ಲಕ್ನೋ, ಏಪ್ರಿಲ್ 12: "ಮಾನನೀಯ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆನ್ಗಾರ್..." ಎಂದು ಅತ್ಯಾಚಾರ ಆರೋಪಿಯನ್ನು 'ಮಾನನೀಯ' ಎಂದು ಕರೆದ ಉತ್ತರ ಪ್ರದೇಶ ಡಿಜಿಪಿ ಒಪಿ ಸಿಂಗ್ ಅವರ ಕುರಿತು ಆಕ್ರೋಶ ವ್ಯಕ್ತವಾಗಿದೆ.
ಉನ್ನಾವೋ ಅತ್ಯಾಚಾರ ಸಂತ್ರಸ್ಥೆ ಬಿಚ್ಚಿಟ್ಟ ಆ ಕರಾಳ ದಿನದ ನೆನಪು...
ದೇಶದಾದ್ಯಂತ ಸದ್ದು ಮಾಡಿರುವ ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಒಪಿ ಸಿಂಗ್ ಮತ್ತು ಗೃಹಸಚಿವಾಲಯದ ಮುಖ್ಯ ಕಾರ್ಯದರ್ಶಿ ಅರವಿಂದ್ ಕುಮಾರ್ ಪ್ರಕರಣದ ಬೆಳವಣಿಗೆಯ ಕುರಿತು ಮಾತನಾಡುತ್ತಿದ್ದರು.
ಬಿಜೆಪಿ ಶಾಸಕನ ವಿರುದ್ಧ ಕೇಳಿಬಂದ ಉನ್ನಾವೋ ಅತ್ಯಾಚಾರ ಪ್ರಕರಣ ಸಿಬಿಐಗೆ
ಈ ಸಂದರ್ಭದಲ್ಲಿ ಒಪಿ ಸಿಂಗ್, 'ಮಾನನೀಯ ಕುಲ್ದೀಪ್ ಸಿಂಗ್' ಎಂದು ಸಂಬೋಧಿಸಿದ್ದರು. ಅತ್ಯಾಚಾರ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು 'ಮಾನನೀಯ' ಎಂದು ಕರೆಯುವುದು ಸರಿಯೇ ಎಂದು ಪತ್ರಕರ್ತರು ಕೇಳಿದ್ದಕ್ಕೆ, 'ಅವರೊಬ್ಬ ಶಾಸಕ. ಅವರ ಮೇಲೆ ಆರೋಪ ಹೊರಿಸಲಾಗಿದೆ, ಅದಿನ್ನೂ ಸಾಬೀತಾಗಿಲ್ಲ. ಹೀಗಿರುವಾಗ ಅವರನ್ನು ಮಾನನೀಯ ಎಂದು ಕರೆದರೆ ತಪ್ಪೇನು ಎಂದು ಅವರು ಪ್ರಶ್ನಿಸಿದ್ದಾರೆ.
ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು. ಶಾಸಕರೇ ಆಗಿದ್ದರೂ ಅವರೊಬ್ಬ ಆರೋಪಿ. ಆರೋಪಿ ಸ್ಥಾನದಲ್ಲಿರುವವರನ್ನು 'ಗೌರವಾನ್ವಿತರು' ಎಂದು ಕರೆಯುವುದು ಸರಿಯೇ ಎಂಬುದು ಪತ್ರಕರ್ತರ ಪ್ರಶ್ನೆ.
ಕಳೆದ ವರ್ಷ ಜೂನ್ ನಲ್ಲಿ ಉನ್ನಾವೋದ ಅಪ್ರಾಪ್ತೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಕುಲ್ದೀಪ್ ವಿರುದ್ಧ ಈಗಾಗಲೇ ಎಫ್ ಐಆರ್ ದಾಖಲಿಸಲಾಗಿದೆ. ಈ ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐ ಗೆ ವಹಿಸಿದೆ.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!