ಯುಪಿ ಹಣೆಬರಹ ನಿರ್ಧರಿಸಲಿರುವ 5ನೇ ಹಂತದ ಮತದಾನ ಇಂದು
12 ಜಿಲ್ಲೆಗಳ ಒಟ್ಟು 51 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಕಳೆದ ಬಾರಿ ಈ 51 ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ 37, ಕಾಂಗ್ರೆಸ್ ಮತ್ತು ಬಿಜೆಪಿ ತಲಾ 5 ಸ್ಥಾನಗಳನ್ನಷ್ಟೆ ಗೆದ್ದಿದ್ದರೆ, ಬಿಎಸ್ಪಿ ಕೇವಲ 3 ಸ್ಥಾನಗಳಲ್ಲಿ ಗೆಲುವು ಕಂಡಿತ್ತು.
ಲಕ್ನೊ, ಫೆಬ್ರವರಿ 27: ಉತ್ತರ ಪ್ರದೇಶ ವಿಧಾನಸಭೆಗೆ ಇಂದು ಐದನೇ ಹಂತದ ಮತದಾನ ನಡೆಯಲಿದೆ. ಉತ್ತರ ಪ್ರದೇಶದ ಚುನಾವಣೆ ದೃಷ್ಟಿಯಿಂದ ನೋಡಿದರೆ ಈ ಐದನೇ ಸುತ್ತಿನ ಮತದಾನ ನಿರ್ಣಾಯಕ ಪಾತ್ರ ವಹಿಸಲಿದೆ.
12 ಜಿಲ್ಲೆಗಳ ಒಟ್ಟು 51 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಕಳೆದ ಬಾರಿ ಈ 51 ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ 37 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇನ್ನು ಕಾಂಗ್ರೆಸ್ ಮತ್ತು ಬಿಜೆಪಿ ತಲಾ 5 ಸ್ಥಾನಗಳನ್ನಷ್ಟೆ ಗೆದ್ದಿದ್ದರೆ, ಬಿಎಸ್ಪಿ ಕೇವಲ 3 ಸ್ಥಾನಗಳಲ್ಲಿ ಗೆಲುವು ಕಂಡಿತ್ತು.[ಉ. ಪ್ರ ಚುನಾವಣೆ: ಸಮಾಜವಾದಿ ಭದ್ರ ಕೋಟೆಯಲ್ಲಿ 61.16% ಮತದಾನ]

ಒಟ್ಟು 1 ಕೋಟಿ 80 ಲಕ್ಷ ಜನ ಮತದಾನ ಮಾಡಲಿದ್ದು, 607 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಥಿ, ಸುಲ್ತಾನ್ಪುರ, ಅಂಬೇಡ್ಕರ್ ನಗರ, ಬಹ್ರಿಚ್ ಮತ್ತು ಶ್ರವಾಸ್ತಿ ಮತದಾನ ನಡೆಯಲಿರುವ ಪ್ರಮುಖ ಕ್ಷೇತ್ರಗಳಾಗಿವೆ.[ಸಮಾಜವಾದಿ ಭದ್ರ ಕೋಟೆಯಲ್ಲಿ ಮೂರನೇ ಹಂತದ ಚುನಾವಣೆ]
ಸುಪ್ರಿಂ ಕೋರ್ಟ್ ಇತ್ತೀಚೆಗಷ್ಟೆ ರೇಪ್ ಪ್ರಕರಣದಲ್ಲಿ ಆರೋಪಿ ಎಂದು ಪರಿಗಣಿಸುಂತೆ ಆದೇಶ ನೀಡಿದ ಗಾಯತ್ರಿ ಪ್ರಜಾಪತಿಯೂ ಚುನಾವಣೆ ಎದುರಿಸುತ್ತಿದ್ದಾರೆ. ಕೆಲವೇ ತಿಂಗಳುಗಳ ಹಿಂದೆ ಆಖಿಲೇಶ್ ಯಾದವ್ ತಮ್ಮ ಸಂಪುಟದಿಂದ ಭ್ರಷ್ಟಾಚಾರದ ಆರೋಪದಲ್ಲಿ ಪ್ರಜಾಪತಿಯನ್ನು ಸಂಪುಟದಿಂದ ಕಿತ್ತೊಗೆದಿದ್ದರು. ಆದರೆ ತಂದೆ ಮುಲಾಯಂ ಸಿಂಗ್ ಯಾದವ್ ಒತ್ತಡದಿಂದಾಗಿ ಚುನಾವಣೆಯಲ್ಲಿ ಪ್ರಜಾಪತಿಗೆ ಟಿಕೆಟ್ ನೀಡಬೇಕಾಗಿ ಬಂದಿತ್ತು.[ರಾಹುಲ್ ನಾಯಕತ್ವದ ಮೇಲೆ ಕಾರ್ಮೋಡದ ಕರಿನೆರಳು!]
ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಚುನಾವಣಾ ಆಯೋಗ ಬಿಗಿ ಭದ್ರತೆ ಕೈಗೊಂಡಿದೆ.












Click it and Unblock the Notifications