ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎಸ್‌ಸಿ ತೆರೆದ ಅಪ್ಲಿಕೇಶನ್ ಮೂಲಕ ಉದ್ಯೋಗ ಆಕಾಂಕ್ಷಿಗಳಿಗೆ ಏನೆಲ್ಲಾ ಲಾಭ?

|
Google Oneindia Kannada News

ನವದೆಹಲಿ, ಅಕ್ಟೋಬರ್ 07: ಭಾರತದಲ್ಲಿ ನೇಮಕಾತಿ ಸಂಬಂಧಿತ ಮಾಹಿತಿಯನ್ನು ತಿಳಿಸಿ ಕೊಡುವ ನಿಟ್ಟಿನಲ್ಲಿ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಅಕ್ಟೋಬರ್ 7ರಂದು ಈ ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿರುವ ಬಗ್ಗೆ ಘೋಷಿಸಿದೆ.

ಕಳೆದ ಸೆಪ್ಟೆಂಬರ್ 29 ರಂದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದ್ದು, ಇತ್ತೀಚಿಗೆ ಮೊಬೈಲ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುತ್ತದೆ.

ಯುಪಿಎಸ್‌ಸಿ ಐಎಫ್ಎಸ್ ಫಲಿತಾಂಶ ಪ್ರಕಟ: ರಾಜ್ಯದ 10 ಅಭ್ಯರ್ಥಿಗಳು ಆಯ್ಕೆಯುಪಿಎಸ್‌ಸಿ ಐಎಫ್ಎಸ್ ಫಲಿತಾಂಶ ಪ್ರಕಟ: ರಾಜ್ಯದ 10 ಅಭ್ಯರ್ಥಿಗಳು ಆಯ್ಕೆ

"ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಮೊಬೈಲ್ ಮೂಲಕ ಪರೀಕ್ಷೆ ಮತ್ತು ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಯುಪಿಎಸ್‌ಸಿ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಆದರೆ ಈ ಅಪ್ಲಿಕೇಶನ್ ಮೊಬೈಲ್ ಬಳಸಿ ಅರ್ಜಿ ನಮೂನೆಗಳನ್ನು ಭರ್ತಿ ಮಾಡಲು ಅನುಮತಿಸುವುದಿಲ್ಲ," ಎಂದು ಅದರ ಹೇಳಿಕೆಯಲ್ಲಿ ತಿಳಿಸಲಾಗಿದೆ.

 ಯುಪಿಎಸ್‌ಸಿ ಅಪ್ಲಿಕೇಶನ್ ಏಕೆ ಬೇಕಾಗುತ್ತೆ?

ಯುಪಿಎಸ್‌ಸಿ ಅಪ್ಲಿಕೇಶನ್ ಏಕೆ ಬೇಕಾಗುತ್ತೆ?

ಭಾರತವು ಹೆಚ್ಚು ಸ್ಮಾರ್ಟ್‌ಫೋನ್ ಸ್ನೇಹಿ ಪೀಳಿಗೆಯಾಗಿ ಪರಿವರ್ತನೆ ಆಗುತ್ತಿದೆ. ಈ ಹಿನ್ನೆಲೆ ಅಪ್ಲಿಕೇಶನ್ ಮೂಲಕ ನಾಗರಿಕ ಸೇವೆಗಳ ಆಕಾಂಕ್ಷಿಗಳಿಗೆ ಪರೀಕ್ಷೆಯ ದಿನಾಂಕಗಳು, ಅಪ್ಲಿಕೇಶನ್ ವಿಧಾನ, ಅಧಿಸೂಚನೆಗಳು ಮತ್ತು ಇತರ ಫಲಿತಾಂಶಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಹೇಳಿದರು.

 ಅಪ್ಲಿಕೇಶನ್ ಕುರಿತು ಯುಪಿಎಸ್‌ಸಿ ಹೇಳುವುದೇನು?

ಅಪ್ಲಿಕೇಶನ್ ಕುರಿತು ಯುಪಿಎಸ್‌ಸಿ ಹೇಳುವುದೇನು?

ಇದರ ಮಧ್ಯೆ ಯುಪಿಎಸ್‌ಸಿ ವೆಬ್‌ಸೈಟ್‌ಗೆ ಸಂಬಂಧಿಸಿದ ವಿವಿಧ ಮಾಹಿತಿಯನ್ನು ವೀಕ್ಷಿಸಲು ಅಪ್ಲಿಕೇಶನ್ ಅನ್ನು ಬಳಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಮೂಲಕ ನೇಮಕಾತಿ ಮಾಡುವ ಜವಾಬ್ದಾರಿಗಳನ್ನು ಮತ್ತು ಸಂದರ್ಶನಗಳ ಮೂಲಕ ಆಯ್ಕೆ ಮಾಡುವ ಮೂಲಕ ನೇಮಕಾತಿಗಾಗಿ ಅಧಿಕಾರಿಗಳ ಸೂಕ್ತತೆಯ ಬಗ್ಗೆ ಸಲಹೆ ನೀಡುತ್ತದೆ. ಇದರ ಜೊತೆಗೆ ಬಡ್ತಿ ಮತ್ತು ವರ್ಗಾವಣೆ-ಆನ್-ಡೆಪ್ಯುಟೇಶನ್, ಇತ್ಯಾದಿ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ ಎಂದು ಯುಪಿಎಸ್‌ಸಿ ಹೇಳಿಕೊಂಡಿದೆ.

 ಬಳಕೆದಾರರು ಯುಪಿಎಸ್‌ಸಿ ಅಪ್ಲಿಕೇಶನ್ ಬಗ್ಗೆ ಏನು ಹೇಳುತ್ತಾರೆ?

ಬಳಕೆದಾರರು ಯುಪಿಎಸ್‌ಸಿ ಅಪ್ಲಿಕೇಶನ್ ಬಗ್ಗೆ ಏನು ಹೇಳುತ್ತಾರೆ?

ಸ್ಮಾರ್ಟ್‌ಫೋನ್‌ಗಳಲ್ಲಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ ಬಳಕೆದಾರರು ಈ ಅಪ್ಲಿಕೇಶನ್ ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಮಿನಿ ಆವೃತ್ತಿಯಾಗಿದೆ ಎಂದು ಹೇಳುತ್ತಿದ್ದಾರೆ. "ಈಗಷ್ಟೇ ವೆಬ್‌ಸೈಟ್ ಅನ್ನು ಅಪ್ಲಿಕೇಷನ್‌ ಆಗಿ ಮಾಡಿದ್ದೇವೆ. ಡಿಜಿಟಲ್ ಆಡಳಿತದತ್ತ ಪ್ರಗತಿಪರ ಹೆಜ್ಜೆಯಾಗಿದ್ದು, ಇನ್ನಷ್ಟು ಮುಂದೆ ಸಾಗಬೇಕಾಗಿದೆ. ಇಷ್ಟು ವರ್ಷಗಳ ಕಾಲ ಉಪಯುಕ್ತವಾಗದ IOB ಆನ್‌ಲೈನ್ ಬ್ಯಾಂಕಿಂಗ್ ಅಪ್ಲಿಕೇಶನ್‌ನಂತೆ ಇದು ಸಮಯಕ್ಕೆ ಅಪ್‌ಗ್ರೇಡ್ ಆಗಲಿದೆ ಎಂದು ಭಾವಿಸುತ್ತೇವೆ," ಎಂದು ಗೂಗಲ್ ಪ್ಲೇ ಸ್ಟೋರ್ ಕಾಮೆಂಟ್ ವಿಭಾಗದಲ್ಲಿ ಬಳಕೆದಾರರೊಬ್ಬರು ಬರೆದಿದ್ದಾರೆ.

ಯುಪಿಎಸ್‌ಸಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ?

ಯುಪಿಎಸ್‌ಸಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ?

1) ಗೂಗಲ್ ಪ್ಲೇ ಸ್ಟೋರ್ ಲಾಗಿನ್ ಆಗಿರಿ

2) UPSC-ಅಧಿಕೃತ ಅಪ್ಲಿಕೇಶನ್ ಅನ್ನು ಹುಡುಕಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ

3) ಇನ್ ಸ್ಟಾಲ್(Install) ಮೇಲೆ ಕ್ಲಿಕ್ ಮಾಡಿರಿ.

4) ಇನ್ ಸ್ಟಾಲ್ ಆದ ನಂತರ ಅಪ್ಲಿಕೇಶನ್ ಅನ್ನು ತೆರೆಯಿರಿ.

5) ಈಗ ಅಪ್ಲಿಕೇಶನ್ ಬಳಕೆಗೆ ಸಿದ್ಧವಾಗಿರುತ್ತದೆ.

English summary
Union Public Service Commission launches its own android app, here's how to download and know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X