಗಳು ರೈಲುಹಳಿ ಸ್ಫೋಟಿಸಿದ ಪರಿಣಾಮ ರೈಲು ಸಂಚಾರ ಅಸ್ತವ್ಯಸ್ತ. ಗಿರಿಧ್ ಲೋಕಸಭಾ ಕ್ಷೇತ್ರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಘಟನೆಯಲ್ಲಿ ಸಿಆರ್ ಪಿಎಫ್ ಯೋಧರಿಬ್ಬರು ಗಾಯಗೊಂಡಿದ್ದಾರೆ.
  12.15: ಉತ್ತರಪ್ರದೇಶದಲ್ಲಿ 11ಕ್ಕೆ ಶೇ 24.7 ರಷ್ಟು ಮತದಾನ, ಛತ್ತೀಸ್ ಗಢದಲ್ಲಿ ಶೇ30ರಷ್ಟು ಮತದಾನ. ದಾರ್ಜಲಿಂಗ್ ನಲ್ಲಿ ಶೇ 31,ರಾಜಸ್ಥಾನ ಶೇ 20,
  12.05:
  11 ಗಂಟೆಗೆ ಪಶ್ಚಿಮ ಬಂಗಾಳದಲ್ಲಿ 42% ಮತದಾನ, ರಾಜಸ್ಥಾನದ ಜೋಧಪುರದಲ್ಲಿ ಶೇ 14ರಷ್ಟು ಮತದಾನ.
  11.45: ಕರ್ನಾಟಕದ ಬಿಡದಿಯಲ್ಲಿ ಡಿಕೆ ಶಿವಕುಮಾರ್ ಬೆಂಬಲಿಗರಿಂದ ಎಎಪಿ ಕಾರ್ಯಕರ್ತರ ಮೇಲೆ ಹಲ್ಲೆ.
  11.30: ಕೇಂದ್ರ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಚಂದ್ರೇಶ್ ಕುಮಾರಿ ಜೋಧಪುರದಲ್ಲಿ ಮತದಾನ ಮಾಡಲು ಸಾಧ್ಯವಾಗಿಲ್ಲ. ಪಟ್ಟಿಯಲ್ಲಿ ಹೆಸರು ನಾಪತ್ತೆ.
  11.15: 10 ಗಂಟೆಗೆ ಉತ್ತರಪ್ರದೇಶ ಹಾಗೂ ಕರ್ನಾಟಕದಲ್ಲಿ ಶೆ 18ರಷ್ಟು ಮತದಾನ.
  11.10: ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಗುಲ್ಬರ್ಗಾದಲ್ಲಿ ಮತದಾನ, ಬಿಹಾರದಲ್ಲಿ ನಿತಿಶ್ ಕುಮಾರ್, ಛತೀಸ್ ಗಢದಲ್ಲಿ ಸಿಎಂ ರಮಣ್ ಸಿಂಗ್ ಮತದಾನ
  Rajeev voted

  11.05: ಒಡಿಶಾ ಸಿಎಂ ನವೀನ್ ಪಟ್ನಾಯಕ್, ರಾಜಸ್ಥಾನ ಸಿಎಂ ವಸುಂಧರಾ ರಾಜೆ ಅವರಿಂದ ಮತದಾನ.
  10.45: ದೇಶದಲ್ಲಿ ಮೋದಿ ಅಲೆ ಇಲ್ಲ, ಜನ ಬದಲಾವಣೆ ಬಯಸಿದ್ದಾರೆ ಎಂದು ಮಮತಾ ಬ್ಯಾನರ್ಜಿ ಪರ ಬೈಚುಂಗ್ ಭೂತಿಯಾ
  10.35: ಕರ್ನಾಟಕದಲ್ಲಿ 9 ಗಂಟೆಗೆ 16%, ಮಣಿಪುರದಲ್ಲಿ 10%, ಮಹಾರಾಷ್ಟ್ರ ಶೇ 12, ಉತ್ತರಪ್ರದೇಶ ಶೆ 13, ರಾಜಸ್ಥಾನ ಶೇ 14.
  10.15: ರಾಳೆಗಾನ್ ಸಿದ್ಧಿ ಗ್ರಾಮದಲ್ಲಿ ಅಣ್ಣಾ ಹಜಾರೆ ಅವರಿಂದ ಮತದಾನ.
  10.30: ಬೆಂಗಳೂರಿನಲ್ಲಿಇನ್ಫೋಸಿಸ್ ನಾರಾಯಣಮೂರ್ತಿ ದಂಪತಿಯಿಂದ ಮತದಾನ. ನಂದನ್ ನಿಲೇಕಣಿ, ಅನಂತಕುಮಾರ್, ನಟ ಮಾಸ್ಟರ್ ಹಿರಣ್ಣಯ್ಯ, ಶೋಭಾ ಕರಂದ್ಲಾಜೆ, ಸಂಸದ ರಾಜೀವ್ ಚಂದ್ರಶೇಖರ್, ರಮ್ಯಾ, ನಟ ಗಣೇಶ್, ವಿಜಯ್, ಮಾಳವಿಕಾ, ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಮುಂತಾದವರು ಮತದಾನ ಮಾಡಿದ್ದಾರೆ.
  9.31: ಮಧ್ಯಪ್ರದೇಶದಲ್ಲಿ ವಿದಿಶಾದಲ್ಲಿ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ರಿಂದ ಮತದಾನ
  9.20: ಜೈಪುರದ ಗ್ರಾಮೀಣ ಬಿಜೆಪಿ ಅಭ್ಯರ್ಥಿ ಒಲಿಂಪಿಯನ್ ರಾಜವರ್ದನ್ ರಾಥೋರ್ ರಿಂದ ಮತದಾನ
  9.15: ಲಾಲೂ ಪ್ರಸಾದ್, ರಾಬ್ರಿ ದೇವಿ ಮತ್ತು ಮಿಸಾ ಭಾರ್ತಿ ಅವರು ಪಾಟಲೀಪುತ್ರದಲ್ಲಿ ಮತದಾನ ಮಾಡಿದ್ದಾರೆ.
  9.00: ನಟ, ನಿರ್ದೇಶಕ ಅಮೊಲ್ ಪಾಲೇಕರ್ ಹಾಗೂ ಅವರ ಪತ್ನಿ ಸಂಧ್ಯಾ ಗೋಖಲೆ ಅವರ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆ.
  5th phase of Lok Sabha election 2014 today

  8.45: ಉಧಮ್ ಪುರದ ಶೇ 93 ಮತಗಟ್ಟೆ ಸೇರಿ 2051 ಮತಗಟ್ಟೆಗಳನ್ನು ಅತಿಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ.
  8.30: ಮಹಾರಾಷ್ಟ್ರದ ಸೋಲಾಪುರದಲ್ಲಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಮತ ಚಲಾಯಿಸಿದ್ದಾರೆ.
  8.00: ಮಹಾರಾಷ್ಟ್ರದ ಬಾರಮತಿಯಲ್ಲಿ ಎಸ್ ಸಿಪಿ ಹಾಲಿ ಸಂಸದೆ ಸುಪ್ರಿಯಾ ಸುಳೆ ಮತದಾನ ಮಾಡಿದರು.
  7.45: ಛತ್ತೀಸ್ ಗಢದ ಸಿಎಂ ರಮಣ್ ಸಿಂಗ್ ಪುತ್ರ ಅಭಿಶೇಕ್ ಸಿಂಗ್ ರಜನ್ ಗಾಂವ್ ಕ್ಷೇತ್ರದಲ್ಲಿ ಮತದಾನ.
  Live: 5th phase of Lok Sabha election 2014 today

  ಪ್ರಮುಖರು : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ನಂದನ್ ನಿಲೇಕಣಿ, ಅನಂತಕುಮಾರ್, ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಶ್ರೀಕಾಂತ್ ಜೆನಾ, ಎನ್ ‌ಸಿಪಿ ವರಿಷ್ಠ ಶರದ್ ಪವಾರ್ ಪುತ್ರ ಸುಪ್ರಿಯಾ ಸುಳೆ, ಆರ್ ‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮಗಳು ಮೀಸಾ ಭಾರತಿ ಸೇರಿದಂತೆ 1,769 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  One hundred and twenty one constituencies in 12 states of the country go to polls in the fifth phase of the Lok Sabha election 2014 on Thursday. The states going to the polls include: Karnataka (28 seats), Rajasthan (20 seats), Maharashtra (19 seats), Odisha and UP (11 seats each), MP (10 seats), Bihar (7 seats), Jharkhand (6 seats), Chhattisgarh (3 seats), West Bengal (4 seats) and Jammu and Kashmir and Manipur (1 seat each).

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more