ದೇವೇಂದ್ರ ಝಝಾರಿಯ ಜೀವನ ಸ್ಫೂರ್ತಿ ತುಂಬುತ್ತದೆ

By: ದೀಪಿಕಾ
Subscribe to Oneindia Kannada

ಬೆಂಗಳೂರು, ಆ.08 : ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ದೇವೇಂದ್ರ ಝಝಾರಿಯ ಹೆಸರು ಶಿಫಾರಸು ಮಾಡಲಾಗಿದೆ. ದೇವೇಂದ್ರ ಅವರ ಜೀವನ ಹೂವಿನ ಹಾದಿಯಾಗಿರಲಿಲ್ಲ. ಇವರ ಜೀವನ ಹಲವರಿಗೆ ಸ್ಫೂರ್ತಿ ತುಂಬುತ್ತದೆ.

ಯುವ ಜನತೆಗೆ ಸ್ಫೂರ್ತಿ ಮರಿಯಪ್ಪನ್ ತಂಗವೇಲು

ದೇವೇಂದ್ರ ಅವರು ರಾಜಸ್ಥಾನದ ಚುರು ಜಿಲ್ಲೆಯವರು. ಒಂಭತ್ತನೇ ವಯಸ್ಸಿನಲ್ಲಿ ದೇವೇಂದ್ರ ಅವರು ಮರ ಕಡಿಯುವಾಗ ಹನ್ನೊಂದು ವೋಲ್ಟ್ ವಿದ್ಯುತ್ ತಂತಿ ಅವರ ಕೈಗೆ ತಗುಲಿತು. ಅವರ ಎಡಗೈ ತಂತಿಯ ದೇಹದಿಂದ ಬೇರೆಯಾಯಿತು.

Unsung hero : Devendra Jhajharia, first paralympian to get Khel Ratna

ದೇವೇಂದ್ರ ಅವರ ಸ್ಥಿತಿ ನೋಡಿದ್ದ ಸ್ಥಳೀಯರು ಅವರು ವಿಶ್ವ ಮೆಚ್ಚುವ ಆಟಗಾರನಾಗುತ್ತಾನೆ ಎಂಬುದನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಈ ಅಘಾತದಿಂದ ಅವರು ಚೇತರಿಸಿಕೊಳ್ಳುವುದು ಕಷ್ಟ ಎಂದೇ ಜನರು ಭಾವಿಸಿದ್ದರು.

ತಮಿಳುನಾಡಿನ ವಿದ್ಯಾರ್ಥಿ ಸಾಧನೆ ಮೆಚ್ಚಿದ ನಾಸಾ!

ತಾನು ಅಥ್ಲೆಟ್ ಆಗಬೇಕು ಎಂಬುದು ದೇವೇಂದ್ರ ಅವರ ಕನಸಾಗಿತ್ತು. ಈ ಅಪಘಾತದ ನಂತರವೂ ಅವರು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಮುಂದಾದರು. ಅದನ್ನು ಸಾಧಿಸಿಯೂ ಬಿಟ್ಟರು. 2016ರ ರಿಯೋ ಒಲಂಪಿಕ್ಸ್ ನಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟರು.

ಪೋಷಕರ ಆರೈಕೆ, ಧೃಡ ನಿರ್ಧಾರದಿಂದಾಗಿ ದೇವೇಂದ್ರ ಅಂದುಕೊಂಡಿದ್ದನ್ನು ಸಾಧಿಸಿದರು. ಶಾಲೆಯಲ್ಲಿ ಮಕ್ಕಳು ಜಾವೆಲಿನ್ ಎಸೆಯುವಾಗ ದೇವೇಂದ್ರ ಅವರಿಗೆ ನಾನು ಇದನ್ನು ಮಾಡಬಲ್ಲೆನೇ? ಎಂಬ ಅನುಮಾನವಿತ್ತು. ಸ್ನೇಹಿತನ ಬಳಿ ಕೇಳಿ ಜಾವೆಲಿನ್ ಪಡೆದು ಎಸೆದಾಗ ಅವನಿಗಿಂತ ದೂರಕ್ಕೆ ಎಸೆದಿದ್ದರು.

ಹಳ್ಳಿಯ ಮಹಿಳೆಯರ ಸಂಕಷ್ಟ ದೂರ ಮಾಡಿದ ನಿಜವಾದ ಹೀರೋ

ತಮ್ಮ ಆತ್ಮವಿಶ್ವಾಸ ಮತ್ತು ಶಕ್ತಿಯ ಬಗ್ಗೆ ತಿಳಿದ ದೇವೇಂದ್ರ ಜಾವೆಲಿನ್ ಥ್ರೋ ಅಭ್ಯಾಸ ಮಾಡಲು ಆರಂಭಿಸಿದರು. ಯಾರಿಗೂ ಹೇಳದೆ ಅಭ್ಯಾಸ ಆರಂಭಿಸಿದ ಅವರು ಸಮರ್ಥ ಎಂದು ಅನ್ನಿಸಿದ ಮೇಲೆ ಶಾಲಾ ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡರು.

1997ರಲ್ಲಿ ದೇವೇಂದ್ರ ಝಝಾರಿಯ ಅವರ ಪ್ರತಿಭೆಯನ್ನು ಕೋಚ್ ರಿಪುದ್ದಾಮನ್ ಸಿಂಗ್ ಗುರುತಿಸಿದರು. ಶಾಲಾ ಕ್ರೀಡಾಕೂಟದಲ್ಲಿ ದೇವೇಂದ್ರ ಅವರ ಕೌಶಲ್ಯವನ್ನು ಕೋಚ್ ನೋಡಿದ್ದರು. ಇಪ್ಪತ್ತೊಂದು ವರ್ಷದಲ್ಲಿ ದೇವೇಂದ್ರ ಮೊದಲ ಅಂತರಾಷ್ಟ್ರೀಯ ಪದಕ ಪಡೆದರು.

2004ರಲ್ಲಿ ನಡೆದ ಅಥೆನ್ಸ್ ಪ್ಯಾರಾ ಒಲಂಪಿಕ್ ನಲ್ಲಿ ಮೊದಲ ಬಾರಿಗೆ ಚಿನ್ನದ ಪದಕಗಳಿಸಿದರು. 2016ರಲ್ಲಿ ನಡೆದ ರಿಯೋ ಓಲಂಪಿಕ್ಸ್ ನಲ್ಲಿಯೂ ಚಿನ್ನದ ಪದಕ ಪಡೆದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The life of a professional athlete is not always easy. Most will have to battle through the ups and downs that can come with gruelling season, including injuries. Devendra Jhajharia, first paralympian to get India's highest sporting honours- the Rajiv Gandhi Khel Ratna is one such inspiration.
Please Wait while comments are loading...