ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

66 ಸಾವಿರ ರುಪಾಯಿ ತಿಂದು ತೇಗಿದ ಮೇಕೆ ಜತೆಗೆ ಊರ ಮಂದಿಯ ಸೆಲ್ಫಿ

|
Google Oneindia Kannada News

ಲಖನೌ, ಜೂನ್ 7: ಉತ್ತರಪ್ರದೇಶದ ಕನೌಜ್ ನ ಸಿಲೌಪುರ್ ಗ್ರಾಮದ ಸರ್ವೇಶ್ ಕುಮಾರ್ ಪಾಲ್ ಗೆ ಈಗ ಉಭಯ ಸಂಕಟ. ತಾನು ಪ್ರೀತಿಯಿಂದ ಸಾಕಿದ ಮೇಕೆಯೊಂದು ಅರವತ್ತಾರು ಸಾವಿರ ರುಪಾಯಿ ಲುಕ್ಸಾನು ಮಾಡಿದೆ. ಆ ಮೇಕೆಯ ಪೇಪರ್ ತಿನ್ನುವ ಪ್ರೀತಿ ತಂದ ಸಂಕಟ ಇದು.

ನೀವು ಅದೇನು ತೊಂದರೆ ತಂದಿದೆ ಎಂಬುದನ್ನು ಈಗಾಗಲೇ ಊಹಿಸಿದ್ದೀರಿ ಅಂತಾದರೆ ಬೆನ್ನು ತಟ್ಟಿಕೊಳ್ಳಿ. ಈ ಮೇಕೆ ಸರ್ವೇಶ್ ಕುಮಾರ್ ರ ಅರವತ್ತಾರು ಸಾವಿರ ರುಪಾಯಿಯನ್ನು ತಿಂದು ಮುಗಿಸಿದೆ. ಇಂಥ ಘನಂದಾರಿ ಕೆಲಸ ಮಾಡಿದ ಮೇಕೆ ಜತೆಗೆ ಸೆಲ್ಫಿ ತೆಗೆಸಿಕೊಳ್ಳುವುದಕ್ಕೆ ಅಕ್ಕಪಕ್ಕದ ಗ್ರಾಮದವರು ಸಹ ಸರ್ವೇಶ್ ಮನೆಗೆ ಬರುತ್ತಿದ್ದಾರೆ.[ಅಪರೂಪದ ಕೆಂಪು ಪಾಂಡಾ ರಕ್ಷಿಸಿದವರಿಗೊಂದು ನಮಸ್ಕಾರ...]

UP goat achieves notoriety for eating master’s Rs 66000

ಸರ್ವೇಶ್ ತಮ್ಮ ಪ್ಯಾಂಟಿನ ಜೇಬಿನಲ್ಲಿಟ್ಟಿದ್ದ ಅರವತ್ತಾರು ಸಾವಿರ ರುಪಾಯಿಯನ್ನು ಈ ಮೇಕೆ ಮಟ್ಟಸವಾಗಿ ಮೆಲುಕು ಹಾಕಿದೆ. ಪಾಪ ತಮ್ಮ ಪಾಡಿಗೆ ಸ್ನಾನಕ್ಕೆ ಹೋಗಿದ್ದ ಸರ್ವೇಶ್ ವಾಪಸ್ ಬರುವ ಹೊತ್ತಿಗೆ ಇನ್ನೇನು ಕೊನೆ ನೋಟು ಅದರ ಬಾಯಿಯಲ್ಲಿ ಇದ್ದದ್ದನ್ನು ಗಮನಿಸಿ ಹೌಹಾರಿದ್ದಾರೆ.

ತಕ್ಷಣ ಎಚ್ಚೆತ್ತುಕೊಂಡಿದ್ದಾರೆ. ಆದರೆ ಏನೂ ಪ್ರಯೋಜನವಾಗಿಲ್ಲ. ಕೇವಲ ಎರಡು ನೋಟುಗಳನ್ನು ಮಾತ್ರ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ಅಷ್ಟರೊಳಗೆ ಈ ಕಾಗದ ಪ್ರೇಮಿ ಮೇಕೆ ಎಲ್ಲ ನೋಟುಗಳನ್ನು ಸ್ವಾಹ ಮಾಡಿದೆ. ಇನ್ನು ಮೇಕೆ ಬಾಯಿಂದ ಕಸಿದ ಎರಡು ನೋಟುಗಳು ಸಹ ಯಾವುದಕ್ಕೂ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿವೆ.[ಮೃತಪಟ್ಟ ಕರುವಿನ ಮುಂದೆ ನಿಂತು ಆ ಆಕಳು ಮಾಡಿದ್ದೇನು?]

ಎಲ್ಲ ನೋಟುಗಳು ಎರಡು ಸಾವಿರ ರುಪಾಯಿ ಮುಖಬೆಲೆಯದ್ದಾಗಿದ್ದವು. ಮನೆ ನಿರ್ಮಾಣಕ್ಕೆ ಇಟ್ಟಿಗೆ ಖರೀದಿಸುವುದಕ್ಕೆ ಅಂತ ಆ ಹಣವನ್ನು ಇಟ್ಟುಕೊಂಡಿದ್ದರು ಸರ್ವೇಶ್.

"ನಾನು ಸ್ನಾನಕ್ಕೆ ಹೋಗಿದ್ದೆ. ಹಣವನ್ನು ಪ್ಯಾಂಟ್ ಜೇಬಿನಲ್ಲಿಟ್ಟಿದ್ದೆ. ಕಾಗದ ತಿನ್ನುವುದನ್ನು ಬಲೇ ಇಷ್ಟಪಡುವ ಮೇಕೆ ಈ ಸಂದರ್ಭದಲ್ಲಿ ಎಲ್ಲ ತಿಂದಿತ್ತು. ಏನು ಮಾಡ್ತೀರಿ, ಅದು ನನ್ನ ಮಗು ಇದ್ದಂತೆ" ಎಂದಿದ್ದಾರೆ ಸರ್ವೇಶ್. ಎರಡು ನೋಟುಗಳು ಅದರ ಎಂಜಿಲಿನಲ್ಲಿ ತೋಯ್ದು ಹೋಗಿತ್ತು. ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿತ್ತು ಎಂದಿದ್ದಾರೆ ಆತ.

ಇದೀಗ ಈ ಸುದ್ದಿ ಹರಡಿ, ಅಕ್ಕಪಕ್ಕದ ಹಳ್ಳಿಯಿಂದ ಈ ಮೇಕೆಯನ್ನು ನೋಡುವುದಕ್ಕೆ ಬರುತ್ತಿದ್ದಾರೆ. ಅದರ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಜತೆಗೆ ತಲೆಗೊಂದು ಸಲಹೆ ಒಗಾಯಿಸುತ್ತಿದ್ದಾರೆ. ಅದಕ್ಕೆ ವಾಂತಿ ಮಾಡಿಸಿ, ನೋಟು ವಾಪಸ್ ಬರಬಹುದು ಅನ್ನೋದರಿಂದ ಹಿಡಿದು, ದರಿದ್ರದ್ದು ಮಾರಿಹಾಕಿ ಅದನ್ನು ಅನ್ನೋವರೆಗೆ ಸಲಹೆಗಳು ಬರುತ್ತಿವೆ.[ದೊರೆಗಂತೂ ಮನಸಿಲ್ಲ, ನಾವೂ ಹೃದಯ ಕಳ್ಕೊಂಡರೆ ಗೋವು ಬದ್ಕೋದು ಹೇಗೆ]

ಇನ್ನೂ ವಿಪರೀತ ಅನ್ನೋ ಮಟ್ಟಕ್ಕೆ ಒಬ್ಬ ಪುಣ್ಯಾತ್ಮ, ಹಣ ತಿನ್ನುವ ಅಪರಾಧ ಮಾಡಿದ ಮೇಕೆಯನ್ನ ಪೊಲೀಸರಿಗೆ ಕೊಡಿ ಅಂತ ಕೂಡ ಸಲಹೆ ನೀಡಿದ್ದಾನೆ. ನಮ್ಮ ದುರದೃಷ್ಟಕ್ಕೆ ಅದಕ್ಕೇನು ಮಾಡೋಣ? ಅವು ನಮ್ಮ ಮಕ್ಕಳಿದ್ದ ಹಾಗೆ. ಅವುಗಳ ಮೇಲೆ ಅಷ್ಟು ಕ್ರೂರಿಗಳಾಗಲು ಸಾಧ್ಯವಿಲ್ಲ ಅಂದಿದ್ದಾರೆ ಸರ್ವೇಶ್ ದಂಪತಿ.

English summary
Sarvesh Kumar Pal, a resident of Siluapur village in Kannauj, Uttar Pradesh, definitely has a unique pet, a goat, which loves to gorge on paper products. Because of his pet, people from nearby villages are flocking to his house to take a selfie with the goat, these days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X