ಉತ್ತರಪ್ರದೇಶ: ಶಿವಪಾಲ್ ಸೇರಿದಂತೆ 191 ಅಭ್ಯರ್ಥಿಗಳ ಪಟ್ಟಿ ಪ್ರಕಟ

Posted By:
Subscribe to Oneindia Kannada

ಲಕ್ನೋ, ಜನವರಿ 20: ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಮಾಜವಾದಿ ಪಕ್ಷ ಶುಕ್ರವಾರದಂದು ಪ್ರಕಟಿಸಿದೆ.

ಶಿವಪಾಲ್ ಸಿಂಗ್ ಯಾದವ್ ಸೇರಿದಂತೆ 191 ಅಭ್ಯರ್ಥಿಗಳ ಹೆಸರುಳ್ಳ ಪಟ್ಟಿಯನ್ನು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಅಂತಿಮಗೊಳಿಸಿದೆ. ಶಿವಪಾಲ್ ಯಾದವ್ ಅವರು ಜಸ್ವಂತ್ ನಗರ್ ಅಸೆಂಬ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಪಡೆದಿದ್ದಾರೆ.[5 ರಾಜ್ಯಗಳಲ್ಲಿ ಚುನಾವಣೆ ಮತದಾನ, ಫಲಿತಾಂಶ: ನಿಮಗಿದು ತಿಳಿದಿರಲಿ]

UP elections: Shivpal gets ticket to contest for Akhilesh's SP


ಮುಲಾಯ ಸಿಂಗ್ ಯಾದವ್ ನಂತರ್ 1996ರಿಂದ ಜಸ್ವಂತ್ ನಗರ ಅಸೆಂಬ್ಲಿ ಕ್ಷೇತ್ರದಿಂದ ಸತತವಾಗಿ ನಾಲ್ಕು ಬಾರಿ ಶಿವಪಾಲ್ ಅವರು ಗೆದ್ದು ಬಂದಿದ್ದಾರೆ.

ಶುಕ್ರವಾರ ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಕಾನ್ಪುರದ ಕಂಟೋನ್ಮೆಂಟ್ ಕ್ಷೇತ್ರದಿಂದ ಅತಿಕ್ ಅಹ್ಮದ್ ಬದಲಿಗೆ ಹಸನ್ ರುಮಿ ಸ್ಪರ್ಧಿಸಲಿದ್ದಾರೆ. ಹರ್ದೊಯಿ ಕ್ಷೇತ್ರದಿಂದ ನರೇಶ್ ಅಗರವಾಲ್ ಅವರ ಪುತ್ರ ನಿತಿನ್ ಅಗರವಾಲ್ ಕಣಕ್ಕಿಳಿಯಲಿದ್ದಾರೆ. ರಾಮ್ ಪುರ್ ನ ಅಬ್ಲಿ ಕ್ಷೇತ್ರದ ಟಿಕೆಟ್ ಅಜಂ ಖಾನ್ ಅವರ ಪುತ್ರ ಅಬ್ದುಲ್ಲಾ ಅಜಂ ಪಾಲಾಗಿದೆ.

ಉತ್ತರಪ್ರದೇಶದ ಒಟ್ಟು 403 ಅಸೆಂಬ್ಲಿ ಕ್ಷೇತ್ರಗಳಿಗೆ ಫೆಬ್ರವರಿ 11 ರಿಂದ ಮಾರ್ಚ್ 08 ರ ತನಕ ಏಳು ಹಂತದಲ್ಲಿ ಮತದಾನ ನಡೆಯಲಿದೆ. ಮಾರ್ಚ್ 11 ರಂದು ಫಲಿತಾಂಶ ಸಿಗಲಿದೆ.

ಅಸೆಂಬ್ಲಿ ಬಲಾಬಲ: ಎಸ್ಪಿ (224), ಬಿಎಸ್ಪಿ (80), ಬಿಜೆಪಿ (47), ಐಎನ್ ಸಿ(28), ಆರ್ ಎಲ್ ಡಿ (9)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Samajwadi Party on Friday released a fresh list of candidates who will contest in 191 constituencies of Uttar Pradesh. The list also includes the name of Shivpal Singh Yadav who is set to contest for the Jaswantnagar assembly constituency.
Please Wait while comments are loading...