ಯೂ ಟರ್ನ್; ಕಾಂಗ್ರೆಸ್-ಎಸ್ಪಿ ಪರ ಪ್ರಚಾರಕ್ಕೆ ಧುಮಕಲಿದ್ದಾರೆ ಮುಲಾಯಂ

By: ವಿಕಾಸ್ ನಂಜಪ್ಪ
Subscribe to Oneindia Kannada

ಲಕ್ನೊ, ಫೆಬ್ರವರಿ 6: ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಉಲ್ಟಾ ಹೊಡೆದಿದ್ದಾರೆ. ಮಗನ ಜತೆ ಜಗಳ ಮಾಡಿಕೊಂಡು ಪಕ್ಷ ಕಳೆದುಕೊಂಡಿದ್ದ ಮುಲಾಯಂ ಇದೀಗ ಅಚ್ಚರಿ ಎಂಬಂತೆ 'ಕಾಂಗ್ರೆಸ್-ಎಸ್ಪಿ' ಮೈತ್ರಿಕೂಟದ ಪರ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ.

ಈ ಹಿಂದೆ ಪುತ್ರ ಅಖಿಲೇಶ್ ಯಾದವ್ ಮತ್ತು ತಂದೆ ಮುಲಾಯಂ ಸಿಂಗ್ ನಡುವೆ ಪಕ್ಷದ ಚುಕ್ಕಾಣಿಗಾಗಿ ಹೈಡ್ರಾಮವೇ ನಡೆದಿತ್ತು. ಕೊನೆಗೆ ವಿವಾದ ಚುನಾವಣಾ ಆಯೋಗದ ಮೆಟ್ಟಿಲೇರಿ ಪಕ್ಷ ಮಗ ಅಖಿಲೇಶ್ ಪಾಲಾಗಿತ್ತು. ಇದರಿಂದ ಸಮಾಜವಾದಿ ಪಕ್ಷದ ಪರ ಪ್ರಚಾರ ನಡೆಸುವುದಿಲ್ಲ ಎಂದು ಮುಲಾಯಂ ಕುಳಿತಿದ್ದರು.[ದೇಶವನ್ನೇ ಕೊಳ್ಳೆ ಹೊಡೆದ ಯುವರಾಜರು -ಅಮಿತ್ ಶಾ]

UP elections: Mulayam does a U-turn, to campaign for SP-Cong

ಆದರೆ ಇದೀಗ ತಮ್ಮ ನಿರ್ಧಾರ ಬದಲಿಸಿರುವ ಮುಲಾಯಂ ಮೈತ್ರಿಕೂಟದ ಪರವಾಗಿ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ. ಮಂಗಳವಾರದಿಂದ ಅವರು ಪ್ರಚಾರ ನಡೆಸಲಿದ್ದಾರೆ. ಈ ಸಂದರ್ಭ ಮಾತನಾಡಿದ ಮುಲಾಯಂ, ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲಿದ್ದಾರೆ. ಕುಟುಂಬದೊಳಗೆ ಯಾವ ಬಿಕ್ಕಟ್ಟುಗಳೂ ಇಲ್ಲ ಎಂದು ಹೇಳಿದ್ದಾರೆ.[ಸಮೀಕ್ಷೆ: ಪಂಜಾಬಿನಲ್ಲಿ ಆಮ್ ಆದ್ಮಿ ರಾಜ್ಯಭಾರ, ಗೋವಾ ಅತಂತ್ರ]

ಈ ಸಂದರ್ಭ ಮುಲಾಯಂ ತಮ್ಮ ಶಿವಪಾಲ್ ಯಾದವ್ ಕೋಪಗೊಂಡಿದ್ದಾರಲ್ಲಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಲಾಯಂ, "ಈ ರೀತಿಯ ಮಾತುಗಳೆಲ್ಲಾ ಆಧಾರ ರಹಿತವಾದದ್ದು. ಶಿವಪಾಲ್ ಯಾರ ಮೇಲೆಯೂ ಕೋಪಗೊಂಡಿಲ್ಲ. ನಾವೆಲ್ಲಾ ಒಂದೇ ಕುಟುಂಬದಂತೆ ಇದ್ದೇವೆ," ಎಂದು ಹೇಳಿದ್ದಾರೆ.[ನಾವು ಸೈಕಲಿನ ಎರಡು ಗಾಲಿಗಳಿದ್ದಂತೆ-ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಖಿಲೇಶ್]

ದೇಶದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಚುನಾವಣೆ ಸಮೀಪಿಸಿದ್ದು ಪ್ರಚಾರ ಭರದಿಂದ ಸಾಗಿದೆ. ಇಂದು ಫರೂಕಾಬಾದ್ ಮತ್ತು ಆಗ್ರಾದಲ್ಲಿ ಬಿಎಸ್ಪಿ ನಾಯಕಿ ಮಾಯಾವತಿ ರ್ಯಾಲಿ ನಡೆಸಲಿದ್ದಾರೆ. ಬಿಜೆಪಿ ನಾಯಕ ರಾಜನಾಥ್ ಸಿಂಗ್ ಅಲಿಘರ್, ಮಥುರಾ ಮತ್ತು ತುಂಡ್ಲಾದಲ್ಲಿ ರ್ಯಾಲಿ ನಡೆಸಲಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶಮ್ಲಿ ಮತ್ತು ಮಥುರ್ಡಾದಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಅಖಿಲೇಶ್ ಸೀತಾಪುರದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mulayam Singh Yadav did a u-turn when he announced that he would campaign for the Samajwadi Party-Congress combine during the Uttar Pradesh elections 2017.
Please Wait while comments are loading...