ಕಳ್ಳರ ಹಿಡಿದ ಮಿತ್ತಲ್ ಸಾಹಸದ ಬಗ್ಗೆ ತಿಳಿಯಲೇಬೇಕು

Posted By: Gururaj
Subscribe to Oneindia Kannada

ಅಹಮದಾಬಾದ್, ಆ.09 : ಮಿತ್ತಲ್ ಪಟಾಡಿಯಾ ಎಂಬ ಪ್ರಚಂಡ ಪುಟಾಣಿ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು. ಮನಗೆ ನುಗ್ಗಿದ ಕಳ್ಳರ ಜೊತೆ ಸೆಣಸಾಡಿ ಅವರನ್ನು ಪೊಲೀಸರಿಗೆ ಹಿಡಿದು ಕೊಟ್ಟ ಧೀರೆ ಈಕೆ.

ತಮಿಳುನಾಡಿನ ವಿದ್ಯಾರ್ಥಿ ಸಾಧನೆ ಮೆಚ್ಚಿದ ನಾಸಾ!

ಅಹಮದಾಬಾದ್ ನ ಸುಭಾಷ್ ಚೌಕದ ನಿವಾಸಿ ಮಿತ್ತಲ್ ಪಟಾಡಿಯಾ. ನವೆಂಬರ್ 3, 2010ರಂದು ಮಿತ್ತಲ್ ಶಾಲೆಯಿಂದ ಮನೆಗೆ ಆಗಮಿಸಿ ಕೆಲವು ಸಮಯ ಕಳೆದಿತ್ತು. ಅಡುಗೆ ಕೋಣೆಯಲ್ಲಿದ್ದ ಅವಳಿಗೆ ಮನೆಯ ಕಾಲಿಂಗ್ ಬಿಲ್ ಶಬ್ದ ಕೇಳಿಸಿತು. ಮಿತ್ತಲ್ ಸಾಕು ತಾಯಿ ಕವಿತಾ ಬಾಗಿಲು ತೆರೆದರು.

Unsung hero: Mittal Patadiya, courage personified

ಕೆಲವು ಕ್ಷಣಗಳಲ್ಲಿ ನೀರು ತರುವಂತೆ ತಾಯಿ ಮಿತ್ತಲ್ ಗೆ ಸೂಚಿಸಿದರು. ನೀರು ತೆಗೆದುಕೊಂಡು ಹೋದ ಮಿತ್ತಲ್ ಬಂದವರಲ್ಲಿ ಒಬ್ಬ ಆಟೋ ಡ್ರೈವರ್ ತನಗೆ ಪರಿಚಯದವನು ಎಂಬುದನ್ನು ಪತ್ತೆ ಮಾಡಿದಳು. ಕೆಲವೇ ಕ್ಷಣಗಳಲ್ಲಿ ಮಿತ್ತಲ್ ತಾಯಿಯ ಮೇಲೆ ಹಲ್ಲೆ ನಡೆಸಿದ ಮೂವರು, ಆಕೆಯ ಕುತ್ತಿಗೆಗೆ ಚಾಕು ಹಿಡಿದು ಹಣ, ಆಭರಣ ನೀಡುವಂತೆ ಬೆದರಿಸಿದರು.

ಕಳ್ಳರಿಂದ ತಾಯಿಯನ್ನು ಬಿಡಿಸಲು ಮಿತ್ತಲ್ ಹೋರಾಟ ಆರಂಭಿಸಿದಳು. ಆ ಸಮಯದಲ್ಲಿ ಆಕೆಗೆ ಚಾಕುವಿನಿಂದ ಇರಿದ ಗಾಯಗಳಾದವು. ಆದರೂ ಕಳ್ಳನ ಕೂದಲನ್ನು ಹಿಡಿದೆಳೆದ ಮಿತ್ತಲ್ ಬಾಗಿಲು ತೆರೆಯಲು ಪ್ರಯತ್ನಿಸಿದಳು. ಕೆಲವು ನಿಮಿಷಗಳ ಸೆಣಸಾಟದ ಬಳಿಕ ಅದರಲ್ಲಿ ಯಶಸ್ವಿಯೂ ಆದಳು.

ಹಳ್ಳಿಯ ಮಹಿಳೆಯರ ಸಂಕಷ್ಟ ದೂರ ಮಾಡಿದ ನಿಜವಾದ ಹೀರೋ

ಮನೆಯ ಬಾಗಿಲು ತೆರೆಯುತ್ತಿದ್ದಂತೆ ಅಮ್ಮ, ಮಗಳ ಚೀರಾಟ ಕೇಳಿ ಸ್ಥಲೀಯರು ಓಡಿ ಬಂದರು. ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ ಮೂವರನ್ನು ಹಿಡಿದು, ಬಡಿದು ಪೊಲೀಸರಿಗೆ ಒಪ್ಪಿಸಿದಳು. ಮಿತ್ತಲ್ ಧೈರ್ಯ, ಶೌರ್ಯವನ್ನು ಶ್ಲಾಘಿಸಿದರು.

Ahmed Patel retained his Rajya Sabha seat from Gujarat in election A secret behind his victory

ಕಳ್ಳರ ಜೊತೆ ಹೋರಾಡುವಾಗ ಮಿತ್ತಲ್ ಗೆ ಭಾರೀ ಗಾಯಗಳಾಗಿದ್ದವು. ಅವಳನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅವಳ ದೇಹಕ್ಕೆ ಸುಮಾರು ಮುನ್ನೂರು ಹೊಲಿಗೆ ಹಾಕಲಾಯಿತು. ಮಿತ್ತಲ್ ಸಾಹಸಕ್ಕೆ ಕೇಂದ್ರ ಸರ್ಕಾರ 2012ನೇ ಸಾಲಿನ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mittal Patadiya was injured when thieves stabbed her. Despite bleeding profusely, she displayed an exemplary act of valour and foiled their attempt to rob her family in Gujarat. This effort from Mittal fetched her the prestigious national bravery award in 2012.
Please Wait while comments are loading...