ಯುಪಿ: ಆರ್ಡರ್ ಮಾಡಿದ್ದು ವಾಚ್- ಮನೆಗೆ ಬಂದಿದ್ದು ಸಗಣಿ

ಲಕ್ನೋ ಅಕ್ಟೋಬರ್ 10: ಹಿಂದೊಂದು ಕಾಲವಿತ್ತು. ಏನಾದರೂ ಬೇಕಾದರೆ ಒಂದು ತಿಂಗಳ ಮುಂಚೆ ಪ್ಲ್ಯಾನ್ ಮಾಡಿ. ಒಂದು ಬಿಟ್ಟು ಮೂರ್ನಾಲ್ಕು ಅಂಗಡಿ ಸುತ್ತಾಡಿ ಗುಣಮಟ್ಟ ಹಾಗೂ ಬೆಲೆಯನ್ನು ಚೌಕಾಸಿ ಮಾಡಿ ಖರೀದಿ ಮಾಡಲಾಗುತ್ತಿತ್ತು. ಆದರೀಗ ಎಲ್ಲವೂ ಆರ್ಡರ್‌ ಮೂಲಕವೇ ಬುಕ್ ಮಾಡಿ ಖರೀದಿಸಲಾಗುತ್ತದೆ. ಹೀಗೆ ಮಹಿಳೆಯೊಬ್ಬರು ವಸ್ತುವೊಂದನ್ನು ಬುಕ್ ಮಾಡಿದ್ದು, ಬುಕ್ ಮಾಡಿದ ವಸ್ತು ಒಂದಾಗಿದ್ದಾರೆ ಮನೆಗೆ ಬಂದ ವಸ್ತು ಮತ್ತೊಂದಾಗಿತ್ತು.

ಇದು ಭಾರತದಲ್ಲಿ ಹಬ್ಬದ ಋತುವಾಗಿದೆ. ಲಾಭದಾಯಕ ಕೊಡುಗೆಗಳು ಮತ್ತು ರಿಯಾಯಿತಿಗಳ ಮೂಲಕ ಗ್ರಾಹಕರನ್ನು ಆಕರ್ಷಿಸಲು ಬ್ರ್ಯಾಂಡ್‌ಗಳು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿವೆ. ಇದಕ್ಕಾಗಿ ಗ್ರಾಹಕರು ಉತ್ತಮ ವಸ್ತುಗಳನ್ನು ಪಡೆಯಲು ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಿದ್ದಾರೆ. ಹಲವಾರು ಜನ ಹಲವಾರು ವಸ್ತುಗಳನ್ನು ಆಫರ್‌ಗಳಲ್ಲಿ ಖರೀದಿ ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ ಫ್ಲಿಪ್‌ಕಾರ್ಟ್‌ನಿಂದ ಕೈಗಡಿಯಾರ ಆರ್ಡರ್ ಮಾಡಿ ಬದಲಿಗೆ ಹಸುವಿನ ಸಗಣಿಯ ಬೆರಣಿಯನ್ನು ಸ್ವೀಕರಿಸಿದ್ದಾರೆ.

ಹಲವಾರು ಆರ್ಡರ್‌ಗಳು ಒಬ್ಬ ವಿತರಕನ ಕೈ ಸೇರಿದಾಗ ಮಿಕ್ಸ್-ಅಪ್‌ ಆಗಿ ಮತ್ತು ವಿತರಣೆ ವೇಳೆ ಬದಲಾಗುವುದನ್ನು ನಾವು ಕೆಳಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ಆರ್ಡರ್‌ ಮಾಡಿದ್ದೇ ಒಂದು ಕೈ ಸೇರಿದ್ದೇ ಮತ್ತೊಂದು.

UP: Woman Orders Wrist Watch From Flipkart, Receives Cow Dung

ಹೆಚ್ಚಾಗಿ, ಜನರು ಆರ್ಡರ್ ಮಾಡಿದ ಗ್ಯಾಜೆಟ್‌ಗಳ ಬದಲಿಗೆ ವಿಲಕ್ಷಣ ವಸ್ತುಗಳನ್ನು ಸ್ವೀಕರಿಸುತ್ತಾರೆ. ಅಂತಹ ಇನ್ನೊಂದು ಘಟನೆಯಲ್ಲಿ, ಯುಪಿಯ ಕೌಶಂಬಿ ಜಿಲ್ಲೆಯ ಮಹಿಳೆಯೊಬ್ಬರು ತಾನು ಆರ್ಡರ್ ಮಾಡಿದ ಮಣಿಕಟ್ಟಿನ ಗಡಿಯಾರದ ಬದಲಿಗೆ ಹಸುವಿನ ಸಗಣಿ ಬೆರಣಿಯನ್ನು ಪಡೆದು ಆಘಾತಗೊಂಡಿದ್ದಾರೆ. ನವಭಾರತ್ ಟೈಮ್ಸ್ ಪ್ರಕಾರ, ನೀಲಂ ಯಾದವ್ ಅವರು ಫ್ಲಿಪ್‌ಕಾರ್ಟ್‌ನಲ್ಲಿ ಅಂದಾಜು 1,304 ರೂಪಾಯಿಯ ವಾಚ್‌ ಅನ್ನು ಆರ್ಡರ್ ಮಾಡಿದ್ದರು. ಅವರು ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಿಕೊಂಡಿದ್ದರು. ಅದರ ನಂತರ ಅವರ ಆರ್ಡರ್ ಸೆಪ್ಟೆಂಬರ್ 28 ರಂದು ಬಂದಿತು.

ಅವಳು ಪ್ಯಾಕೇಜ್ ಅನ್ನು ತೆರೆದಾಗ, ಫ್ಲಿಪ್‌ಕಾರ್ಟ್ ಡೆಲಿವರಿ ಏಜೆಂಟ್ 4 ಸಣ್ಣ ಹಸುವಿನ ಸಗಣಿ ಬೆರಣಿಗಳನ್ನು ಹೊಂದಿರುವ ಪ್ಯಾಕೆಟ್ ಅನ್ನು ನೀಡಿರುವುದನ್ನು ಕಂಡು ಅವರು ಆಘಾತಕ್ಕೊಳಗಾಗಿದ್ದಾರೆ. ಈ ವೇಳೆ ಕೋಪಗೊಂಡ ಮಹಿಳೆಯ ಸಹೋದರ ಡೆಲಿವರಿ ಬಾಯ್‌ಗೆ ಕರೆ ಮಾಡಿ ಕುಂದುಕೊರತೆ ಇತ್ಯರ್ಥಪಡಿಸಲು ತಿಳಿಸಿದ್ದಾರೆ. ಕೊನೆಗೆ ಡೆಲಿವರಿ ಏಜೆಂಟ್ ಹಣವನ್ನು ಹಿಂದಿರುಗಿಸಲು ಒಪ್ಪಿಕೊಂಡಿದ್ದಾರೆ.

UP: Woman Orders Wrist Watch From Flipkart, Receives Cow Dung

ಇದೇ ರೀತಿಯ ಘಟನೆಯಲ್ಲಿ ಯಶಸ್ವಿ ಶರ್ಮಾ ಎಂಬ ಗ್ರಾಹಕರು ತಮ್ಮ ತಂದೆಗೆ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ ಲ್ಯಾಪ್‌ಟಾಪ್ ಆರ್ಡರ್ ಮಾಡಿದರು. ಆದರೆ ಲ್ಯಾಪ್‌ಟಾಪ್ ಬದಲಿಗೆ ಕೆಲವು ಸಾಬೂನುಗಳನ್ನು ಪಡೆದಿರುವುದು ಬೆಳಕಿಗೆ ಬಂದಿದೆ.

ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ, ಅವರು ಸಂಪೂರ್ಣ ಈ ಘಟನೆಯನ್ನು ವಿವರಿಸಿದ್ದಾರೆ. ' ನಾನು ಓಪನ್ ಬಾಕ್ಸ್ ಎಂದರೆ ಲ್ಯಾಪ್‌ಟಾಪ್ ಪರಿಶೀಲಿಸಿದ ನಂತರವೇ ಡೆಲಿವರಿ ಬಾಯ್‌ಗೆ ಒಟಿಪಿ ನೀಡಬೇಕಿತ್ತು. ಪ್ರಿಪೇಯ್ಡ್ ಡೆಲಿವರಿಗಳಿಗೆ ಎಂದಿನಂತೆ - ಪ್ಯಾಕೇಜ್ ಅನ್ನು ಸ್ವೀಕರಿಸಿದ ನಂತರ OTP ನೀಡಬೇಕೆಂದು ಅವರು ಕೇಳಿದರು. ನಾನು ನೋಡದೆ OTP ನೀಡಿದೆ. ಡೆಲಿವರಿ ಬಾಯ್ ಬಾಕ್ಸ್ ತಪಾಸಣೆ ಮಾಡದೆ ಬಂದು ಹೋಗಿದ್ದಕ್ಕೆ ನನ್ನ ಬಳಿ ಸಿಸಿಟಿವಿ ಪುರಾವೆ ಇದೆ. ಮತ್ತು ತರುವಾಯ ಬಾಕ್ಸ್‌ ಒಳಗೆ ಯಾವುದೇ ಲ್ಯಾಪ್‌ಟಾಪ್ ಇರಲಿಲ್ಲ' ಎಂದು ಅವರು ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+