ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸಂಸ್ಥೆ ಕಸದ ಬುಟ್ಟಿ ಸೇರಿದ ಪಾಕಿಸ್ತಾನದ ಮನವಿ

|
Google Oneindia Kannada News

ನವದೆಹಲಿ, ಅ.14: ಕಾಶ್ಮೀರ ಸಮಸ್ಯೆ ಬಗೆಹರಿಸಲು ವಿಶ್ವಸಂಸ್ಥೆ ಮಧ್ಯ ಪ್ರವೇಶ ಮಾಡಬೇಕೆಂದು ಪಾಕಿಸ್ತಾನ ಮಾಡಿದ್ದ ಮನವಿ ಕಸದ ಬುಟ್ಟಿ ಸೇರಿದೆ. ಮತ್ತೊಮ್ಮೆ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗವಾಗಿದೆ. ಭಾರತದ ಮೇಲೆ ಕಾಲು ಕೆರೆದು ಜಗಳ ಕಾಯುತ್ತಿದ್ದ ಪಾಕಿಸ್ತಾನಕ್ಕೆ ಇದು ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಿಸಲಾಗಿದೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರಿಗೆ ಪಾಕಿಸ್ತಾನದಿಂದ ಇತ್ತೀಚೆಗೆ ಪತ್ರವೊಂದು ರವಾನೆಯಾಗಿತ್ತು. ಕಾಶ್ಮೀರ ಸಮಸ್ಯೆ ಪರಿಹರಿಸಲು ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಬೇಕು ಎಂದು ಪಾಕಿಸ್ತಾನ ಮನವಿ ಮಾಡಿತ್ತು. ಆದರೆ ಈ ಸಮಸ್ಯೆಯನ್ನು ನೀವೇ ಕುಳಿತು ಬಗೆಹರಿಸಿಕೊಳ್ಳಿ ಎನ್ನುವ ಮೂಲಕ ಪಾಕಿಸ್ತಾನಕ್ಕೆ ತಕ್ಕುದಾದ ಉತ್ತರವೇ ಸಿಕ್ಕಿದೆ.[ಗಡಿಯಲ್ಲಿ ಪಾಕ್ ತಂಟೆ, ಪ್ರಧಾನಿ ಮೋದಿ ಹೇಳಿದ್ದೇನು?]

jammu

ಭಾರತ ಮತ್ತು ಪಾಕಿಸ್ತಾನದ ಗಡಿಯನ್ನು ನಿರಂತರವಾಗಿ ಗಮನಿಸುತ್ತಿರುವ ವಿಶ್ವಸಂಸ್ಥೆ ಈ ಸಮಸ್ಯೆ ನಿಮ್ಮಿಬ್ಬರಿಗೆ ಸಂಬಂಧಿಸಿತ್ತು. ಮಾತುಕತೆ ಮೂಲಕ ಬಗೆಹರಿಸಿಕೊಳ್ಳು. ಇಂಥ ವಿವಾದಗಳನ್ನು ನಮ್ಮ ಬಳಿ ತರಬೇಡಿ. ಹೀಗೆ ಮಾಡಿದರೆ ಮತ್ತಷ್ಟು ರಾಷ್ಟ್ರಗಳು ಗಡಿ ವಿವಾದ ಹೊತ್ತು ತರುತ್ತವೆ, ಇದಕ್ಕೆಲ್ಲ ಅವಕಾಶವಿಲ್ಲ ಎಂದು ಪಾಕಿಸ್ತಾನಕ್ಕೆ ಖಡಕ್‌ ಸೂಚನೆ ನೀಡಿದೆ.[ಇರಾಕ್‌ ಮಹಿಳೆಯರ ಯೋನಿ ಛೇದನಕ್ಕೆ ಉಗ್ರರ ಫತ್ವಾ]

ಗಡಿ ರೇಖೆಯಲ್ಲಿ ಪದೇ ಪದೇ ಗುಂಡಿನ ಸದ್ದು ಕೇಳಿಬರುತ್ತಿದ್ದು ಎರಡೂ ದೇಶಗಳು ಆರೋಪದಲ್ಲಿ ತೊಡಗಿವೆ. ಯುದ್ಧ ವಿರಾಮ ಉಲ್ಲಂಘನೆಯಾಗುತ್ತಿದೆ ಎಂದು ಪರಸ್ಪರ ಆರೋಪಿಸಿಕೊಳ್ಳುತ್ತಿವೆ. ಜಮ್ಮು ಮತ್ತು ಕಾಶ್ಮೀರ ಸಮಸ್ಯೆಯನ್ನು ಅಂತಾರಾಷ್ಟ್ರೀಯ ಸಮಸ್ಯೆ ಎಂದು ಬಿಂಬಿಸಲು ಹೊರಟಿದ್ದ ಪಾಕಿಸ್ತಾನಕ್ಕೆ ಇದರಿಂದ ಮುಖಭಂಗವಾಗಿದೆ ಎಂದೇ ಹೇಳಬಹುದು.

English summary
The United Nations has once again ignored Pakistan's renewed efforts to internationalise the Kashmir issue. In a clear snub to Pakistan, the United Nations refused to intervene and reiterated that India andPakistan need to resolve all differences through dialogue to find a long-term solution to the dispute
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X