ರಾಜಕೀಯ ನಿವೃತ್ತಿಯ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದಿಷ್ಟು
ನವದೆಹಲಿ, ಮಾರ್ಚ್ 31: ಕೇಂದ್ರದ ಹೆದ್ದಾರಿ ಸಚಿವ, ಹಿರಿಯ ಬಿಜೆಪಿ ನಾಯಕರಾಗಿರುವ ನಿತಿನ್ ಗಡ್ಕರಿ ಅವರು ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಅವರು ಸ್ಪಷ್ಟನೆ ನೀಡಿದ್ದಾರೆ.
ಹಿರಿಯ ರಾಜಕಾರಣಿ ನಿತಿನ್ ಗಡ್ಕರಿ ಅವರು ರಾಜಕೀಯ ನಿವೃತ್ತಿಯಾಗುತ್ತಾರೆ ಎಂಬ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಾಜಕೀಯದಿಂದ ನಿವೃತ್ತಿ ಹೊಂದುವ ಹೇಳಿಕೆಯನ್ನು ಗುರುವಾರ ತಳ್ಳಿಹಾಕಿದ್ದು ತಾವು ಸಕ್ರಿಯ ರಾಜಕೀಯದಲ್ಲೇ ಉಳಿಯುತ್ತೇನೆ ಎಂದು ತಿಳಿಸದ್ದಾರೆ.

ಮಹಾರಾಷ್ಟ್ರದ ರತ್ನಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯದಿಂದ ನಿವೃತ್ತಿಯಾಗುವ ಉದ್ದೇಶ ನನಗಿಲ್ಲ. ಮಾಧ್ಯಮಗಳು ಈ ವಿಷಯದ ಬಗ್ಗೆ ವರದಿ ಮಾಡುವಲ್ಲಿ ಜವಾಬ್ದಾರಿಯುತ ಪತ್ರಿಕೋದ್ಯಮವನ್ನು ಎತ್ತಿಹಿಡಿಯಬೇಕು ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಗುರುವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮುಂಬೈ-ಗೋವಾ ಹೆದ್ದಾರಿ ನಿರ್ಮಾಣ ಕಾಮಗಾರಿಯ ವೈಮಾನಿಕ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಕೈಗಾರಿಕಾ ಸಚಿವ ಉದಯ್ ಸಾಮಂತ್ ಕೂಡ ಉಪಸ್ಥಿತರಿದ್ದರು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 66 ರ ಬಹು ನಿರೀಕ್ಷಿತ ಕಾಮಗಾರಿಯನ್ನು ಡಿಸೆಂಬರ್ 2023 ರೊಳಗೆ ಪೂರ್ಣಗೊಳಿಸಲಾಗುವುದು ಮತ್ತು ಜನವರಿ 2024 ರಲ್ಲಿ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಕೇಂದ್ರ ಸಚಿವ ಗಡ್ಕರಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಮುಂಬೈ- ಗೋವಾ ಹೆದ್ದಾರಿಯನ್ನು 10 ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಈ ಪೈಕಿ ಸಿಂಧುದುರ್ಗ ಜಿಲ್ಲೆಯಲ್ಲಿ ಎರಡು ಪ್ಯಾಕೇಜ್‌ಗಳು (ಪಿ-9, ಪಿ-10) ಬಹುತೇಕ ಶೇ 99ರಷ್ಟು ಪೂರ್ಣಗೊಂಡಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ರತ್ನಗಿರಿ ಜಿಲ್ಲೆಯಲ್ಲಿ ಒಟ್ಟು ಐದು ಪ್ಯಾಕೇಜ್‌ಗಳಿದ್ದು, ಈ ಎರಡು ಪ್ಯಾಕೇಜ್‌ಗಳ (ಪಿ-4, ಪಿ-8) ಕ್ರಮವಾಗಿ ಶೇ.92 ಮತ್ತು ಶೇ.98 ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಉಳಿದ ಕಾಮಗಾರಿ ಪ್ರಗತಿಯಲ್ಲಿದೆ. ಎರಡು ಪ್ಯಾಕೇಜ್‌ಗಳ (ಪಿ-6, ಪಿ-7) ವಿಳಂಬವಾದ ಕಾಮಗಾರಿಗಳನ್ನು ಹೊಸ ಗುತ್ತಿಗೆದಾರರನ್ನು ನೇಮಿಸಿ ಪುನರಾರಂಭಿಸಲಾಗಿದೆ. ರಾಯಗಢ ಜಿಲ್ಲೆಯ ಮೂರು ಪ್ಯಾಕೇಜ್‌ಗಳಲ್ಲಿ ಎರಡು ಪ್ಯಾಕೇಜ್‌ಗಳು (ಪಿ-2, ಪಿ-3) ಕ್ರಮವಾಗಿ ಶೇ.93 ಮತ್ತು ಶೇ.82 ರಷ್ಟು ಪೂರ್ಣಗೊಂಡಿವೆ. ಪ್ಯಾಕೇಜ್‌ನಲ್ಲಿ ಅರ್ಧಕ್ಕಿಂತ ಹೆಚ್ಚು ಕೆಲಸಗಳು (ಪಿ-1) ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದರು.
ಪನ್ವೇಲ್-ಇಂದಾಪುರ ಹಂತಕ್ಕೆ ಭೂಸ್ವಾಧೀನ ಮತ್ತು ಪರಿಸರ ಅನುಮತಿಗಳು ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ವಿಳಂಬಗೊಳಿಸಿದೆ. ಇದೀಗ ಈ ಎಲ್ಲ ಅಡೆತಡೆಗಳು ನಿವಾರಣೆಯಾಗಿದ್ದು, ಕರ್ನಾಳ ಅಭಯಾರಣ್ಯ ಪ್ರದೇಶದಲ್ಲಿನ ಮೇಲ್ಸೇತುವೆ ತೆಗೆದು ಪರಿಸರ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.
ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿಯ ಗೋವಾದಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಕೊಂಕಣದ ಪ್ರಮುಖ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಹೆದ್ದಾರಿಯಾಗಿದೆ. ಇದು ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ. ಅಲ್ಲದೆ, ಪ್ರಮುಖ ಕೈಗಾರಿಕಾ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇರುವುದರಿಂದ ಕೈಗಾರಿಕಾ ಅಭಿವೃದ್ಧಿಗೂ ಉತ್ತೇಜನ ದೊರೆಯಲಿದೆ ಎಂದು ಸಚಿವರು ಹೇಳಿದರು.
15 ಸಾವಿರ ಕೋಟಿ ಮೌಲ್ಯದ ಮೂರು ಹೊಸ ಯೋಜನೆಗಳನ್ನು ಸಚಿವರು ಘೋಷಿಸಿದರು. ಇವುಗಳಲ್ಲಿ ರೂ. 1,200 ಕೋಟಿ ಕಲಾಂಬೋಲಿ ಜಂಕ್ಷನ್ ಯೋಜನೆ, ರೂ. 1,200 ಕೋಟಿ ಪಗೋಡ್ ಜಂಕ್ಷನ್ ಚೌಕದಿಂದ ಗ್ರೀನ್‌ಫೀಲ್ಡ್ ಹೆದ್ದಾರಿ ಯೋಜನೆ ಮತ್ತು ರೂ. 13,000 ಕೋಟಿ JNPA ಮೂಲಕ ದೆಹಲಿಯನ್ನು ಸಂಪರ್ಕಿಸುವ ಮೋರ್ಬೆ - ಕರಂಜಾಡೆ ಹೆದ್ದಾರಿ ಈ ಯೋಜನೆಗಳು ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು.
ರಾಯಗಡ ಜಿಲ್ಲೆಯ ಪಲಾಸ್ಪೆ ಗ್ರಾಮದಲ್ಲಿ 414.68 ಕೋಟಿ ಮತ್ತು 63,900 ಕಿ.ಮೀ ಮೌಲ್ಯದ ಮೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಗುರುವಾರ ಬೆಳಗ್ಗೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳು ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರ ಮತ್ತು ದಿಘಿಯ ಎರಡು ಬಂದರುಗಳಲ್ಲಿ ಆರ್ಥಿಕ ಚೈತನ್ಯವನ್ನು ಹೆಚ್ಚಿಸುತ್ತವೆ, ಆದರೆ ಪನ್ವೆಲ್‌ನಿಂದ ಕಾಸು ಹೆದ್ದಾರಿಯ ಕಾಂಕ್ರೀಟೀಕರಣವು ಪ್ರಯಾಣವನ್ನು ವೇಗಗೊಳಿಸುತ್ತದೆ ಮತ್ತು ಇಂಧನವನ್ನು ಉಳಿಸುತ್ತದೆ ಎಂದು ತಿಳಿಸಲಾಗಿದೆ.












Click it and Unblock the Notifications