ತಮಿಳುನಾಡಿನ ವಿದ್ಯಾರ್ಥಿ ಸಾಧನೆ ಮೆಚ್ಚಿದ ನಾಸಾ!
ಚೆನ್ನೈ, ಆ.4 : ನಾಸಾದ 'ಕ್ಯೂಬ್ಸ್ ಇನ್ ಸ್ಪೇಸ್' ಸ್ಪರ್ಧೆಗೆ ಸುಮಾರು 86 ಸಾವಿರ ಮಾದರಿಗಳು ಬಂದಿದ್ದವು. ಅವುಗಳ ಪೈಕಿ 64 ಗ್ರಾಂ ತೂಕದ ಉಪಗ್ರಹವನ್ನು ಆಯ್ಕೆ ಮಾಡಿ ಕಕ್ಷೆಗೆ ಹಾರಿಸಲಾಗಿದೆ. ಇದು ಭಾರತೀಯರಿಗೆ ಹೆಮ್ಮೆಯ ಕ್ಷಣ ಈ ಉಪಗ್ರಹ ತಯಾರು ಮಾಡಿದ್ದು ನಮ್ಮ ಭಾರತೀಯ ವಿದ್ಯಾರ್ಥಿ.
2017ರ ಜೂನ್ 22ರಂದು ಕಕ್ಷೆಗೆ ಹಾರಿಸಲಾದ ಜಗತ್ತಿನ ಅತಿ ಚಿಕ್ಕ ಉಪಗ್ರಹ ತಯಾರಿಸಿದ್ದು ಚೆನ್ನೈ ಮೂಲದ ಹದಿನೆಂಟು ವರ್ಷದ ಮೊಹಮದ್ ರಿತಾಫ್ ಶಾರೂಕ್. ರಿತಾಫ್ ತಮಿಳುನಾಡಿಮ ಪಲ್ಲಪತ್ತಿಯವರು, ಆರು ಜನರ ತಂಡದ ಜೊತೆ ಸೇರಿ ಕಾರ್ಬನ್ ಫೈಬರ್ ಪಾಲಿಮರ್ ಬಳಸಿ ಉಪಗ್ರಹ ತಯಾರಿಸಲಾಗಿದೆ.

ಐದನೇ ವಯಸ್ಸಿನಲ್ಲಿ ತಂದೆ ಮೊಹಮದ್ ಫಾರೂಕ್ ಕಳೆದುಕೊಂಡ ರಿತಾಫ್, ವಿಶ್ವದ ಅತ್ಯಂತ ಚಿಕ್ಕ ಉಪಗ್ರಹಕ್ಕೆ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ನೆನಪಿನಲ್ಲಿ ಇಟ್ಟ ಹೆಸರು 'ಕಲಾಂ ಸ್ಯಾಟ್'. ಸುಮಾರು ಎರಡು ವರ್ಷಗಳ ಪರಿಶ್ರಮದ ಬಳಿಕ ಇದನ್ನು ತಯಾರು ಮಾಡಲಾಯಿತು.
ಈ ಉಪಗ್ರಹ ತಯಾರಿಕೆಯ ಯೋಜನೆಯನ್ನು ಸ್ಪೇಸ್ ಕಿಡ್ಸ್ ಇಂಡಿಯಾದ ಸಿಇಓ ಡಾ.ಸ್ಮೃತಿ ಕೇಸನ್, 'ನಾಸಾದ ಸ್ಪರ್ಧೆಗೆ ಉಪಗ್ರಹ ಆಯ್ಕೆಯಾದ ಬಳಿಕ ಇದು ಬೇರೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ' ಎಂದು ಕೇಸನ್ ಹೇಳಿದರು.
ನಾಸಾದ ಸ್ಪರ್ಧೆಗೆ ಬಂದಿದ್ದ 86 ಸಾವಿರ ಮಾದರಿಗಳ ಪೈಕಿ ಎಂಬತ್ತು ಮಾದರಿಗಳನ್ನು ಆಯ್ಕೆ ಮಾಡಲಾಯಿತು. ಈ ಎಂಬತ್ತರಲ್ಲಿ ರಿತಾಫ್ ತಯಾರು ಮಾಡಿದ ಮಾದರಿ ಚಿಕ್ಕ ಉಪಗ್ರ ಎಂದು ಆಯ್ಕೆಯಾಯಿತು.












Click it and Unblock the Notifications