ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Union Budget 2023: ಬಜೆಟ್ ದಿನಾಂಕ, ಸಮಯ, ಲೈವ್ ಎಲ್ಲಿ ವೀಕ್ಷಿಸಬೇಕು?

ಕೇಂದ್ರ ಬಜೆಟ್ 2023: ದಿನಾಂಕ, ಸಮಯ, ಸೀತಾರಾಮನ್ ಅವರ ಭಾಷಣವನ್ನು ಲೈವ್ ಆಗಿ ಎಲ್ಲಿ ವೀಕ್ಷಿಸಬೇಕು?

|
Google Oneindia Kannada News

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023ರ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು (ಬುಧವಾರ) ಬೆಳಿಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ. ಇದು ಏಪ್ರಿಲ್ 1 ರಿಂದ ಪ್ರಾರಂಭವಾಗುವ ಆರ್ಥಿಕ ವರ್ಷಕ್ಕೆ ಸೀತಾರಾಮನ್ ಅವರ ಐದನೇ ನೇರ ಬಜೆಟ್ ಆಗಿದೆ. ಹಿಂದಿನ ಎರಡರಂತೆ ಈ ಬಾರಿಯೂ 2023-24 ರ ಕೇಂದ್ರ ಬಜೆಟ್ ಅನ್ನು ಕಾಗದರಹಿತ ರೂಪದಲ್ಲಿ ವಿತರಿಸಲಾಗುತ್ತದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಮೋದಿ ಸರ್ಕಾರದ ಕೊನೆಯ ಪೂರ್ಣ ಬಜೆಟ್ ಇದಾಗಿದೆ. ಇಂದು (ಜನವರಿ 31) ಆರ್ಥಿಕ ಸಮೀಕ್ಷೆಯ ಮಂಡನೆಯೊಂದಿಗೆ ನಾಳಿನ ಬಜೆಟ್ ಮಂಡನೆಗೆ ವೇದಿಕೆ ಸಿದ್ಧವಾಗುತ್ತಿದೆ. ಯೂನಿಯನ್ ಬಜೆಟ್ 2023 ಲೈವ್ ಅನ್ನು ಎಲ್ಲಿ ವೀಕ್ಷಿಸಬೇಕು ಎನ್ನುವುದನ್ನು ಇಲ್ಲಿ ತಿಳಿಯಿರಿ.

ಬಜೆಟ್ ಲೈವ್ ಅನ್ನು ಎಲ್ಲಿ ವೀಕ್ಷಿಸಬೇಕು?

ಬಜೆಟ್ ಲೈವ್ ಅನ್ನು ಎಲ್ಲಿ ವೀಕ್ಷಿಸಬೇಕು?

2023-2024ರ ಆರ್ಥಿಕ ವರ್ಷಕ್ಕೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್‌ನ ನೇರ ಪ್ರಸ್ತುತಿಯನ್ನು ಸಂಸದ್ ಟಿವಿ ಮತ್ತು ದೂರದರ್ಶನದಲ್ಲಿ ವೀಕ್ಷಿಸಬಹುದು. ಲೈವ್ ಟೆಲಿಕಾಸ್ಟ್ ಅವರ ಯೂಟ್ಯೂಬ್ ಚಾನೆಲ್‌ಗಳಲ್ಲಿಯೂ ಲಭ್ಯವಿರುತ್ತದೆ. ಪತ್ರಿಕಾ ಮಾಹಿತಿ ಬ್ಯೂರೋ (PIB) ಕೂಡ ತಮ್ಮ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಜೆಟ್ 2023 ಅನ್ನು ಸ್ಟ್ರೀಮ್ ಮಾಡುತ್ತದೆ. ಜೊತೆಗೆ ಜನರು ಇತರ ಸುದ್ದಿ ಚಾನಲ್‌ಗಳು ಮತ್ತು ಯೂಟ್ಯೂಬ್‌ನಲ್ಲಿಯೂ ವೀಕ್ಷಿಸಬಹುದು.

ಯೂನಿಯನ್ ಬಜೆಟ್‌ನ ಲೈವ್ ಅಪ್‌ಡೇಟ್‌ಗಳು ಮತ್ತು ವಿವರವಾದ ವಿಶ್ಲೇಷಣೆಯನ್ನು ಓದಲು, ಒನ್‌ಇಂಡಿಯಾ ಕನ್ನಡ (Oneindia kannada) ವೆಬ್‌ಸೈಟ್ ಗೂ ಭೇಟಿ ನೀಡಬಹುದು.

ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್

ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್

ಸಂವಿಧಾನ ಸೂಚಿಸಿದಂತೆ ವಾರ್ಷಿಕ ಹಣಕಾಸು ಹೇಳಿಕೆ (ಸಾಮಾನ್ಯವಾಗಿ ಬಜೆಟ್ ಎಂದು ಕರೆಯಲಾಗುತ್ತದೆ), ಅನುದಾನದ ಬೇಡಿಕೆ (ಡಿಜಿ), ಹಣಕಾಸು ಮಸೂದೆ ಇತ್ಯಾದಿ ಸೇರಿದಂತೆ ಎಲ್ಲಾ 14 ಕೇಂದ್ರ ಬಜೆಟ್ ದಾಖಲೆಗಳು "ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್" ನಲ್ಲಿ ಲಭ್ಯವಿರುತ್ತವೆ. ಸಂಸತ್ತಿನ ಸದಸ್ಯರು ಮತ್ತು ಸಾರ್ವಜನಿಕರು ಬಜೆಟ್ ದಾಖಲೆಗಳನ್ನು ಉಚಿತವಾಗಿ ಇಲ್ಲಿ ಪಡೆಯಬಹುದು.

ಬಜೆಟ್ ದಾಖಲೆಗಳು ಅಪ್ಲಿಕೇಶನ್‌ನಲ್ಲಿ ಲಭ್ಯ

ಬಜೆಟ್ ದಾಖಲೆಗಳು ಅಪ್ಲಿಕೇಶನ್‌ನಲ್ಲಿ ಲಭ್ಯ

ಅಪ್ಲಿಕೇಶನ್ ದ್ವಿಭಾಷಾ (ಇಂಗ್ಲಿಷ್ ಮತ್ತು ಹಿಂದಿ) ಮತ್ತು Android ಮತ್ತು iOS ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ. ಇದನ್ನು ಯೂನಿಯನ್ ಬಜೆಟ್ ವೆಬ್ ಪೋರ್ಟಲ್ www.indiabudget.gov.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಸಚಿವಾಲಯ ಹೇಳಿದೆ. ಫೆಬ್ರವರಿ 1, 2023 ರಂದು ಸಂಸತ್ತಿನಲ್ಲಿ ಹಣಕಾಸು ಸಚಿವರು ಬಜೆಟ್ ಭಾಷಣವನ್ನು ಪೂರ್ಣಗೊಳಿಸಿದ ನಂತರ ಬಜೆಟ್ ದಾಖಲೆಗಳು ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತವೆ ಎಂದು ಅದು ಹೇಳಿದೆ.

ಕಳೆದ ಕೇಂದ್ರ ಬಜೆಟ್‌ನ ಒಟ್ಟು ಮೊತ್ತ

ಕಳೆದ ಕೇಂದ್ರ ಬಜೆಟ್‌ನ ಒಟ್ಟು ಮೊತ್ತ

ಕಳೆದ ವರ್ಷದ ಬಜೆಟ್‌ನಲ್ಲಿ, 2021-22ರ ಬಜೆಟ್‌ನ ಪರಿಷ್ಕೃತ ಅಂದಾಜಿಗಿಂತ 4.6 ಪ್ರತಿಶತದಷ್ಟು ಏರಿಕೆಯನ್ನು ತೋರಿಸುವ ಮೂಲಕ 2022-23ರಲ್ಲಿ 39,44,909 ಕೋಟಿ ರೂ.ಗಳನ್ನು ಖರ್ಚು ಮಾಡಲು ಸರ್ಕಾರ ಪ್ರಸ್ತಾಪಿಸಿತ್ತು. ಈ ಬಾರಿ ಬಜೆಟ್ ಮೊತ್ತ ನಾಳೆ ತಿಳಿಯಲಿದೆ.

English summary
Union Budget 2023: Date, Time, Where to Watch Sitharaman's Speech Live?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X