ಯುಪಿ: ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಸುಲಭ
ಲಕ್ನೋ ಮಾರ್ಚ್ 27: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕನಸುಗಳನ್ನು ನನಸಾಗಿಸುವ ಕ್ರಮದಲ್ಲಿ, ಯಮುನಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (YEIDA) ಮಹತ್ತರವಾದ ಹೆಜ್ಜೆಯನ್ನು ಇಟ್ಟಿದೆ. ಈ ನಿಟ್ಟಿನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಸಂಪರ್ಕವನ್ನು ಬಲಪಡಿಸುವ ಕಸರತ್ತಿಗೆ ಕೈಜೋಡಿಸಿದೆ.
ಇದರ ಭಾಗವಾಗಿ ಗ್ರೇಟರ್ ನೋಯ್ಡಾದಿಂದ ಜೇವಾರ್‌ಗೆ ಪ್ರಯಾಣಿಸುವ ಜನರಿಗೆ ಶನಿವಾರ ಬಸ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಜನರಿಗೆ ಇದು ಉಪಯುಕ್ತವಾಗಿದ್ದು ಸಂಪರ್ಕ ಸುಲಭಗೊಳಿಸಲಿದೆ. ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ, ಈ ಬಸ್ ಸೇವೆಯನ್ನು ಪ್ರಾರಂಭಿಸುವುದರಿಂದ ಮುಂದಿನ ದಿನಗಳಲ್ಲಿ ಜೆವಾರ್ ಮತ್ತು ನೋಯ್ಡಾದಲ್ಲಿ ನಿರ್ಮಾಣವಾಗುತ್ತಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸಂಪರ್ಕವನ್ನು ಸುಗಮಗೊಳಿಸುತ್ತದೆ.
ಶನಿವಾರ ನಡೆದ ಸಮಾರಂಭದಲ್ಲಿ ಜೇವರ್ ಶಾಸಕ ಧೀರೇಂದ್ರ ಸಿಂಗ್ ಮತ್ತು ಯೆಡಾ ಅಧಿಕಾರಿಗಳು ಸೆಕ್ಟರ್ 22 ಡಿ ಯಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಿದ ಪ್ರಾಧಿಕಾರದ ಕಚೇರಿಯಿಂದ ಐದು ಬಸ್‌ಗಳ ಪೈಕಿ ಮೂರು ಸಿಎನ್‌ಜಿ ಮತ್ತು ಎರಡು ಎಲೆಕ್ಟ್ರಿಕ್ ಬಸ್‌ಗಳಿಗೆ ಚಾಲನೆ ನೀಡಿದರು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಲಭ ಸಂಪರ್ಕ
ಈ ಬಸ್ ಸೇವೆಯಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಇದು ವಿಶೇಷವಾಗಿ ಜೇವರ್‌ನಲ್ಲಿ ನಿರ್ಮಾಣವಾಗುತ್ತಿರುವ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಂದರ್ಶಕರಿಗೆ ಮತ್ತು ಜೇವರ್‌ನಲ್ಲಿ ನೆಲೆಸಿರುವ ಸುಮಾರು ಹನ್ನೆರಡು ಹಳ್ಳಿಗಳ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಅನೇಕ ವಿದ್ಯಾರ್ಥಿಗಳು ಜೆವಾರ್‌ನಿಂದ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾಕ್ಕೆ ಪ್ರಯಾಣಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಜನರು ಬಹಳ ಹಿಂದಿನಿಂದಲೂ ಉತ್ತಮ ಸಾರ್ವಜನಿಕ ಸಾರಿಗೆಯನ್ನು ಬಯಸುತ್ತಿದ್ದರು. ಬಹಳ ದಿನಗಳ ನಂತರ ಅವರ ಬೇಡಿಕೆ ಈಡೇರಿದೆ ಎಂದರು.

ಈ ಸೇವೆಯು ಅನೇಕ ಹಳ್ಳಿಗಳಿಗೆ ಪ್ರಯೋಜನಕಾರಿ
ಹೊಸ ಬಸ್ ಸೇವೆಯನ್ನು ಪ್ರಾರಂಭಿಸಿದ ನಂತರ, ಪ್ರಾಧಿಕಾರದ ಸಿಇಒ ಅರುಣ್‌ವೀರ್ ಸಿಂಗ್ ಮಾತನಾಡಿ, ಸ್ಥಳೀಯ ನಿವಾಸಿಗಳು ಜೇವರ್ ಮತ್ತು ನೋಯ್ಡಾ ನಡುವೆ ಸಂಪರ್ಕ ಸುಲಭಗೊಳಿಸಲು ಬಹಳ ಸಮಯದಿಂದ ಒತ್ತಾಯಿಸುತ್ತಿದ್ದರು. ಈ ಕುರಿತು ಯಮುನಾ ಪ್ರಾಧಿಕಾರದ ಜತೆ ಚರ್ಚಿಸಿ, ಶನಿವಾರ ಬಸ್ ಸಂಚಾರ ಆರಂಭಿಸಲಾಗಿದೆ. ಈ ಬಸ್‌ಗಳು ಜೆವಾರ್, ರಬುಪುರ, ದಂಕೌರ್, ಜಹಾಂಗೀರ್‌ಪುರ ಮತ್ತು ಇತರ ಪ್ರದೇಶಗಳನ್ನು ಸಂಪರ್ಕಿಸುತ್ತವೆ ಮತ್ತು ಗ್ರೇಟರ್ ನೋಯ್ಡಾದ ಪ್ಯಾರಿ ಚೌಕ್ ಮೂಲಕ ನೋಯ್ಡಾವನ್ನು ತಲುಪುತ್ತವೆ. ಬಸ್‌ಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ಸಂಚಾರ ಮಾಡಲಿವೆ ಎಂದರು.

YEIDAಯ ಈ ಚೊಚ್ಚಲ ಪ್ರಯತ್ನಕ್ಕೆ ಶ್ಲಾಘನೆ
ವಾಸ್ತವವಾಗಿ ಬಿಜೆಪಿ ಸರ್ಕಾರದ ಎರಡನೇ ಅಧಿಕಾರಾವಧಿಯಲ್ಲಿ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಈ ಬಸ್ ಸೇವೆಯು ಜನರಿಗೆ ಉಡುಗೊರೆಯಾಗಿದೆ. YEIDA ಈ ಬಸ್‌ಗಳನ್ನು ಓಡಿಸಲು ವೇಳಾಪಟ್ಟಿಯನ್ನು ಸಿದ್ಧಪಡಿಸುವಲ್ಲಿ ನಿರತವಾಗಿದೆ. ಈ ವೇಳಾಪಟ್ಟಿಯನ್ನು ತಯಾರಿಸಿದ ನಂತರ, ಈ ಮಾರ್ಗದ ಬಸ್‌ಗಳನ್ನು ಅದರಂತೆ ನಿರ್ವಹಿಸಲಾಗುತ್ತದೆ. YEIDA ಯ ಈ ಚೊಚ್ಚಲ ಪ್ರಯತ್ನವನ್ನು ಜನರು ತುಂಬಾ ಮೆಚ್ಚಿದ್ದಾರೆ.

ಸಮಯ ವ್ಯರ್ಥಕ್ಕೆ ಪರಿಹಾರ
ಸ್ಥಳೀಯರ ಪ್ರಕಾರ ಇದುವರೆಗೆ ಸ್ಥಳೀಯ ಗ್ರಾಮಗಳು ಮತ್ತು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರಲಿಲ್ಲ. ಜನರು ಸಾರಿಗೆಗಾಗಿ ಖಾಸಗಿ ವಾಹನಗಳನ್ನು ಹೆಚ್ಚಾಗಿ ಬಳಸುತ್ತಿದ್ದರು. ಇಲ್ಲವಾದಲ್ಲಿ ಆಗ್ರಾದಿಂದ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾಕ್ಕೆ ತೆರಳುವ ಬಸ್‌ಗಳಿಗಾಗಿ ಜನರು ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ನಿಲ್ಲಬೇಕಾಗಿತ್ತು. ಅದೇ ರೀತಿ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಿಂದ ಹಿಂದಿರುಗುವ ಜನರು ಸಾರ್ವಜನಿಕ ಸಾರಿಗೆಯ ಕೊರತೆಯನ್ನು ಎದುರಿಸುತ್ತಿದ್ದಾರೆ. ಹೊಸ ಬಸ್ ಸೇವೆಯಿಂದ ಸ್ಥಳೀಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
-
2026ರ PUC ಫಲಿತಾಂಶಕ್ಕೆ ಕ್ಷಣಗಣನೆ; ಈ ಬಾರಿ ಡಿಜಿಲಾಕರ್ನಲ್ಲೂ ರಿಸಲ್ಟ್ ಲಭ್ಯ, ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ -
Gold Price April 6: ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್ನ್ಯೂಸ್ -
Darshan: ನಟ ದರ್ಶನ್ ಕಾನೂನು ಹೋರಾಟಕ್ಕೆ ಗೆಲುವು: 'ಬಾಸ್' ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ -
ಒರಾಕಲ್ನಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿ ಊರಿಗೆ ಮರಳಿ ಉಬರ್ ಓಡಿಸುತ್ತಿರುವ ಸ್ಫೂರ್ತಿದಾಯಕ ಕಥೆ Viral -
ವಾರ ಭವಿಷ್ಯ: ಈ ರಾಶಿಯ ಪ್ರೇಮಿಗಳು ಮತ್ತೆ ಒಂದಾಗುತ್ತಾರೆ! ಸೂರ್ಯನಿಗೆ ಅರ್ಘ್ಯದಿಂದ ಭಾಗ್ಯ ಬದಲಾವಣೆ -
ಹುಡುಗಿಯರೇ ಎಚ್ಚರ: ಟಾಕ್ಸಿಕ್ ಗಂಡಸರ ಲಕ್ಷಣಗಳಿವು, ಮೆಚ್ಚಿ ಒಲಿದರೆ ಬಲಿಯಾಗುವಿರಿ -ಡಾ ರೂಪಾ ರಾವ್ ಬರಹ -
Ragi Ambli: ಬೇಸಿಗೆಯ ಬಿಸಿಲಿಗೆ ತಂಪೆರೆಯುವ 'ರಾಗಿ ಅಂಬಲಿ'; ಮನೆಯಲ್ಲೇ ಮಾಡುವ ಸುಲಭ ವಿಧಾನ ಇಲ್ಲಿದೆ -
KSRTC ನೌಕರರ ಹಿಂಬಾಕಿ 1271 ರೂ ಬಿಡುಗಡೆ; ವೇತನ ಹೆಚ್ಚಳಕ್ಕೆ ಮುಹೂರ್ತ ಫಿಕ್ಸ್: ಏ.17ಕ್ಕೆ ನಿರ್ಣಾಯಕ ಸಭೆ -
Jowar Price: ಕರ್ನಾಟಕದ ಮಾರುಕಟ್ಟೆಗಳಲ್ಲಿ ಜೋಳದ ದರ ಏರಿಳಿತ; ಇಲ್ಲಿದೆ ಜಿಲ್ಲಾವಾರು ಬೆಲೆ ಪಟ್ಟಿ -
April 7 Horoscope: ಸ್ಪರ್ಧೆಯಲ್ಲಿ ಜಯ ಮತ್ತು ಹೊಸ ಉದ್ಯೋಗ ಅವಕಾಶಗಳು -
Gold Rate April 7: ಚಿನ್ನ - ಬೆಳ್ಳಿ ಬೆಲೆ ಸತತ 3ನೇ ದಿನವೂ ಇಳಿಕೆ; ಚಿನ್ನ ಪ್ರಿಯರಿಗೆ ಗುಡ್ನ್ಯೂಸ್ -
Zomato: ಬೆಂಗಳೂರು Vs ಚೆನ್ನೈ ಸಾಂಬಾರ್ ಎಂದ ಝೊಮ್ಯಾಟೊ; ನಮಗೆ ಸ್ವಿಗ್ಗಿ ಸಾಕು ಎಂದ ನೆಟ್ಟಿಗರು












Click it and Unblock the Notifications