• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಪಿಕೆ' ಬೆಂಬಲಕ್ಕೆ ನಿಂತ ಅಖಿಲೇಶ್ ಯಾದವ್

By Mahesh
|

ಲಖ್ನೋ, ಜ.1: ದೇಶದ ಹಲವೆಡೆ ಅಮೀರ್ ಖಾನ್ ಅಭಿನಯದ 'ಪಿಕೆ' ಚಿತ್ರದ ವಿರುದ್ಧ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿರುವ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ಚಿತ್ರತಂಡಕ್ಕೆ ಭರ್ಜರಿ ಮನ್ನಣೆ ಸಿಕ್ಕಿದೆ.

ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಸರ್ಕಾರ 'ಪಿಕೆ' ಚಿತ್ರದ ವಿವಾದವನ್ನೇ ಲಾಭವಾಗಿ ಬಳಸಿಕೊಂಡು ಪಿಕೆ ಚಿತ್ರಕ್ಕೆ ಸಂಪೂರ್ಣ ತೆರಿಗೆ ವಿನಾಯತಿ ಘೋಷಿಸಿದೆ.

ಅಹಮದಾಬಾದ್, ಮುಂಬೈ ಮತ್ತು ಭೋಪಾಲ್ ನಗರಗಳಲ್ಲಿ ಹಿಂದೂ ಸಂಘಟನೆಗಳ ಸದಸ್ಯರು ಪಿಕೆ ಪ್ರದರ್ಶನವಾಗುತ್ತಿದ್ದ ಚಿತ್ರಮಂದಿರಗಳಿಗೆ ನುಗ್ಗಿ ದಾಂಧಲೆ ಮಾಡಿ, ಪ್ರತಿಭಟನೆ ನಡೆಸಿದ್ದರು. ['ಪಿಕೆ' ಚಿತ್ರಕ್ಕೆ ಐಎಸ್ಐ ಹಣ, ಸ್ವಾಮಿ ಟ್ವೀಟ್]

ಬಾಲಿವುಡ್ ನಟ ಅಮೀರ್ ಖಾನ್ ಅಭಿನಯದ 'ಪಿಕೆ' ಚಿತ್ರದಲ್ಲಿ ಹಿಂದೂ ದೇವರುಗಳು ಮತ್ತು ಧರ್ಮಗುರುಗಳನ್ನು ಅವಹೇಳನ ಮಾಡಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಇದರ ಬೆನ್ನಲ್ಲೇ ಈ ಚಿತ್ರಕ್ಕೆ ಪಾಕಿಸ್ತಾನದ ಐಎಸ್ಐ ಹಣ ತೊಡಗಿಸಿದೆ ಎಂದು ಬಿಜೆಪಿ ಮುಖಂಡ ಸುಬ್ರಮಣ್ಯ ಸ್ವಾಮಿ ಟ್ವೀಟ್ ಮಾಡಿದ್ದರು.

ಪಿಕಿ ಚಿತ್ರಕ್ಕೆ ಯಾರು ಆರ್ಥಿಕ ನೆರವು ನೀಡಿದ್ದಾರೆ? ದುಬೈ ಹಾಗೂ ಐಎಸ್ ಐ ಹಾಗೂ ಡಿಆರ್ ಐ ನಿಂದ ಹಣ ತೊಡಗಿಸಲಾಗಿದೆ ಈ ಬಗ್ಗೆ ತನಿಖೆಯಾಗಲಿ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಅಮೀರ್ ಖಾನ್ ಅವರು ದುಬೈ ಮೂಲದ ಕಂಪನಿ ಚಿತ್ರದ ಮಾರ್ಕೆಟಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದನ್ನು ಉದಾಹರಿಸಲಾಗಿತ್ತು. [ಮೋದಿ ಟೀಕಿಸಿದ್ದ ಅಮೀರ್ ಹೊಡೆದ್ರು 'ಯೂ ಟರ್ನ್']

ಎಲ್ಲೆಡೆ ಪಿಕೆ ಗೆ ನೆಗಟಿವ್ ಪ್ರತಿಕ್ರಿಯೆ ಬರುತ್ತಿರುವ ವೇಳೆಯಲ್ಲಿ ಈ ಚಿತ್ರ ಸಮಾಜಕ್ಕೆ ಒಳ್ಳೆ ಸಂದೇಶ ನೀಡುತ್ತದೆ. ಎಲ್ಲರೂ ತಪ್ಪದೇ ನೋಡಿ ಎಂದು ಕರೆ ನೀಡಿರುವ ಅಖಿಲೇಶ್ ಯಾದವ್, ಚಿತ್ರಕ್ಕೆ ತೆರಿಗೆ ವಿನಾಯತಿ ನೀಡಿರುವುದನ್ನು ಘೋಷಿಸಿದ್ದಾರೆ.

ಈ ನಡುವೆ ಬುಧವಾರ ಕೂಡಾ ದೇಶದ ಹಲವೆಡೆ ಪ್ರತಿಭಟನೆ ನಡೆದಿರುವ ವರದಿಗಳು ಬಂದಿದ್ದು, ದೆಹಲಿಯ ಎರಡು ಚಿತ್ರಮಂದಿರಗಳ ಮುಂದೆ ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪಿಕೆ ಚಿತ್ರ ನಿಷೇಧಕ್ಕೆ ಆಗ್ರಹಿಸಿದ ಘಟನೆ ನಡೆಯಿತು.

ಕೆಳ ತಿಂಗಳುಗಳ ಹಿಂದೆ ಮುಲಾಯಂ ಸಿಂಗ್ ಯಾದವ್ ಅವರ ಹುಟ್ಟುಹಬ್ಬದ ಆಯೋಜನೆಗೆ ಪಾಕಿಸ್ತಾನದಿಂದ ಆರ್ಥಿಕ ನೆರವು ಸಿಕ್ಕಿದೆ ಎಂದು ಅಜಂ ಖಾನ್ ಘೋಷಿಸಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಸುಬ್ರಮಣ್ಯ ಸ್ವಾಮಿ ಟ್ವೀಟ್ ಮಾಡಿರುವ ಬೆನ್ನಲ್ಲೇ ಅಖಿಲೇಶ್ ಯಾದವ್ ಈ ರೀತಿ ವಿವಾದಿತ ನಿರ್ಣಯ ಕೈಗೊಂಡಿರುವುದು ಹಲವರ ಹುಬ್ಬೇರಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Even as protest rage across the country over the content in Aamir Khan-starrer pk, the Akhilesh government in Uttar Pradesh went ahead and granted tax exemption to the film.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more