ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Budget 2023: ದೇಶದ ಆರ್ಥಿಕ ಭವಿಷ್ಯ ನಿರ್ಧರಿಸುವ ಕೇಂದ್ರ ಬಜೆಟ್‌ ತಂಡದಲ್ಲಿ ಯಾರೆಲ್ಲಾ ಇದ್ದಾರೆ? ಅವರ ಹಿನ್ನೆಲೆ ಏನು? ತಿಳಿಯಿರಿ

ಬಜೆಟ್ ತಯಾರಿಕೆ ಪ್ರಕ್ರಿಯೆಯು ಹೆಚ್ಚಾಗಿ ಅಧಿಕಾರಿ ವರ್ಗದವರಿಗೆ ಸಂಬಂದಿಸಿದ್ದು. ಅವರು ದೇಶಕ್ಕೆ ಹಣಕಾಸಿನ ದಾಖಲೆಯನ್ನು ರೂಪಿಸಲು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. ಕೇಂದ್ರ ಬಜೆಟ್ 2023-24 ರ ಹಿಂದಿನ ಪ್ರಮುಖ ವ್ಯಕ್ತಿಗಳ ಬಗ್ಗೆ ತಿಳಿಯಿರಿ.

|
Google Oneindia Kannada News

ನವದೆಹಲಿ, ಜನವರಿ 2023: ಇಡೀ ದೇಶವು ಈ ಹಣಕಾಸು ವರ್ಷದ ಬಜೆಟ್‌ನ ಘೋಷಣೆಗಾಗಿ ಕಾಯುತ್ತಿದೆ. ಅಧಿಕಾರಿಗಳು ಮತ್ತು ಸಲಹೆಗಾರರ ಸಹಾಯದಿಂದ ಹಣಕಾಸು ಸಚಿವರು ಬಜೆಟ್ ಅನ್ನು ಸಿದ್ಧಪಡಿಸುತ್ತಾರೆ. ಬಜೆಟ್ ತಯಾರಿಕೆ ಪ್ರಕ್ರಿಯೆಯು ಹೆಚ್ಚಾಗಿ ಅಧಿಕಾರಿ ವರ್ಗದವರಿಗೆ ಸಂಬಂದಿಸಿದ್ದು. ಅವರು ದೇಶಕ್ಕೆ ಹಣಕಾಸಿನ ದಾಖಲೆಯನ್ನು ರೂಪಿಸಲು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. ಕೇಂದ್ರ ಬಜೆಟ್ 2023-24 ರ ಹಿಂದಿನ ಪ್ರಮುಖ ವ್ಯಕ್ತಿಗಳ ಬಗ್ಗೆ ತಿಳಿಯಿರಿ.

Budget 2023: ಕೇಂದ್ರ ಬಜೆಟ್ ಪ್ರಯೋಜನಗಳನ್ನು ಜನರಿಗೆ ತಿಳಿಸಲು ಬಿಜೆಪಿಯಿಂದ 12 ದಿನಗಳ ಅಭಿಯಾನ Budget 2023: ಕೇಂದ್ರ ಬಜೆಟ್ ಪ್ರಯೋಜನಗಳನ್ನು ಜನರಿಗೆ ತಿಳಿಸಲು ಬಿಜೆಪಿಯಿಂದ 12 ದಿನಗಳ ಅಭಿಯಾನ

 ಟಿ ವಿ ಸೋಮನಾಥನ್ - ಹಣಕಾಸು ಕಾರ್ಯದರ್ಶಿ

ಟಿ ವಿ ಸೋಮನಾಥನ್ - ಹಣಕಾಸು ಕಾರ್ಯದರ್ಶಿ

ಟಿ ವಿ ಸೋಮನಾಥನ್ ಅವರು 1987 ರ ಬ್ಯಾಚ್‌ನ ತಮಿಳುನಾಡು ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಇದಕ್ಕೂ ಮೊದಲು ಅವರು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು 2015 ಮತ್ತು 2017 ರ ನಡುವೆ ಪಿಎಂ ಮೋದಿ ಅವರ ಜಂಟಿ ಕಾರ್ಯದರ್ಶಿಯಾಗಿದ್ದರು. ಅವರು 80 ಕ್ಕೂ ಹೆಚ್ಚು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ ಮತ್ತು ಲೇಖಕರಾಗಿದ್ದಾರೆ. ಅರ್ಥಶಾಸ್ತ್ರ ಮತ್ತು ಹಣಕಾಸು ಕುರಿತು ಎರಡು ಪುಸ್ತಕಗಳು ಬರೆದಿದ್ದಾರೆ. ಅವರು ವಿಶ್ವ ಬ್ಯಾಂಕ್‌ನ ಬಜೆಟ್ ನೀತಿ ಗುಂಪಿನ ವ್ಯವಸ್ಥಾಪಕರಾಗಿ ನೇಮಕಗೊಂಡಿದ್ದಾರೆ. ಜಾಗತಿಕ ಸಂಸ್ಥೆಯಲ್ಲಿ ಅವರನ್ನು ಅತ್ಯಂತ ಕಿರಿಯ ವಲಯ ವ್ಯವಸ್ಥಾಪಕರನ್ನಾಗಿ ನೇಮಿಸಲಾಗಿದೆ.

 ಸಂಜಯ್ ಮಲ್ಹೋತ್ರಾ - ಕಂದಾಯ ಕಾರ್ಯದರ್ಶಿ

ಸಂಜಯ್ ಮಲ್ಹೋತ್ರಾ - ಕಂದಾಯ ಕಾರ್ಯದರ್ಶಿ

ರಾಜಸ್ಥಾನ ಕೇಡರ್‌ನ 1990 ರ ಬ್ಯಾಚ್ ಐಎಎಸ್ ಅಧಿಕಾರಿ, ಸಂಜಯ್ ಮಲ್ಹೋತ್ರಾ ಅವರು ಕಂದಾಯ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೊದಲು REC ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಐಐಟಿ ಕಾನ್ಪುರದಿಂದ ಪದವೀಧರರು ಮತ್ತು ಪ್ರಿನ್ಸ್‌ಟನ್‌ನಿಂದ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮಲ್ಹೋತ್ರಾ ಅವರು ಹಣಕಾಸು ಮತ್ತು ತೆರಿಗೆ, ವಿದ್ಯುತ್, ಕೈಗಾರಿಕೆಗಳು ಮತ್ತು ಮಾಹಿತಿ ತಂತ್ರಜ್ಞಾನದಂತಹ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡರಲ್ಲೂ ವಿದ್ಯುತ್ ಕ್ಷೇತ್ರದಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ.

 ವಿ ಅನಂತ ನಾಗೇಶ್ವರನ್ - ಮುಖ್ಯ ಆರ್ಥಿಕ ಸಲಹೆಗಾರ

ವಿ ಅನಂತ ನಾಗೇಶ್ವರನ್ - ಮುಖ್ಯ ಆರ್ಥಿಕ ಸಲಹೆಗಾರ

ವಿ ಅನಾಥ ನಾಗೇಶ್ವರನ್ ಅವರನ್ನು ಜನವರಿ 28, 2022 ರಂದು ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಲಾಯಿತು. IIM ಅಹಮದಾಬಾದ್ ಮತ್ತು ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ, ಅವರು ಲೇಖಕ, ಬರಹಗಾರ, ಶಿಕ್ಷಕ ಮತ್ತು ಸಲಹೆಗಾರರಂತಹ ಹಲವಾರು ಹುದ್ದೆಗಳನ್ನು ಹೊಂದಿದ್ದರು. 2019-2021 ರ ನಡುವೆ ಅವರು ಭಾರತದ ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಅರೆಕಾಲಿಕ ಸದಸ್ಯರೂ ಆಗಿದ್ದರು.

 ಅಜಯ್ ಸೇಠ್ - ಕಾರ್ಯದರ್ಶಿ, ಆರ್ಥಿಕ ವ್ಯವಹಾರಗಳ ಇಲಾಖೆ

ಅಜಯ್ ಸೇಠ್ - ಕಾರ್ಯದರ್ಶಿ, ಆರ್ಥಿಕ ವ್ಯವಹಾರಗಳ ಇಲಾಖೆ

ಐಎಎಸ್ 1987ರ ಬ್ಯಾಚ್, ಕರ್ನಾಟಕ ಕೇಡರ್‌ಗೆ ಸೇರಿದ ಅಜಯ್ ಸೇಠ್ ಅವರು ಸಾರ್ವಜನಿಕ ಹಣಕಾಸು ಮತ್ತು ಸಾಮಾಜಿಕ ಕ್ಷೇತ್ರದಲ್ಲಿ 33 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅವರು ಬಜೆಟ್, ತೆರಿಗೆ, ವಿದೇಶಿ ಹೂಡಿಕೆ ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವ್ಯಾಪಕವಾಗಿ ವ್ಯವಹರಿಸಿದ್ದಾರೆ. ಕರ್ನಾಟಕ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ವಾಣಿಜ್ಯ ತೆರಿಗೆಗಳ ಆಯುಕ್ತರ ಹುದ್ದೆಗಳನ್ನು ಒಳಗೊಂಡಂತೆ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದಾರೆ. 2013 ರಲ್ಲಿ ಸಾರ್ವಜನಿಕ ಆಡಳಿತದಲ್ಲಿನ ಶ್ರೇಷ್ಠತೆಗಾಗಿ ಪ್ರಧಾನ ಮಂತ್ರಿಯ ಪ್ರಶಸ್ತಿಯನ್ನು ಸ್ವೀಕರಿಸಿದ ಸೇಥ್, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ.

 ತುಹಿನ್ ಕಾಂತಾ ಪಾಂಡೆ - ಕಾರ್ಯದರ್ಶಿ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ

ತುಹಿನ್ ಕಾಂತಾ ಪಾಂಡೆ - ಕಾರ್ಯದರ್ಶಿ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ

ತುಹಿನ್ ಪಾಂಡೆ ಒಡಿಶಾ ಕೇಡರ್‌ನ 1987 ರ ಬ್ಯಾಚ್ ಐಎಎಸ್ ಆಗಿದ್ದಾರೆ. ಪಾಂಡೆ ಅವರು ಕೈಗಾರಿಕಾ ಅಭಿವೃದ್ಧಿ, ಹಣಕಾಸು ನಿರ್ವಹಣೆ ಮತ್ತು ಸಾರ್ವಜನಿಕ ಹಣಕಾಸು ಕ್ಷೇತ್ರಗಳಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ. 2009 ರಲ್ಲಿ, ಅವರು ಐದು ವರ್ಷಗಳ ಕಾಲ ಯೋಜನಾ ಆಯೋಗದಲ್ಲಿ ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಂಡರು. ನಂತರ ಅವರು ಎರಡು ವರ್ಷಗಳ ಅವಧಿಗೆ ಕ್ಯಾಬಿನೆಟ್ ಸೆಕ್ರೆಟರಿಯೇಟ್ನಲ್ಲಿ ಜಂಟಿ ಕಾರ್ಯದರ್ಶಿ ಸ್ಥಾನವನ್ನು ಪಡೆದರು.

 ವಿವೇಕ್ ಜೋಶಿ - ಕಾರ್ಯದರ್ಶಿ, ಹಣಕಾಸು ಸೇವೆಗಳ ಇಲಾಖೆ

ವಿವೇಕ್ ಜೋಶಿ - ಕಾರ್ಯದರ್ಶಿ, ಹಣಕಾಸು ಸೇವೆಗಳ ಇಲಾಖೆ

1989 ರ ಬ್ಯಾಚ್‌ನ ಐಎಎಸ್ ಅಧಿಕಾರಿ ಡಾ ವಿವೇಕ್ ಜೋಶಿ ಅವರು ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿಯಾಗಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ನೀತಿಗಳು, ಯೋಜನೆಗಳು ಮತ್ತು ಶಾಸನಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಅವರು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಂಡಳಿಯ ಸದಸ್ಯರೂ ಆಗಿದ್ದಾರೆ. ಜೋಶಿ ಅವರು ಈ ಹಿಂದೆ ಸುಮಾರು ನಾಲ್ಕು ವರ್ಷಗಳ ಕಾಲ ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರಾಗಿದ್ದರು.

English summary
The budget making process is mostly related to bureaucrats who present their views to shape the fiscal record for the country. Know about the key figures behind Union Budget 2023-24
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X