ಯುಪಿ: ಮಳೆ ಸಂಬಂಧಿತ ಘಟನೆಗಳಲ್ಲಿ 9ಕ್ಕೂ ಹೆಚ್ಚು ಸಾವು- ಶಾಲೆಗಳಿಗೆ ರಜೆ

ಲಕ್ನೋ, ಅಕ್ಟೋಬರ್ 10: ದೇಶದ ಹಲವು ಭಾಗಗಳಲ್ಲಿ ಮತ್ತೆ ಮಳೆ ಚುರುಕುಗೊಂಡಿದೆ. ಅಧಿಕ ಮಳೆಯಿಂದಾಗಿ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಭಾನುವಾರ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಭಾನುವಾರದಂದು ರಾಜ್ಯವು ಸರಾಸರಿ 22.5 ಮಿಮೀ ಮಳೆಯನ್ನು ದಾಖಲಿಸಿದ್ದು ಇದು ದಿನದ 'ದೀರ್ಘ ಅವಧಿಯ ಸರಾಸರಿ' (LPA) ಗಿಂತ 2396 ಶೇಕಡಾ ಹೆಚ್ಚಾಗಿದೆ. ಅಕ್ಟೋಬರ್ 1 ರಿಂದ ರಾಜ್ಯವು 92.3 ಮಿಮೀ ಮಳೆಯನ್ನು ದಾಖಲಿಸಿದೆ. ಇದು ಎಲ್ಪಿಎ 14.4 ಮಿಮೀಗಿಂತ 500 ರಷ್ಟು ಹೆಚ್ಚಾಗಿದೆ. ಇನ್ನೂ ಮುಂದಿನ 24 ಗಂಟೆಗಳಲ್ಲಿ ರಾಜ್ಯಾದ್ಯಂತ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನು ಐಎಂಡಿ ಅಧಿಕಾರಿಗಳು ನೀಡಿದ್ದಾರೆ.

ಈ ನಡುವೆ ಗೋರಖ್‌ಪುರದಲ್ಲಿ ರಾಪ್ತಿ ನದಿಯಲ್ಲಿ ದೋಣಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಬಲಿರಾಮ್ ಸಿಂಗ್ ಮತ್ತು ಬ್ರಿಜೇಶ್ ಯಾದವ್ ಎಂದು ಗುರುತಿಸಲಾಗಿದೆ ಎಂದು ಗೋರಖ್‌ಪುರ (ದಕ್ಷಿಣ) ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಗಾಜಿಯಾಬಾದ್‌ನಲ್ಲಿ ಮಳೆಯಿಂದಾಗಿ ಮನೆ ಕುಸಿದು 90 ವರ್ಷದ ಮಹಿಳೆ ಸಾವನ್ನಪ್ಪಿದ್ದು ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಇನ್ನೂ ಹರ್ದೋಯಿಯಲ್ಲಿ ಸಿಡಿಲು ಬಡಿದು ಇಬ್ಬರು ರೈತರು ಸಾವನ್ನಪ್ಪಿದ್ದಾರೆ. ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ವಂದನಾ ತ್ರಿವೇದಿ ಮಾತನಾಡಿ, 'ಸವೇಜ್‌ಪುರ ತಹಸಿಲ್‌ನಲ್ಲಿ ರೈತ ರಾಜೇಂದ್ರ ಸಿಂಗ್ ಚೌಹಾಣ್ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಇದೇ ರೀತಿಯ ಘಟನೆಯಲ್ಲಿ ಪಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರ್ ಮಿಶ್ರಾ ಗ್ರಾಮದ ಮುನಿರಾಜ್ (24) ಸಾವನ್ನಪ್ಪಿದ್ದು ಮತ್ತು ಛತ್ರಪಾಲ್ (35) ಎಂಬುವವರು ಗಾಯಗೊಂಡಿದ್ದಾರೆ' ಎಂದಿದ್ದಾರೆ.

ಮಳೆ ಸಂಬಂಧಿತ ಘಟನೆಗಳಲ್ಲಿ 9ಕ್ಕೂ ಹೆಚ್ಚು ಸಾವು

ಮಳೆ ಸಂಬಂಧಿತ ಘಟನೆಗಳಲ್ಲಿ 9ಕ್ಕೂ ಹೆಚ್ಚು ಸಾವು

ಇನ್ನೂ ಸೀತಾಪುರ ಜಿಲ್ಲೆಯಲ್ಲಿ ಸಿಡಿಲು ಬಡಿದು ಔತ್ರೌಲಿ ಗ್ರಾಮದ 11 ವರ್ಷದ ಬಾಲಕಿ ಮಹಾಕ್ ಸಾವನ್ನಪ್ಪಿದ್ದಾಳೆ. ಜೊತೆಗೆ ಅಧಿಕ ಮಳೆಯಿಂದಾಗಿ ಇಟಾವಾದಲ್ಲಿ ಜೌನ್‌ಪುರ ಗ್ರಾಮದ ಮುಲಾ ದೇವಿ (75) ಸಿಡಿಲು ಬಡಿದು ಮೇತರಾಗಿದ್ದಾರೆ. ಬುಲಂದ್‌ಶಹರ್‌ನಲ್ಲಿ ಭಾರೀ ಮಳೆಯಿಂದಾಗಿ ಮನೆ ಕುಸಿದು 14 ವರ್ಷದ ಬಾಲಕ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಸ್ಥಳೀಯ ಅಧಿಕಾರಿಗಳ ಪ್ರಕಾರ, ಮಹಾರಾಜಪುರ ಪ್ರದೇಶದಲ್ಲಿ ತಾತ್ಕಾಲಿಕ ಗೋಡೆಯೊಂದು ಬಿದ್ದಿದ್ದರಿಂದ ಪವನ್ (14), ಗುಡ್ಡು (12), ನಿಶಾ (18), ಶಾಲು (14) ಮತ್ತು ಲಾಲು (13) ಅವಶೇಷಗಳಡಿಯಲ್ಲಿ ಹೂತು ಹೋಗಿದ್ದರು. ಎಲ್ಲರನ್ನು ರಕ್ಷಣೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು ಎಲ್ಲಾ ಮಕ್ಕಳನ್ನು ಚೇತರಿಸಿಕೊಂಡರೆ, ಪವನ್ ಎಂಬಾತ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ದಿಬಾಯಿ ಮತ್ತು ಉಸಾದ್‌ಪುರ ಪ್ರದೇಶಗಳಲ್ಲಿ ಇದೇ ರೀತಿಯ ಘಟನೆಗಳಲ್ಲಿ ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ. ಬಲರಾಂಪುರದಲ್ಲಿ ಇಬ್ಬರು ಹದಿಹರೆಯದವರು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇವರಲ್ಲಿ ಜಿಶಾನ್ (16) ಎಂಬ ಬಾಲಕನ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಸರ್ಕಲ್ ಆಫೀಸರ್ ರಾಧಾ ರಮಣ್ ಸಿಂಗ್ ತಿಳಿಸಿದ್ದಾರೆ.

ಕೆಲವು ಭಾಗಗಳಲ್ಲಿ ಶಾಲೆಗಳು ಬಂದ್

ಕೆಲವು ಭಾಗಗಳಲ್ಲಿ ಶಾಲೆಗಳು ಬಂದ್

ಭಾರೀ ಮಳೆಯ ಹಿನ್ನೆಲೆಯಲ್ಲಿ ಲಕ್ನೋ, ಕಾನ್ಪುರ್, ಆಗ್ರಾ, ಅಲಿಗಢ, ಮೀರತ್, ಗೌತಮ್ ಬುದ್ಧ ನಗರ ಮತ್ತು ಗಾಜಿಯಾಬಾದ್ ಸೇರಿದಂತೆ ಹತ್ತಾರು ಜಿಲ್ಲೆಗಳ ಅಧಿಕಾರಿಗಳು ಸೋಮವಾರ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ. ಅಲಿಘರ್‌ನಲ್ಲಿ 12 ನೇ ತರಗತಿಯವರೆಗಿನ ಎಲ್ಲಾ ಶಾಲೆಗಳು ಅಕ್ಟೋಬರ್ 12 ರವರೆಗೆ ಮುಚ್ಚಲ್ಪಡುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಎಸ್‌ಇ, ಐಸಿಎಸ್‌ಇ, ಮದರ್ಸಾ ಶಿಕ್ಷಣ ಮಂಡಳಿ ಮತ್ತು ಸಂಸ್ಕೃತ ಶಾಲೆಗಳ ಅಡಿಯಲ್ಲಿ ನಡೆಯುವ ಶಾಲೆಗಳು ಸೋಮವಾರ ಮುಚ್ಚಲ್ಪಡುತ್ತವೆ ಮತ್ತು ಮಂಗಳವಾರ ಮತ್ತೆ ತೆರೆಯಲ್ಪಡುತ್ತವೆ ಎಂದು ಗಾಜಿಯಾಬಾದ್ ಆಡಳಿತದ ಅಧಿಸೂಚನೆ ತಿಳಿಸಿದೆ. ನೋಯ್ಡಾದಾದ್ಯಂತ 12 ನೇ ವರೆಗಿನ ಎಲ್ಲಾ ಶಾಲೆಗಳಿಗೂ ಈ ಆದೇಶ ಅನ್ವಯಿಸುತ್ತದೆ ಎಂದುಲ್ಲಿ ತಿಳಿಸಲಾಗಿದೆ.

ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಅತಿವೃಷ್ಟಿ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಗೌತಮಬುಧನಗರದ ಜಿಲ್ಲಾಧಿಕಾರಿಗಳು ಎಲ್ಲಾ ಮಂಡಳಿಗಳ ಸರ್ಕಾರಿ, ಅರೆ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ಅಕ್ಟೋಬರ್ 10 ರಂದು (ಸೋಮವಾರ) ರಜೆ ಘೋಷಿಸಿದ್ದಾರೆ. ಜಿಲ್ಲೆಯ 1 ರಿಂದ 12 ನೇ ತರಗತಿಯವರೆಗೆ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ಶಾಲಾ ಇನ್ಸ್‌ಪೆಕ್ಟರ್ ಧರಂವೀರ್ ಸಿಂಗ್ ತಿಳಿಸಿದ್ದಾರೆ. "ಆದ್ದರಿಂದ, ಎಲ್ಲಾ ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರು ಆದೇಶದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು" ಎಂದು ಸಿಂಗ್ ಭಾನುವಾರ ತಡರಾತ್ರಿ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

ಯುಪಿಯಲ್ಲಿ ರಸ್ತೆಗಳು ಜಲಾವೃತ

ಯುಪಿಯಲ್ಲಿ ರಸ್ತೆಗಳು ಜಲಾವೃತ

ಅಕ್ಟೋಬರ್ 10 ರಂದು ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. "ಅಕ್ಟೋಬರ್ 9 ರಿಂದ 12 ರವರೆಗೆ ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಧಾರಕಾರಾ ಮಳೆಯಾಗುವ ಸಾಧ್ಯತೆಯಿದೆ. ಅಕ್ಟೋಬರ್ 10 ರಂದು ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ" ಎಂದು IMD ತಿಳಿಸಿದೆ.

ಆದರೆ ಅಕ್ಟೋಬರ್ 10 ರಿಂದ ರಾಷ್ಟ್ರ ರಾಜಧಾನಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹಿರಿಯ ವಿಜ್ಞಾನಿ ಆರ್‌ಕೆ ಜೆನಮಣಿ ಭಾನುವಾರ ಹೇಳಿದ್ದಾರೆ. ಅಧಿಕ ಮಳೆಗೆ ರಸ್ತೆಗಳೆಲ್ಲ ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತವಾಗಿದೆ. ಬಲರಾಂಪುರ್-ಬಧ್ರಿ ರಾಷ್ಟ್ರೀಯ ಹೆದ್ದಾರಿ 730 ಪ್ರವಾಹದ ನೀರಿನಲ್ಲಿ ಮುಳುಗಿದ್ದು ಟ್ರಾಫಿಕ್ ಜಾಂ್ ಉಂಡಾಗಿದೆ.

ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಗ್ರಾಮಸ್ಥರ ಮನೆ ಖಾಲಿಗೆ ಮನವಿ

ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಗ್ರಾಮಸ್ಥರ ಮನೆ ಖಾಲಿಗೆ ಮನವಿ

ಜಿಲ್ಲೆಯ ಅಧಿಕಾರಿಗಳ ಪ್ರಕಾರ, ಬಲರಾಂಪುರ್ ತಾಹಸಿಲ್ ವ್ಯಾಪ್ತಿಯ ಗ್ರಾಮಗಳಲ್ಲಿ ಹಲವಾರು ಸಾವಿರಾರು ಹೆಕ್ಟೇರ್‌ಗಳಲ್ಲಿ ಬೆಳೆದಿರುವ ಬೆಳೆಗಳು ಮಳೆ ನೀರಿನಿಂದ ಹಾನಿಯಾಗಿದೆ. ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಗ್ರಾಮಸ್ಥರು ಮನೆ ಖಾಲಿ ಮಾಡಿ ಆಶ್ರಯ ತಾಣಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಮಹೇಂದ್ರಕುಮಾರ್ ಮನವಿ ಮಾಡಿದ್ದಾರೆ.

ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆಗಾಗಿ ಎಸ್‌ಡಿಆರ್‌ಎಫ್ ತಂಡಗಳನ್ನು ಸಹ ಒತ್ತಾಯಿಸಲಾಗಿದೆ. ಈ ನಡುವೆ ಮಥುರಾದಲ್ಲಿ, ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರಾಜಸ್ಥಾನ ರಾಜ್ಯ ರಸ್ತೆ ಸಾರಿಗೆ ಬಸ್ ರೈಲ್ವೆ ಕೆಳಸೇತುವೆಯಲ್ಲಿ ಸಿಲುಕಿಕೊಂಡಿದೆ. ಅಗ್ನಿಶಾಮಕ ದಳದವರು ಪ್ರಯಾಣಿಕರ ರಕ್ಷಣೆ ಮಾಡಿದ್ದಾರೆ.

ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರಮೋದ್ ಕುಮಾರ್ ಶರ್ಮಾ ಮಾತನಾಡಿ, ಪ್ರಯಾಣಿಕರಿಗೆ ಸಹಾಯ ಮಾಡಲು ಮತ್ತು ಬಸ್ ಅನ್ನು ತೆಗೆದುಹಾಕಲು ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಎಲ್ಲಾ ಪ್ರಯಾಣಿಕರನ್ನು ರಕ್ಷಿಸಲಾಯಿತು ಮತ್ತು ಕ್ರೇನ್ ಸಹಾಯದಿಂದ ಬಸ್ ಅನ್ನು ಕೆಳಸೇತುವೆಯಿಂದ ಹೊರತೆಗೆಯಲಾಯಿತು. ಬಹ್ರೈಚ್ ಜಿಲ್ಲೆಯ ಜನರ ದೈನಂದಿನ ಜೀವನದ ಮೇಲೂ ಪ್ರವಾಹ ಪರಿಣಾಮ ಬೀರಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ದಿನೇಶ್ ಚಂದ್ರ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿ, "ಅತಿವೃಷ್ಟಿಯಿಂದಾಗಿ ನಾನ್‌ಪಾರಾ ಮತ್ತು ಮಿಹಿಪೂರ್ವ ತಹಸಿಲ್‌ಗಳ 60 ಹಳ್ಳಿಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ವರದಿಯಾಗಿದೆ. ಗ್ರಾಮಸ್ಥರನ್ನು ಸುರಕ್ಷಿತವಾಗಿ ಪ್ರವಾಹ ಧಾಮಗಳಿಗೆ ಸ್ಥಳಾಂತರಿಸಲಾಗಿದೆ. ತೀವ್ರ ಮಳೆಯಿಂದಾಗಿ ಗೈಘಾಟ್ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ಸೇತುವೆ ಹಾನಿಗೊಳಗಾದ ನಂತರ ಬಹ್ರೈಚ್‌ನಿಂದ ಲಖಿಂಪುರ ಖೇರಿಯನ್ನು ಸಂಪರ್ಕಿಸುವ NH-927 ನಲ್ಲಿ ಸಂಚಾರ ಚಲನೆಯನ್ನು ನಿಲ್ಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+