ರಸ್ತೆ ನಿಯಮ ಉಲ್ಲಂಘನೆಯಾದ 15 ದಿನಗಳೊಳಗೆ ನೋಟಿಸ್
ನವದೆಹಲಿ, ಆಗಸ್ಟ್ 20: ಕೇಂದ್ರ ಸಾರಿಗೆ ಸಚಿವಾಲಯ ಕೇಂದ್ರ ಮೋಟಾರು ವಾಹನ ನಿಯಮ 1989ರ ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಿದೆ. ವಿದ್ಯುನ್ಮಾನ ನಿರ್ವಹಣೆ ಹಾಗೂ ರಸ್ತೆ ಸುರಕ್ಷತಾ ಜಾರಿ ಸಂಬಂಧ ಈ ಅಧಿಸೂಚನೆ ಹೊರಡಿಸಿದ್ದು, ಚಲನ್ ನೀಡುವ ಸಂಬಂಧ ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ಹೊಸ ನಿಯಮದ ಪ್ರಕಾರ, ಟ್ರಾಫಿಕ್ ಉಲ್ಲಂಘನೆ ಮಾಡಿದ ಹದಿನೈದು ದಿನಗಳ ಒಳಗೆ ಉಲ್ಲಂಘನೆ ಮಾಡಿದವರಿಗೆ ಚಲನ್ ಕಳುಹಿಸಬೇಕು. ಚಲನ್ ನೀಡುವವರೆಗೆ ಎಲೆಕ್ಟ್ರಾನಿಕ್ ರೂಪದಲ್ಲಿ ದಾಖಲೆಯನ್ನು ಸಂಗ್ರಹಿಸಿರಬೇಕು ಎಂದು ಸೂಚಿಸಿದೆ.
'ರಸ್ತೆ ಸುರಕ್ಷತಾ ನಿಯಮ ಉಲ್ಲಂಘನೆಯಾದ ಹದಿನೈದು ದಿನಗಳ ಒಳಗೆ ನೋಟಿಸ್ ಕಳುಹಿಸಬೇಕು. ಹಾಗೆಯೇ ಚಲನ್ ತಲುಪಿಸುವವರೆಗೆ ಎಲೆಕ್ಟ್ರಾನಿಕ್ ಮಾನಿಟರಿಂಗ್ ಮೂಲಕ ಪಡೆದ ದಾಖಲೆಗಳನ್ನು ಸಂಗ್ರಹಿಸಬೇಕು' ಎಂದು ಸಚಿವಾಲಯ ಟ್ವೀಟ್ ಮಾಡಿದೆ.

ಈ ಹೊಸ ನಿಯಮ, ಎಲೆಕ್ಟ್ರಾನಿಕ್ ಮಾನಿಟರಿಂಗ್ ಸಾಧನಗಳ (ಸ್ಪೀಡ್ ಕ್ಯಾಮೆರಾ, ಟೆಲಿವಿಷನ್ ಕ್ಯಾಮೆರಾ, ಸ್ಪೀಡ್‌ಗನ್, ಧರಿಸುವಂಥ ಕ್ಯಾಮೆರಾ, ಡ್ಯಾಶ್‌ಬೋರ್ಡ್ ಕ್ಯಾಮೆರಾ, ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ (ANPR), ತೂಕದ ಯಂತ್ರಗಳ (WIM) ವಿವರವಾದ ನಿಬಂಧನೆಗಳನ್ನು ಸೂಚಿಸಿವೆ..
ಇದರಂತೆ, ಹಿಂದಿನಂತೆ ಪೊಲೀಸರು ಕೇವಲ ಫೋಟೊ ತೆಗೆಯುವ ಮೂಲಕ ನೋಟಿಸ್ ಕಳುಹಿಸಲು ಸಾಧ್ಯವಾಗುವುದಿಲ್ಲ. ನೋಟಿಸ್ ಕಳುಹಿಸಬೇಕಾದರೆ ಪೊಲೀಸರಲ್ಲಿ ಎಲೆಕ್ಟ್ರಾನಿಕ್ ದಾಖಲೆಗಳು, ಅಂದರೆ Electronic records ಇರಬೇಕಾಗುತ್ತದೆ.

ಅಂಥ ಸಾಧನಗಳನ್ನು ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿ ಮತ್ತು ನಿರ್ಣಾಯಕ ಜಂಕ್ಷನ್‌ಗಳಲ್ಲಿ, ಕನಿಷ್ಠ ಒಂದು ಮಿಲಿಯನ್ ಜನಸಂಖ್ಯೆ ಹೊಂದಿರುವ ಪ್ರಮುಖ ನಗರಗಳಲ್ಲಿ, ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ 132 ನಗರಗಳನ್ನು ಒಳಗೊಂಡಂತೆ ರಾಜ್ಯ ಸರ್ಕಾರಗಳು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದೆ. ರಾಷ್ಟ್ರೀಯ ಹೆದ್ದಾರಿಗಳು ಹಾಗೂ ರಾಜ್ಯ ಹೆದ್ದಾರಿಗಳು ಹೆಚ್ಚಿನ ಅಪಾಯದ ಹಾಗೂ ಅಧಿಕ ಸಾಂದ್ರತೆಯ ಕಾರಿಡಾರ್‌ಗಳಲ್ಲಿ ಮತ್ತು ಪ್ರಮುಖ ನಗರಗಳಲ್ಲಿ ಎಲೆಕ್ಟ್ರಾನಿಕ್ ಜಾರಿ ಸಾಧನವನ್ನು ಇರಿಸಬೇಕು. ಯಾವುದೇ ಅಡಚಣೆ ಅಥವಾ ಟ್ರಾಫಿಕ್ ಹರಿವಿನಲ್ಲಿ ಅಡಚಣೆ ಉಂಟುಮಾಡಬಾರದು ಎಂದು ತಿಳಿಸಿದೆ.
ಹೊಸ ಅಧಿಸೂಚನೆ ನಿಯಮಗಳ ಪ್ರಕಾರ, ನಿಗದಿತ ವೇಗದ ಮಿತಿಯೊಳಗೆ ವಾಹನ ಚಲಾಯಿಸದಿರುವ, ಅನಧಿಕೃತ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಲು, ಪಾರ್ಕಿಂಗ್ ಮಾಡಲು, ಚಾಲಕರು ಮತ್ತು ಪಿಲಿಯನ್ ಸವಾರರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಮತ್ತು ರಕ್ಷಣಾತ್ಮಕ ಶಿರಸ್ತ್ರಾಣ ಅಥವಾ ಹೆಲ್ಮೆಟ್ ಧರಿಸದಿರಲು ಚಲನ್ ನೀಡಬಹುದು.












Click it and Unblock the Notifications